ಬೆಂಗಳೂರು: ‘ಹಾಲಿ ಚಾಂಪಿಯನ್’ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಕಳೆದ ಒಂದು ವಾರದಿಂದ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ನಗರದ ಹೊರವಲಯದಲ್ಲಿರುವ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸ ಮಾಡುವುದರಲ್ಲಿ ಮಗ್ನರಾಗಿದ್ದರು. ಬಿಡುವಿನ ಬೇಸರ ಕಳೆಯಲು ತಾವು ತಂಗಿದ್ದ ಹೋಟೆಲ್ನಲ್ಲಿ ಈಜುಕೊಳದಲ್ಲಿ ಮುಳುಗೆದ್ದರು. ಜಿಮ್ನಾಷಿಯಂನಲ್ಲಿ ಕಸರತ್ತು ಮಾಡಿದರು.

ಆದರೆ ಇದೇ ಅವಧಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಎರಡು ಪಂದ್ಯಗಳಲ್ಲಿ ಸೋತಿತು. ಶುಕ್ರವಾರ ರಾತ್ರಿ ತನ್ನ ತವರು ಚೆಪಾಕ್ನಲ್ಲಿ ಋತುರಾಜ್ ಗಾಯಕವಾಡ ಬಳಗವು ಪಂಜಾಬ್ ಕಿಂಗ್ಸ್ ಎದುರು ಪರಾಭವಗೊಂಡಿತ್ತು. ಶನಿವಾರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದೆ. ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ತಂಡವನ್ನು ಎದುರಿಸಲಿದೆ.

ಈ ವೇಳಾಪಟ್ಟಿ ಒಂದು ರೀತಿಯಲ್ಲಿ ಇಬ್ಬರಿಗೂ ವಿಭಿನ್ನ ಸವಾಲು ಒಡ್ಡಿರುವುದಂತೂ ನಿಜ. ಏಕೆಂದರೆ ಮಾರ್ಚ್ 28ರಂದು ಆರ್ಸಿಬಿಯು ತನ್ನ ಮೊದಲ ಪಂದ್ಯ ಆಡಿತ್ತು. ಅದರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಎದುರು ಗೆದ್ದಿತ್ತು. ಅದರ ನಂತರ ದೀರ್ಘ ಬಿಡುವು ಸಿಕ್ಕಿತು. ಆದರೆ ಚೆನ್ನೈ ತಂಡಕ್ಕೆ ಎರಡು ಮತ್ತು ಮೂರನೇ ಪಂದ್ಯದ ನಡುವೆ ಸಿಕ್ಕಿದ್ದು ಒಂದು ದಿನದ ಬಿಡುವು ಮಾತ್ರ. ಆರ್ಸಿಬಿಗೆ ಈ ದೀರ್ಘ ಅವಧಿಯಲ್ಲಿ ಲಯ ಕಾಪಾಡಿಕೊಳ್ಳುವ ಸವಾಲಾದರೆ, ಚೆನ್ನೈಗೆ ವಿಶ್ರಾಂತಿಗೆ ಸಮಯಾವಕಾಶ ಸಿಗದ ಒತ್ತಡ ಕಾಡಬಹುದು.

‘ಮೊದಲ ಪಂದ್ಯ ಮುಗಿದ ಮರುದಿನ ಪೂರ್ತಿ ವಿಶ್ರಾಂತಿ ಪಡೆದೆವು. ಅದರ ನಂತರ ಬಹಳ ಕಠಿಣ ಅಭ್ಯಾಸ ನಡೆಸಿದೆವು. ಪಂದ್ಯಗಳಲ್ಲಿ ಎದುರಾಗಬಹುದಾದ ಒತ್ತಡದ ಸನ್ನಿವೇಶಗಳ ಮಾದರಿಗಳನ್ನು ಸೃಷ್ಟಿಸಿದ ನಮ್ಮ ನೆರವು ಸಿಬ್ಬಂದಿ ಬಹಳ ಉತ್ತಮವಾದ ಅಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟರು. ಥೇಟ್ ಪಂದ್ಯವಾಡಿದಂತಹ ಭಾವನೆ ಮೂಡಿಸಿದ ಅಭ್ಯಾಸದ ಸಂದರ್ಭಗಳು ಅವು. ಐದು ಅಥವಾ ಏಳು ದಿನ ಬಿಡುವು ಎಂಬುದರ ಬಗ್ಗೆ ನಾವು ಯೋಚನೆ ಮಾಡಲಿಲ್ಲ’ ಎಂದು ಆರ್ಸಿಬಿ ಉಪನಾಯಕ ಜಿತೇಶ್ ಶರ್ಮಾ ಶನಿವಾರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮೊದಲ ಪಂದ್ಯದಲ್ಲಿ ಆರ್ಸಿಬಿ ಆಲ್ರೌಂಡ್ ಆಟವಾಡಿತ್ತು. ವೇಗಿ ಜೇಕಬ್ ಡಫಿ ಅವರ ‘ಪವರ್ ಪ್ಲೇ’ ಅವಧಿಯ ಪರಿಣಾಮಕಾರಿ ದಾಳಿಯು ರಂಗೇರಿತ್ತು. ರೊಮೆರಿಯೊ ಶೇಫರ್ಡ್, ಹೊಸ ಹುಡುಗ ಅಭಿನಂದನ್ ಸಿಂಗ್ ಮತ್ತು ಅನುಭವಿ ಭುವನೇಶ್ವರ್ ಕುಮಾರ್ ಅವರು ತವರಿನಂಗಳದ ಲಾಭ ಪಡೆದಿದ್ದರು.

