ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನಿನ್ನೆ (ಏಪ್ರಿಲ್ 18) ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೇ ಓವರ್ನಲ್ಲಿ ವಿರೋಚಿತ ಸೋಲು ಅನುಭವಿಸಿದೆ. ಪಂದ್ಯದ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಪಂದ್ಯ ಸೋಲಿಗೆ ಬ್ಯಾಟರ್ಗಳ ವೈಫಲ್ಯವೇ ಕಾರಣ ಎಂದಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿ ತಂಡಕ್ಕೆ ಫಿಲ್ ಸಾಲ್ಟ್ (69) ಹಾಗೂ ವಿರಾಟ್ ಕೊಹ್ಲಿ (19) ಉತ್ತಮ ಆರಂಭ ಒದಗಿಸಿದರು. ಇದರ ಹೊರತಾಗಿಯೂ ಅಗ್ರಕ್ರಮಾಂಕದ ಬ್ಯಾಟರ್ಗಳ ನೀರಸ ಪ್ರದರ್ಶನದಿಂದಾಗಿ ಆರ್ಸಿಬಿ ತಂಡವು ನಿಗದಿತ 20 ಓವರ್ಗಳಲ್ಲಿ 175 ರನ್ ಮಾತ್ರ ಗಳಿಸಿತು.

ಪಂದ್ಯದ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ರಜತ್ ಪಾಟಿದಾರ್, ‘ಗೆಲುವು ನಿಜಕ್ಕೂ ಹತ್ತಿರದಲ್ಲಿ ಇತ್ತು. ಆದರೆ ನಾವು 15 ರಿಂದ 20 ರನ್ ಕಡಿಮೆ ಮಾಡಿದೆವು ಎಂದು ನಾನು ಭಾವಿಸುತ್ತೇನೆ. ನಾವು ಬ್ಯಾಟಿಂಗ್ ಪ್ರಾರಂಭಿಸಿದ ರೀತಿ, ವಿಶೇಷವಾಗಿ ವಿರಾಟ್ ಕೊಹ್ಲಿ ಮತ್ತು ಸಾಲ್ಟ್ ಅವರು ಉತ್ತಮ ಆರಂಭ ನೀಡಿದರು. ಬಳಿಕ ನಾವು ನಿರಂತರವಾಗಿ ವಿಕೆಟ್ಗಳನ್ನು ಕಳೆದುಕೊಳ್ಳಲು ಪ್ರಾರಂಭಿಸಿದೆವು. ಮಧ್ಯಮ ಕ್ರಮಾಂಕದಲ್ಲಿ ರನ್ ಗಳಿಸಲು ಸಾಧ್ಯವಾಗದೇ ಇರುವುದು ನಮ್ಮ ಸೋಲಿಗೆ ಕಾರಣವಾಯಿತು’ ಎಂದು ಪಾಟಿದಾರ್ ಹೇಳಿದರು.
.IPL 2026: ಆರ್ಸಿಬಿ ಓಟಕ್ಕೆ ಕ್ಯಾಪಿಟಲ್ಸ್ ತಡೆ.ತಿರುಪತಿ ತಿರುಮಲಕ್ಕೆ ಭೇಟಿ ನೀಡಿದ ಆರ್ಸಿಬಿ ನಾಯಕ ರಜತ್ ಪಾಟೀದಾರ್.
‘ನನ್ನ ಪ್ರಕಾರ ಪಿಚ್ ಸ್ವಲ್ಪ ಕಠಿಣವಾಗಿತ್ತು. ಆದರೂ ಪಂದ್ಯವನ್ನು ಕೊನೆ ಓವರ್ ವರೆಗೂ ತೆಗೆದುಕೊಂಡು ಹೋಗಿದ್ದು ಖುಷಿ ನೀಡಿತು. ಟೂರ್ನಿ ಧೀರ್ಘವಾಗಿದೆ, ನಮ್ಮ ತಪ್ಪುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಅವುಗಳನ್ನು ಸರಿಪಡಿಸಿಕೊಳ್ಳುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.