ಅಹಮದಾಬಾದ್: ಸಬರಮತಿ ನದಿಯ ದಡದ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ವಿರಾಟ್ ಕೊಹ್ಲಿ ‘ಹುಣ್ಣಿಮೆಯ ಚಂದ್ರ’ನಂತೆ ಕಂಗೊಳಿಸಿದರು. ತಮ್ಮ ಅಭಿಮಾನಿಗಳ ಮನಕ್ಕೆ ಜಯದ ತಂಪೆರೆದರು.

ಅವರ ಅಜೇಯ ಅರ್ಧಶತಕ (ಔಟಾಗದೇ 75;42ಎ) ನಡೆದ 19ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ರಜತ್ ಪಾಟೀದಾರ್ ಬಳಗವು ಐದು ವಿಕೆಟ್ಗಳಿಂದ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿತು. ಇದರೊಂದಿಗೆ ಸತತ ಎರಡನೇ ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಟಾಸ್ ಗೆದ್ದ ಪಾಟೀದಾರ್ ಫೀಲ್ಡಿಂಗ್ ಆಯ್ದುಕೊಂಡರು. ನಾಯಕ ನಿರ್ಧಾರವನ್ನು ಸಮರ್ಥಿಸುವಂತೆ ಆರ್ಸಿಬಿ ಬೌಲರ್ಗಳು ಪರಿಣಾಮಕಾರಿ ದಾಳಿ ಸಂಘಟಿಸಿದರು. ವೇಗಿ ಜೋಶ್ ಹೇಝಲ್ವುಡ್ (37ಕ್ಕೆ2) ಮತ್ತು ರಸಿಕ್ ಸಲಾಮ್ ದಾರ್ (27ಕ್ಕೆ3) ಅವರ ದಾಳಿ ಮತ್ತು ಫೀಲ್ಡರ್ಗಳ ಚುರುಕುತನದಿಂದಾಗಿ ಗುಜರಾತ್ ತಂಡವನ್ನು 8 ವಿಕೆಟ್ಗೆ 155 ರನ್ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತು. ವಾಷಿಂಗ್ಟನ್ ಸುಂದರ್ (ಔಟಾಗದೇ 50) ಅವರೊಬ್ಬರೇ ದಿಟ್ಟತನ ತೋರಿದರು.

ಗುರಿ ಬೆನ್ನಟ್ಟಿದ ಆರ್ಸಿಬಿ ತಂಡಕ್ಕೆ ವೆಂಕಟೇಶ ಅಯ್ಯರ್ (32;16ಎ) ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ಗೆ ಬಿರುಸಿನ 62 (27ಎ) ರನ್ ಸೇರಿಸಿ ಗೆಲುವಿಗೆ ಮುನ್ನುಡಿ ಬರೆದರು. ಆದರೆ, ಉತ್ತಮ ಲಯದಲ್ಲಿದ್ದ ವೆಂಕಟೇಶ್ ಅಯ್ಯರ್ ಅವರು ಮೊಹಮ್ಮದ್ ಸಿರಾಜ್ ಓವರ್ನಲ್ಲಿ ಕಗಿಸೊ ರಬಾಡ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರು. ನಂತರ ಬಂದ ಕನ್ನಡಿಗ ದೇವದತ್ತ ಪಡಿಕ್ಕಲ್ (1) ನಿರಾಸೆ ಮೂಡಿಸಿದರು. ರಬಾಡ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಅವರು ಬೌಂಡರಿ ಲೈನ್ನಲ್ಲಿ ಅರ್ಷದ್ ಖಾನ್ ಅವರಿಗೆ ಕ್ಯಾಚಿತ್ತರು.