ಅಭಿಮಾನಿಗಳ ಕಣ್ಮಣಿ ವಿರಾಟ್ ಕೊಹ್ಲಿ, ‘ಸ್ಥಳೀಯ ಹೀರೊ’ ದೇವದತ್ತ ಪಡಿಕ್ಕಲ್ ಹಾಗೂ ನಾಯಕ ರಜತ್ ಪಾಟೀದಾರ್ ಅವರ ಬ್ಯಾಟಿಂಗ್ ಬಲದಿಂದ ತಂಡವು, 202 ರನ್ಗಳ ಗುರಿಯನ್ನು ಮುಟ್ಟಿದಾಗ ಇನಿಂಗ್ಸ್ನಲ್ಲಿ ಇನ್ನೂ 26 ಎಸೆತಗಳು ಬಾಕಿಯಿದ್ದವು. ಫಿಲ್ ಸಾಲ್ಟ್ ಮತ್ತು ಜಿತೇಶ್ ಅವರು ಮಾತ್ರ ಹೆಚ್ಚು ರನ್ ಗಳಿಸಿರಲಿಲ್ಲ.

ಆದರೆ ಚೆನ್ನೈ ತಂಡದ ಪರಿಸ್ಥಿತಿ ಎಂದಿನಂತಿಲ್ಲ. ಐದು ಬಾರಿ ಪ್ರಶಸ್ತಿ ಗೆದ್ದ ತಂಡದ ರೀತಿಯಲ್ಲಿ ಆಡುತ್ತಿಲ್ಲ. ಋತುರಾಜ್ ಬಳಗವು ಮೊದಲ ಪಂದ್ಯದಲ್ಲಿ ಅಲ್ಪಮೊತ್ತಕ್ಕೆ ಕುಸಿದಿತ್ತು. ಆದರೆ, ಎರಡನೇ ಪಂದ್ಯದಲ್ಲಿ 18 ವರ್ಷದ ಆಯುಷ್ ಮ್ಹಾತ್ರೆ, ಸರ್ಫರಾಜ್ ಖಾನ್ ಮತ್ತು ಶಿವಂ ದುಬೆಯ ಅಮೋಘ ಬ್ಯಾಟಿಂಗ್ ಬಲದಿಂದ ‘ದ್ವಿಶತಕ’ದ ಮೊತ್ತ ಗಳಿಸಿತ್ತು. ಆದರೆ ಸಂಜು ಸ್ಯಾಮ್ಸನ್ ಅವರು ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ.

ಬೌಲರ್ ಮ್ಯಾಟ್ ಹೆನ್ರಿ ಎರಡು ವಿಕೆಟ್ ಗಳಿಸಿದರೂ ರನ್ ಕೊಡುವುದರಲ್ಲಿ ಧಾರಾಳಿಯಾದರು. ಖಲೀಲ್ ಅಹಮದ್, ಸ್ಪಿನ್ನರ್ ರಾಹುಲ್ ಚಾಹರ್ ಅವರು ವಿಕೆಟ್ ಗಳಿಸಲಿಲ್ಲ. ಪ್ರಮುಖ ಜೊತೆಯಾಟಗಳನ್ನು ಮುರಿಯುವಲ್ಲಿ ಬೌಲರ್ಗಳು ಚಾಣಾಕ್ಷತನ ತೋರಲಿಲ್ಲ. ಋತುರಾಜ್ ನಾಯಕತ್ವದಲ್ಲಿ ಅನುಭವದ ಕೊರತೆ ಎದ್ದುಕಂಡಿತು. ಅಲ್ಲದೇ ಮಹೇಂದ್ರಸಿಂಗ್ ಧೋನಿ ಅವರ ಗೈರುಹಾಜರಿ ಕೂಡ ಕಾಡಿದ್ದು ಸುಳ್ಳಲ್ಲ.

