ಬೆಂಗಳೂರು: ತವರಿನಂಗಳದಲ್ಲಿ ಜಯದ ಹ್ಯಾಟ್ರಿಕ್ ಸಾಧಿಸಿ ಭರ್ತಿ ಆತ್ಮವಿಶ್ವಾಸದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶನಿವಾರ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣವನ್ನು ಭದ್ರಕೋಟೆಯನ್ನಾಗಿಸಿಕೊಂಡಿರುವ ಹಾಲಿ ಚಾಂಪಿಯನ್ ಆರ್ಸಿಬಿ ತಂಡವು ಮತ್ತೊಂದು ಗೆಲುವಿನೊಂದಿಗೆ ಅಗ್ರಸ್ಥಾನವನ್ನು ಮರಳಿ ಪಡೆಯುವತ್ತ ಚಿತ್ತ ಹರಿಸಿದೆ. ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯವನ್ನು ಹೊರತುಪಡಿಸಿ ಉಳಿದ ನಾಲ್ಕು ಪಂದ್ಯಗಳಲ್ಲಿ ರಜತ್ ಪಾಟೀದಾರ್ ಬಳಗ ಜಯಭೇರಿ ಬಾರಿಸಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ತಂಡವು ಅಭಿಮಾನಿಗಳ ಸಮ್ಮುಖದಲ್ಲಿ ಗೆಲುವಿನ ಓಟ ಮುಂದುವರಿಸುವ ಛಲದಲ್ಲಿದೆ.

ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಗಾಯದ ಕಾರಣಕ್ಕೆ ‘ಇಂಪ್ಯಾಕ್ಟ್ ಸಬ್ಸ್ಟಿಟ್ಯೂಟ್’ ಆಗಿ ಕಣಕ್ಕಿಳಿದು 49 ರನ್ ಬಾರಿಸಿದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಪಾತ್ರದ ಬಗ್ಗೆ ಕುತೂಹಲವಿದೆ. ಐದು ಪಂದ್ಯಗಳಿಂದ 57ರ ಸರಾಸರಿಯಲ್ಲಿ ಒಟ್ಟು 228 ರನ್ ಗಳಿಸಿರುವ ಅವರು ಸದ್ಯ ‘ಆರೇಂಜ್ ಕ್ಯಾಪ್’ ಹೊಂದಿದ್ದಾರೆ. ಶುಕ್ರವಾರ ತಾಲೀಮು ವೇಳೆ ಅವರು ಸಹ ಆಟಗಾರರೊಂದಿಗೆ ಉತ್ಸಾಹದಿಂದ ‘ಸಿಕ್ಸರ್’ಗಳ ಅಭ್ಯಾಸ ನಡೆಸಿದರು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಕೊಹ್ಲಿ ಲಭ್ಯತೆಯನ್ನು ತಂಡದ ಪರ ಸುದ್ದಿಗೋಷ್ಠಿಗೆ ಹಾಜರಾಗಿದ್ದ ವೇಗಿ ಜೋಶ್ ಹ್ಯಾಜಲ್ವುಡ್ ಖಚಿತಪಡಿಸಿದರು. ಆದರೆ, ಪೂರ್ಣ ಫಿಟ್ನೆಸ್ ಬಗ್ಗೆ ಅವರೂ ಗುಟ್ಟು ಬಿಟ್ಟುಕೊಡಲಿಲ್ಲ..

ಆರ್ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಲಖನೌ ವಿರುದ್ಧ ಏಕಪಕ್ಷೀಯವಾಗಿ ಜಯ ಸಾಧಿಸಿದ ಹುಮ್ಮಸ್ಸಿನಲ್ಲಿದೆ. ಈ ಪಂದ್ಯದಲ್ಲಿ ಜಮ್ಮು ಕಾಶ್ಮೀರದ ಕಣಿವೆಯ ಪ್ರತಿಭೆ ರಸಿಕ್ ಸಲಾಮ್ ಧಾರ್ ನಾಲ್ಕು ವಿಕೆಟ್ ಪಡೆದು ಮಿಂಚಿದ್ದರು. ವೇಗಿಗಳಾದ ಹ್ಯಾಜಲ್ವುಡ್, ಭುವನೇಶ್ವರ್ ಕುಮಾರ್, ಸ್ಪಿನ್ ಜೋಡಿಯಾದ ಕೃಣಾಲ್ ಪಾಂಡ್ಯ– ಸುಯಶ್ ಶರ್ಮಾ ಪರಿಣಾಮಕಾರಿ ದಾಳಿ ಸಂಘಟಿಸಿದ್ದರು. ಈಗ ಡೆಲ್ಲಿ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲು ಅವರ ಮುಂದಿದೆ.