ಅನುಭವಿ ಸ್ಪಿನ್ನರ್ ರಶೀದ್ ಖಾನ್ ಹಾಕಿದ 9ನೇ ಓವರ್ನಲ್ಲಿ ಪಾಟೀದಾರ್ (15) ಮತ್ತು ಕೃಣಾಲ್ ಪಾಂಡ್ಯ ಅವರ ವಿಕೆಟ್ ಬುಟ್ಟಿಗೆ ಹಾಕಿಕೊಂಡರು. 91 ರನ್ಗಳಿಗೆ 4 ವಿಕೆಟ್ ಕಳೆದುಕೊಂಡ ಆರ್ಸಿಬಿ ಪಾಳಯದಲ್ಲಿ ಆತಂಕ ಮನೆಮಾಡಿತು. ಆದರೆ, ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕೊಹ್ಲಿ ಮಾತ್ರ ಜವಾಬ್ದಾರಿಯುತವಾಗಿ ಆಡಿದರು. ತಂಡದ ರನ್ ವೇಗ ಕುಸಿತವಾಗದಂತೆ ನೋಡಿಕೊಂಡ ಅವರು 25 ಎಸೆತಗಳಲ್ಲಿ 50ರ ಗಡಿ ದಾಟಿದರು. ಇದು ಐಪಿಎಲ್ನಲ್ಲಿ ಅವರ ಅತಿ ವೇಗದ ಅರ್ಧಶತಕವಾಗಿದೆ. ಅವರ ಇನಿಂಗ್ಸ್ನಲ್ಲಿ ಒಂಬತ್ತು ಬೌಂಡರಿ ಮತ್ತು ಮೂರು ಸಿಕ್ಸರ್ ಒಳಗೊಂಡಿದ್ದವು.

ವಿರಾಟ್ ಮತ್ತು ಟಿಮ್ ಡೇವಿಡ್ (24;17ಎ) ಅವರು ಐದನೇ ವಿಕೆಟ್ ಜೊತೆಯಾಟದಲ್ಲಿ 41 ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು. ಟಿಮ್ ಡೇವಿಡ್ ಔಟಾದ ಬಳಿಕ ವಿರಾಟ್ ಅವರನ್ನು ಸೇರಿಕೊಂಡ ಜಿತೇಶ್ ಶರ್ಮಾ (ಔಟಾಗದೇ 11) ತಂಡವನ್ನು ಗೆಲುವಿನ ದಡ ಸೇರಿಸಿದರು. ಅರ್ಷದ್ ಖಾನ್ ಓವರ್ನಲ್ಲಿ ಕೊಹ್ಲಿ ಗೆಲುವಿನ ಸಿಕ್ಸರ್ ಬಾರಿಸಿದರು. ತಂಡವು 12 ಎಸೆತ ಬಾಕಿ ಇರುವಂತೆ 5 ವಿಕೆಟ್ಗೆ 161 ರನ್ ಗಳಿಸಿ ಸಂಭ್ರಮಿಸಿತು.

ಬೌಲರ್ಗಳ ಬಿರುಗಾಳಿ: ಇದಕ್ಕೂ ಮೊದಲು ಆರ್ಸಿಬಿ ಬೌಲಿಂಗ್ ಪಡೆಯದ್ದೇ ಪಾರುಪತ್ಯ ನಡೆಯಿತು. ಕೆಂಪು ಮತ್ತು ಕಪ್ಪು ಮಣ್ಣಿನ ಮಿಶ್ರಣ ಇರುವ ಕ್ರೀಡಾಂಗಣದ ಪಿಚ್ ಸಂಖ್ಯೆ 6ರಲ್ಲಿ ನಡೆದ ಪಂದ್ಯದಲ್ಲಿ ರಜತ್ ಪಾಟೀದಾರ್ ಟಾಸ್ ಗೆದ್ದು ತೆಗೆದುಕೊಂಡ ನಿರ್ಧಾರವು ಫಲಪ್ರದವಾಯಿತು. ಆರ್ಸಿಬಿ ಬೌಲರ್ಗಳು ನಿಖರ ಲೆಂಗ್ತ್ನಲ್ಲಿ ಬೌಲಿಂಗ್ ಮಾಡಿದರು.