‘ಇಂಪ್ಯಾಕ್ಟ್ ಪ್ಲೇಯರ್ ನಿಯಮ ಒಳ್ಳೆಯದು’

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ತಂಡಗಳ ಬಹುತೇಕ ಎಲ್ಲ ನಾಯಕರೂ ಮತ್ತು ಪ್ರಮುಖ ಆಟಗಾರರು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಉಪನಾಯಕ ಜಿತೇಶ್ ಶರ್ಮಾ ಅವರು ‘ಇಂಪ್ಯಾಕ್ಸ್ ಪ್ಲೇಯರ್ ನಿಯಮ ಒಳ್ಳೆಯದು’ ಎಂದಿದ್ದಾರೆ. ‘ವೈಯಕ್ತಿಕವಾಗಿ ನನಗೆ ಈ ನಿಯಮದ ಬಗ್ಗೆ ಸಂತಸವಿದೆ. ಇದರಿಂದಾಗಿ ಬೆಂಚ್ನಲ್ಲಿರುವ ಒಬ್ಬ ಆಟಗಾರನಿಗೆ ಅವಕಾಶ ಸಿಗುತ್ತದೆ. 12 ಆಟಗಾರರು ಆಡಿದಂತಾಗುತ್ತದೆ. ಆಟಗಾರರಿಗೆ ಉತ್ತಮ ಅವಕಾಶ ಇದು’ ಎಂದು ಶನಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ‘ಪ್ರಶಸ್ತಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ತಂಡ ಎಂಬ ಹಣೆಪಟ್ಟಿಯೇ ಅಪ್ರಸ್ತುತ. ನಾವು 2026ರ ಪ್ರಶಸ್ತಿಯನ್ನು ಜಯವನ್ನು ಬೆನ್ನಟ್ಟುತ್ತಿರುವ ಬಳಗ’ ಎಂದರು.

ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟೀದಾರ್ (ನಾಯಕ) ಫಿಲ್ ಸಾಲ್ಟ್ ವಿರಾಟ್ ಕೊಹ್ಲಿ ದೇವದತ್ತ ಪಡಿಕ್ಕಲ್ ಜಿತೇಶ್ ಶರ್ಮಾ (ವಿಕೆಟ್ಕೀಪರ್/ಉಪನಾಯಕ) ಅಭಿನಂದನ್ ಸಿಂಗ್ ಭುವನೇಶ್ವರ್ ಕುಮಾರ್ ಕೃಣಾಲ್ ಪಾಂಡ್ಯ ವೆಂಕಟೇಶ್ ಅಯ್ಯರ್ ಸ್ವಪ್ನಿಲ್ ಸಿಂಗ್ ಮಂಗೇಶ್ ಯಾದವ್ ಕನಿಷ್ಕ ಚೌಹಾಣ್ ವಿಹಾನ್ ಮಲ್ಹೋತ್ರಾ ವಿಕಿ ಓಸ್ವಾಲ್ ಸಾತ್ವಿಕ್ ದೇಸ್ವಾಲ್. ಸುಯಶ್ ಶರ್ಮಾ.

ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕವಾಡ (ನಾಯಕ) ಸಂಜು ಸ್ಯಾಮ್ಸನ್ ಶಿವಂ ದುಬೆ ಶ್ರೇಯಸ್ ಗೋಪಾಲ್ ಖಲೀಲ್ ಅಹಮದ್ ಆಯುಷ್ ಮ್ಹಾತ್ರೆ ಊರ್ವಿಲ್ ಪಟೇಲ್ ಕಾರ್ತಿಕ್ ಶರ್ಮಾ ಪ್ರಶಾಂತ್ ವೀರ್ ರಾಹುಲ್ ಚಹಾರ್ ಸರ್ಫರಾಜ್ ಖಾನ್ ಅಮನ್ ಖಾನ್ ಅನ್ಷುಲ್ ಕಂಬೋಜ್ ಗುರ್ಜಪನೀತ್ ಸಿಂಗ್ ಮುಕೇಶ್ ಚೌಧರಿ ರಾಮಕೃಷ್ಣ ಘೋಷ್. ಪಂದ್ಯ ಆರಂಭ: ರಾತ್ರಿ 7.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಜಿಯೊಹಾಟ್ಸ್ಟಾರ್ ಆ್ಯಪ್
.IPL 2026 | ಚಿನ್ನಸ್ವಾಮಿಯಲ್ಲಿ ಕ್ರಿಕೆಟ್ ಕಳೆ: ಆರ್ಸಿಬಿ ಹೊಸ ಅಧ್ಯಾಯದ ಆರಂಭ.IPL 2026: ‘ಋತು‘ವಿನ ಮೊದಲ ಜಯಕ್ಕಾಗಿ ಚೆನ್ನೈ ಹಂಬಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.