ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರು ಚಿಕ್ಕವರಿದ್ದಾಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಪ್ಪನೊಂದಿಗೆ ಬಂದು ಆರ್ಸಿಬಿ ಪಂದ್ಯ ವೀಕ್ಷಿಸುತ್ತಿದ್ದರು. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ ಅವಂತಹ ದಿಗ್ಗಜರ ಆಟವನ್ನು ಆನಂದಿಸುತ್ತಿದ್ದರು. ಇದೀಗ ಅದೇ ವಿರಾಟ್ ಅವರೊಂದಿಗೆ ಡ್ರೆಸಿಂಗ್ ರೂಮ್ ಹಂಚಿಕೊಳ್ಳುತ್ತಿದ್ದಾರೆ. ತಮ್ಮ ನೆಚ್ಚಿನ ಆರ್ಸಿಬಿ ತಂಡವು ಎರಡು ಪ್ರಶಸ್ತಿ ಗೆಲ್ಲಲು ಉಪಯುಕ್ತ ಕಾಣಿಕೆ ನೀಡಿದ್ದಾರೆ. ಅದರಲ್ಲೂ ಈ ಬಾರಿ ಆರಂಭಿಕರಾಗಿ ಆಡಿದ್ದ ಫಿಲ್ ಸಾಲ್ಟ್ ಸಫಲರಾಗಿರಲಿಲ್ಲ. ಅವರು ಗಾಯಗೊಂಡಾಗ ಆಡಿದ್ದ ಜೇಕಬ್ ಬೆಥೆಲ್ ಕೂಡ ರನ್ ಗಳಿಸಲಿಲ್ಲ. ಆ ಸಂದರ್ಭದಲ್ಲಿ ದೇವದತ್ತ ಅವರು ವಿರಾಟ್ ಕೊಹ್ಲಿಯೊಂದಿಗೆ ಜೊತೆಯಾಟಗಳನ್ನು ಕಟ್ಟಿದರು. ಇನಿಂಗ್ಸ್ಗೆ ಬಲ ತುಂಬಿದರು. ಕಳೆದ ಋತುವಿನಲ್ಲಿ ಅವರು ರಣಜಿ ಟ್ರೋಫಿ, ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟೂರ್ನಿಗಳಲ್ಲಿ ರನ್ ಹೊಳೆ ಹರಿಸಿದ್ದರು. ರಣಜಿ ಟೂರ್ನಿಯ ಫೈನಲ್ನಲ್ಲಿ ಕರ್ನಾಟಕದ ನಾಯಕರಾಗಿದ್ದರು.

ರಜತ್ ಪಾಟೀದಾರ್ ಅವರು ಸೋಮವಾರ 33ನೇ ವಸಂತಕ್ಕೆ ಕಾಲಿಟ್ಟರು. ವಿರಾಟ್ ನಂತರ ನಾಯಕರನ್ನಾಗಿ ಯಾರನ್ನು ಸಿದ್ಧಗೊಳಿಸಬೇಕು ಎಂಬ ಪ್ರಶ್ನೆಗೆ ಸಿಕ್ಕ ಉತ್ತರ ರಜತ್. ಆದರೆ ಅವರ ಅದೃಷ್ಟವೋ, ಆರ್ಸಿಬಿಯ ಸೌಭಾಗ್ಯವೋ ಗೊತ್ತಿಲ್ಲ. ಅವರು ನಾಯಕತ್ವ ವಹಿಸಿಕೊಂಡ ವರ್ಷವೇ ತಂಡವು ಚಾಂಪಿಯನ್ ಆಯಿತು. 17 ಆವೃತ್ತಿಗಳಲ್ಲಿ ವಿರಾಟ್ ಸೇರಿದಂತೆ ಹಲವು ದಿಗ್ಗಜರು ನಾಯಕತ್ವ ವಹಿಸಿದಾಗಲೂ ಒಲಿಯದ ಪ್ರಶಸ್ತಿ ರಜತ್ ಅವರಿಗೆ ಲಭಿಸಿತು. ಅಷ್ಟೇ ಅಲ್ಲ. ಸತತ ಎರಡನೇ ಸಲ ಗೆದ್ದು ಮಹೆಂದ್ರಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ಅವರ ಸಾಲಿನಲ್ಲಿ ಬಂದು ನಿಂತರು. ಆದರೆ ರಜತ್ ಅವರು ಈ ಮಟ್ಟಕ್ಕೆ ಬರಲು ಕಠಿಣ ಹಾದಿ ಸವೆಸಿದರು. ಮಧ್ಯಪ್ರದೇಶದ ಇಂದೋರ್ನ ರಜತ್ ರಣಜಿ ಟೂರ್ನಿಯಲ್ಲಿ ಉತ್ತಮವಾಗಿ ಆಡಿದ್ದರು. ಅದರಿಂದಾಗಿ 2021ರಲ್ಲಿ ಆರ್ಸಿಬಿಯು ₹20 ಲಕ್ಷ ನೀಡಿ ಅವರನ್ನು ಖರೀದಿಸಿತು. ಆದರೆ ಆ ವರ್ಷ ಅವರು ಗಳಿಸಿದ್ದು 71 ರನ್ ಮಾತ್ರ. ಅದರಿಂದಾಗಿ ರಿಲೀಸ್ ಆದರು. 2022ರ ಹರಾಜು ಪ್ರಕ್ರಿಯೆಯಲ್ಲಿ ಅವರನ್ನು ಯಾವುದೇ ಫ್ರ್ಯಾಂಚೈಸಿಯು ಖರೀದಿಸಲಿಲ್ಲ. ನಂತರದ ಅವಧಿಯಲ್ಲಿ ಆರ್ಸಿಬಿಯಲ್ಲಿ ಗಾಯಗೊಂಡಿದ್ದ ಆಟಗಾರನ ಬದಲಿಗೆ ಸ್ಥಾನ ಪಡೆದರು. ಅದೇ ವರ್ಷ ಎಲಿಮಿನೇಟರ್ನಲ್ಲಿ ಭರ್ಜರಿ ಶತಕ ಗಳಿಸಿದರು. ಆದರೆ ಗಾಯದ ಸಮಸ್ಯೆಯಿಂದ 2023ರಲ್ಲಿ ಆಡಲು ಸಾಧ್ಯವಾಗಲಿಲ್ಲ. 2024ರಲ್ಲಿ 15 ಪಂದ್ಯಗಳನ್ನು ಆಡಿ 395 ರನ್ ಗಳಿಸಿದರು. ನಂತರ ಅಚ್ಚರಿಯ ನಿರ್ಧಾರ ತೆಗೆದುಕೊಂಡ ಆರ್ಸಿಬಿಯು ಮೃದುಭಾಷಿ ಮತ್ತು ತೀಕ್ಷ್ಣ ಯೋಚನಾಲಹರಿಯ ರಜತ್ ಅವರಿಗೆ ನಾಯಕನ ಪಟ್ಟ ಕಟ್ಟಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-4-1060963737

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.