ಆರ್‌ಸಿಬಿಗೆ ಡೇಲ್‌ ಸ್ಟೇನ್‌: ಬೌಲಿಂಗ್‌ಗೆ ತುಂಬುವರೇ ಬಲ?

ಶನಿವಾರ, ಏಪ್ರಿಲ್ 20, 2019
26 °C

ಆರ್‌ಸಿಬಿಗೆ ಡೇಲ್‌ ಸ್ಟೇನ್‌: ಬೌಲಿಂಗ್‌ಗೆ ತುಂಬುವರೇ ಬಲ?

Published:
Updated:

ಬೆಂಗಳೂರು: ಪ್ರಸಕ್ತ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್‌ ಬೆಂಗಳೂರು ತಂಡವು ಆಸ್ಟ್ರೇಲಿಯನ್‌ ಬೌಲರ್‌ ನಾಥನ್ ಕೌಲ್ಟರ್-ನೈಲ್ ಬದಲಿಗೆ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್‌ ಸ್ಟೇನ್‌ ಅವರನ್ನು ಬದಲಾವಣೆ ಆಧಾರದಲ್ಲಿ ಪಡೆದುಕೊಂಡಿದೆ.

ಸ್ಟೇನ್‌ ಅವರು ಏಪ್ರಿಲ್‌ 19ರಂದು ಕೋಲ್ಕತಾ ವಿರುದ್ಧದ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ. ಸ್ಟೇಲ್‌ ಆಗಮನದೊಂದಿಗೆ ಆರ್‌ಸಿಬಿ ತಂಡದ ಬೌಲಿಂಗ್‌ ವಿಭಾಗ ಬಲವರ್ಧನೆಗೊಳ್ಳುವ ನಿರೀಕ್ಷೆಗಳಿವೆ. 

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾತನ್‌ ಕೌಂಟರ್‌–ನೈಲ್ ಅವರು ವಿಶ್ರಾಂತಿಗೆ ತೆರಳುತ್ತಿದ್ದು, ಅವರ ಬದಲಿಗೆ ಆರ್‌ಸಿಬಿ ತಂಡ ಡೇಲ್‌ ಸ್ಟೇನ್‌ ಅವರನ್ನು ಖರೀದಿಸಿದೆ. 2018ರ ಐಪಿಎಲ್‌ ಬಿಡ್ಡಿಂಗ್‌ನಲ್ಲಿ ಆರ್‌ಸಿಬಿ ತಂಡವು ನಾತನ್‌ ಕೌಂಟರ್‌–ನೈಲ್‌ ಅವರನ್ನು ₹2.2 ಕೋಟಿ ಮೊತ್ತಕ್ಕೆ ಖರೀದಿಸಿತ್ತು. ಅದೇ ಮೊತ್ತಕ್ಕೆ ಸದ್ಯ ಡೇಲ್‌ ಸ್ಟೇನ್‌ ಅವರನ್ನೂ ಖರೀದಿ ಮಾಡಲಾಗಿದೆ.

ಸ್ಟೇನ್‌ ಅವರು 2008–10ರಲ್ಲಿ ಆರ್‌ಸಿಬಿ ಪರ 27 ವಿಕೆಟ್‌ ಪಡೆದಿದ್ದರು. 2016ರ ಐಪಿಎಲ್‌ನಲ್ಲಿ ಅವರು, ಗುಜರಾತ್‌ ಲಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು.

ಐಪಿಎಲ್‌ ನಿಯಮಾವಳಿಗಳ ಪ್ರಕಾರ ಬದಲಾವಣೆ ಆಧಾರದಲ್ಲಿ ಆಟಗಾರರನ್ನು ಖರೀದಿಸುವಂತಿದ್ದರೆ, ಮೂಲ ಆಟಗಾರನಿಗೆ ನಿಗದಿಯಾದ ಹಣದಲ್ಲೇ ಮತ್ತೊಬ್ಬ ಆಟಗಾರನನ್ನೂ ಖರೀದಿಸಬೇಕು. 

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !