ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆದಿತ್ಯ ಬಿರ್ಲಾ ಒಕ್ಕೂಟವು ಖರೀದಿಸಿದೆ. ಈ ನಡುವೆ ಆರ್ಸಿಬಿ ತಂಡದ ಹೆಸರು ಬದಲಿಸಲಾಗುತ್ತದೆಯೇ? ಎಂಬುದರ ಕುರಿತು ಚರ್ಚೆಗಳು ಆರಂಭವಾಗಿದ್ದವು. ಈ ಕುರಿತು ಫ್ರಾಂಚೈಸಿಯ ಸಿಇಒ ಆರ್ಯಮಾನ್ ಬಿರ್ಲಾ ಅವರ ಸಹೋದರಿ ಅನನ್ಯಾ ಬಿರ್ಲಾ ಅವರು ಸ್ಪಷ್ಟನೆ ನೀಡಿದ್ದಾರೆ.

ಇದೇ ಮಾರ್ಚ್ 28ರಂದು ತವರಿನಲ್ಲಿ ಆರ್ಸಿಬಿ ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. 2026ರ 19ನೇ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡವು ತನ್ನ ಹೊಸ ಮಾಲೀಕತ್ವದಲ್ಲಿ ಮುನ್ನಡೆಯಲಿದೆ. ಇದರ ಬೆನ್ನಲ್ಲೇ ತಂಡದ ಹೆಸರನ್ನು ಬದಲಿಸುವ ಸಾಧ್ಯತೆಯೂ ಇದೆ ಎಂಬ ವರದಿಗಳು ಹರಿದಾಡುತ್ತಿದ್ದವು.

ಫ್ರಾಂಚೈಸಿಯ ಸಿಇಒ ಆರ್ಯಮಾನ್ ಬಿರ್ಲಾ ಅವರ ಸಹೋದರಿ ಅನನ್ಯಾ ಬಿರ್ಲಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಆರ್ಸಿಬಿ ತಂಡದ ಹೆಸರು ಬದಲಾವಣೆ ಕುರಿತು ಸ್ಟೋರಿ ಹಂಚಿಕೊಂಡಿದ್ದಾರೆ. ಸ್ಟೋರಿಯಲ್ಲಿ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈಗಿರುವ ಹೆಸರನ್ನು ಬದಲಾಯಿಸುವುದಿಲ್ಲ, ಇರುವ ಹೆಸರಿನಲ್ಲಿಯೇ ತಂಡ ಮುನ್ನಡೆಯಲಿದೆ’ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

‘ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ₹16,705 ಕೋಟಿಗೆ ಖರೀದಿಸಲಾಗಿದೆ. ಆದಿತ್ಯ ಬಿರ್ಲಾ ಗ್ರೂಪ್, ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ , ಬೋಲ್ಟ್ ವೆಂಚರ್ಸ್ ಮತ್ತು ಬ್ಲಾಕ್ಸ್ಟೋನ್ನ ಕಂಪನಿಗಳ ಸಹಭಾಗಿತ್ವವಿದೆ’ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ಆದಿತ್ಯ ಬಿರ್ಲಾ ಒಕ್ಕೂಟವು ಆರ್ಸಿಬಿಯ ಪುರುಷ ಮತ್ತು ಮಹಿಳಾ ತಂಡ ಎರಡರ ಮಾಲೀಕತ್ವ ಮತ್ತು ನಿರ್ವಹಣೆಯನ್ನು ವಹಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.