ಚಿನ್ನಸ್ವಾಮಿ ಕ್ರೀಡಾಂಗಣವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತವರು ಮೈದಾನ. ನಿನ್ನೆಯ (ಏಪ್ರಿಲ್ 18) ಪಂದ್ಯದ ಮೂಲಕ ಚಿನ್ನಸ್ವಾಮಿ ಮೈದಾನ ಒಂದರಲ್ಲೇ ಆರ್ಸಿಬಿ ತಂಡವು 100ನೇ ಪಂದ್ಯ ಆಡಿದ ದಾಖಲೆ ಮಾಡಿದೆ.

ಶನಿವಾರ ಇಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಮೂಲಕ ಚಿನ್ನಸ್ವಾಮಿ ಕ್ರೀಡಾಂಗಣವು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ತಂಡದ 100 ಪಂದ್ಯಗಳಿಗೆ ಆತಿಥ್ಯ ವಹಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಪಂದ್ಯದಲ್ಲಿ ಆರ್ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಅನುಭವಿಸಿದೆ.

ಐಪಿಎಲ್ ಇತಿಹಾಸದಲ್ಲೇ ಒಂದೇ ಮೈದಾನದಲ್ಲಿ 100 ಪಂದ್ಯವಾಡಿದ ದಾಖಲೆಯನ್ನು ಯಾವುದೇ ತಂಡ ಮಾಡಿಲ್ಲ. ಇಲ್ಲಿ ನಡೆದ ಆರ್ಸಿಬಿ ತಂಡದ 100 ಪಂದ್ಯಗಳ ಪೈಕಿ 1, 50 ಹಾಗೂ 100ನೇ ಪಂದ್ಯದಲ್ಲಿ ಆರ್ಸಿಬಿ ಸೋಲು ಅನುಭವಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಆರಂಭದ ಮೊದಲ ಆವೃತಿಯ ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸಿತ್ತು. ಆ ಪಂದ್ಯದಲ್ಲಿ 140 ರನ್ಗಳ ಬೃಹತ್ ಅಂತರದ ಸೋಲು ಅನುಭವಿಸಿತ್ತು. ಈ ಮೈದಾನದಲ್ಲಿ ಆರ್ಸಿಬಿ ಆಡಿದ 50ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಅನುಭವಿಸಿತ್ತು.

ಇದೀಗ 100ನೇ ಪಂದ್ಯದಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತಿದೆ. ಈ ಮೂಲಕ ಟಿ20 ಇತಿಹಾಸದಲ್ಲಿ ಒಂದೇ ಮೈದಾನದಲ್ಲಿ 1, 50 ಹಾಗೂ 100ನೇ ಪಂದ್ಯವನ್ನು ಸೋತ ತಂಡ ಎಂಬ ಬೇಡದ ದಾಖಲೆಯನ್ನು ಆರ್ಸಿಬಿ ತನ್ನದಾಗಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.