ಟೈಟನ್ಸ್ ಆರಂಭಿಕ ಜೋಡಿ ಶುಭಮನ್ ಗಿಲ್ (10) ಮತ್ತು ಬಿ. ಸಾಯಿ ಸುದರ್ಶನ್ (12) ಅವರು ವಿಫಲರಾಗಿದ್ದು ತಂಡದ ಸೋಲಿಗೆ ಮುನ್ನುಡಿಯಾಯಿತು. ಇಬ್ಬರೂ ಬ್ಯಾಟರ್ಗಳು ಪ್ರಸಕ್ತ ಟೂರ್ನಿಯಲ್ಲಿ ತಲಾ 700ಕ್ಕಿಂತ ಹೆಚ್ಚು ರನ್ ಗಳಿಸಿದ್ದರು. ಜೋಶ್ ಬೌಲಿಂಗ್ನಲ್ಲಿ ಗಿಲ್ ಹೊಡೆದ ಚೆಂಡನ್ನು ಮಿಡ್ ಆಫ್ನಲ್ಲಿ ಸುಲಭವಾಗಿ ಕ್ಯಾಚ್ ಮಾಡಿದ ರಜತ್ ಸಂಭ್ರಮಿಸಿದರು.

ನಂತರದ ಓವರ್ನಲ್ಲಿ ಭುವನೇಶ್ವರ್ ಕುಮಾರ್ ಎಸೆತಕ್ಕೆ ಬೌಂಡರಿಯತ್ತ ನಿರ್ದೆಶಿಸುವ ಸಾಯಿ ಸುದರ್ಶನ್ ಪ್ರಯತ್ನ ಕೈಕೊಟ್ಟಿತು. ಬ್ಯಾಟ್ಗೆ ಬಡಿದು ಗಾಳಿಯಲ್ಲಿ ಎತ್ತರಕ್ಕೆ ಚಿಮ್ಮಿದ ಚೆಂಡನ್ನು ವಿಕೆಟ್ಕೀಪರ್ ಜಿತೇಶ್ ಶರ್ಮಾ ಬೆನ್ನುಹತ್ತಿ ಓಡಿದರು. ಇವರಿಬ್ಬರ ನಿರ್ಗಮನದಿಂದಾಗಿ ರನ್ ಗಳಿಕೆ ವೇಗ ಕುಸಿಯಿತು. ಪವರ್ಪ್ಲೇ ಹಂತದಲ್ಲಿ ಕೇವಲ 45 ರನ್ಗಳು ಖಾತೆ ಸೇರಿದವು.

ತಂಡದ ಉಳಿದ ಬ್ಯಾಟರ್ಗಳಲ್ಲಿ ದೊಡ್ಡ ಇನಿಂಗ್ಸ್ ಕಟ್ಟುವ ಮತ್ತು ರನ್ ಗಳಿಸುವ ಕಿಚ್ಚು ಕಾಣಿಸಲಿಲ್ಲ. ಜೋಸ್ ಬಟ್ಲರ್ (19 ರನ್) ಲಯಕ್ಕೆ ಮರಳುವ ಪ್ರಯತ್ನ ಫಲಿಸಲಿಲ್ಲ. ಸ್ಪಿನ್ನರ್ ಕೃಣಾಲ್ ಪಾಂಡ್ಯ ಬೌಲಿಂಗ್ನಲ್ಲಿ ಮುನ್ನುಗ್ಗಿ ಹೊಡೆಯುವ ಪ್ರಯತ್ನದಲ್ಲಿ ಬಟ್ಲರ್ ವಿಫಲರಾದರು. ಜಿತೇಶ್ ಶರ್ಮಾ ಸ್ಟಂಪಿಂಗ್ ಮಾಡಿ ವಿಕೆಟ್ ಉರುಳಿಸಿದರು. ಜೋಶ್ ಮತ್ತು ಭುವಿ ಕೊಟ್ಟ ಉತ್ತಮ ಆರಂಭವು ವ್ಯರ್ಥವಾಗದಂತೆ ರಸಿಕ್ ಸಲಾಮ್ ದಾರ್ ನೋಡಿಕೊಂಡರು. ಅವರು ನಿಶಾಂತ್ ಸಿಂಧು, ರಾಹುಲ್ ತೆವಾಟಿಯಾ ಹಾಗೂ ರಶೀದ್ ಖಾನ್ ಅವರ ವಿಕೆಟ್ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.