ಡೆಲ್ಲಿ ತಂಡಕ್ಕೆ ಹೋಲಿಸಿದರೆ ಆರ್ಸಿಬಿಯ ಬ್ಯಾಟಿಂಗ್ ವಿಭಾಗವೂ ಬಲಿಷ್ಠವಾಗಿದೆ. ಐದು ಪಂದ್ಯಗಳಲ್ಲಿ 21 ಸಿಕ್ಸರ್ ಬಾರಿಸಿರುವ ರಜತ್ (222 ರನ್) ಅಮೋಘ ಲಯದಲ್ಲಿದ್ದಾರೆ. ಟಿಮ್ ಡೇವಿಡ್ (147), ಫಿಲ್ ಸಾಲ್ಟ್ (139), ಸ್ಥಳೀಯ ಹುಡುಗ ದೇವದತ್ತ ಪಡಿಕ್ಕಲ್ (135) ಉಪಯುಕ್ತ ಕಾಣಿಕೆ ನೀಡಿದ್ದಾರೆ. ವಿಕೆಟ್ ಕೀಪರ್ ಜಿತೇಶ್ ಶರ್ಮಾ, ರೊಮಾರಿಯೊ ಶೆಫರ್ಡ್ ಅವರೂ ಕೊನೆಯ ಹಂತದ ಓವರ್ಗಳಲ್ಲಿ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ.

ಅಕ್ಷರ್ ಪಟೇಲ್ ಬಳಗವು ಆರಂಭದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ, ನಂತರದಲ್ಲಿ ಎರಡೂ ಸೋಲು ಅನುಭವಿಸಿ ಗೆಲುವಿನ ಹಳಿಗೆ ಮರಳುವ ಪ್ರಯತ್ನದಲ್ಲಿದೆ. ಆರಂಭಿಕ ಬ್ಯಾಟರ್ ಕೆ.ಎಲ್.ರಾಹುಲ್ ಅವರಿಗೂ ‘ಚಿನ್ನಸ್ವಾಮಿ’ ತವರಿನಂಗಳ ಎಂಬುದು ವಿಶೇಷ. ಮತ್ತೊಬ್ಬ ಕನ್ನಡಿಗ ಕರುಣ್ ನಾಯರ್ ತಂಡದಲ್ಲಿದ್ದರೂ ಹಾಲಿ ಟೂರ್ನಿಯಲ್ಲಿ ಆಡಲು ಅವಕಾಶ ಸಿಕ್ಕಿಲ್ಲ.

ಕಳೆದ ಆವೃತ್ತಿಯಲ್ಲಿ ಇದೇ ತಾಣದಲ್ಲಿ ನಡೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ರಾಹುಲ್ ಅಜೇಯ 93 ರನ್ ಬಾರಿಸಿ, ತಮ್ಮ ತಂಡಕ್ಕೆ 6 ವಿಕೆಟ್ಗಳ ಗೆಲುವಿನ ಕಾಣಿಕೆ ನೀಡಿದ್ದರು. ಮಾತ್ರವಲ್ಲ, ಕಾಂತಾರ ಸಿನಿಮಾದ ಶೈಲಿಯಲ್ಲಿ ಬ್ಯಾಟ್ನಿಂದ ಕ್ರೀಸ್ನಲ್ಲಿ ವೃತ್ತ ಬರೆದು, ಆ ವೃತ್ತದೊಳಗೆ ಬ್ಯಾಟ್ ಕುಟ್ಟಿ ಸಂಭ್ರಮಿಸಿದ್ದರು. ಆದರೆ, ನಂತರದ ಮುಖಾಮುಖಿಯಲ್ಲಿ ಆರ್ಸಿಬಿ ತಂಡವು ಡೆಲ್ಲಿ ತಂಡವನ್ನು ಅವರದೇ ತವರಿನಲ್ಲಿ ಆರು ವಿಕೆಟ್ಗಳಿಂದ ಸೋಲಿಸಿ ಮುಯ್ಯಿ ತೀರಿಸಿಕೊಂಡಿತ್ತು.

33 ವರ್ಷದ ರಾಹುಲ್ ಈ ಬಾರಿ ಸ್ಥಿರ ಪ್ರದರ್ಶನ ನೀಡದಿರುವುದು ಡೆಲ್ಲಿ ತಂಡಕ್ಕೆ ಚಿಂತೆ ಮೂಡಿಸಿದೆ. ಗುಜರಾತ್ ಟೈಟನ್ಸ್ ವಿರುದ್ಧ ಮಿಂಚಿನ 92 ರನ್ ಗಳಿಸಿದರೂ ಆ ಪಂದ್ಯವನ್ನು 1 ರನ್ನಿಂದ ಸೋತಿತ್ತು. ಉಳಿದ ಮೂರು ಪಂದ್ಯಗಳಲ್ಲೂ ರಾಹುಲ್ ಬೇಗನೆ ವಿಕೆಟ್ ಒಪ್ಪಿಸಿದ್ದರು. ಅವರು ಬ್ಯಾಟಿಂಗ್ಗೆ ಕುದುರದಂತೆ ನೋಡಿಕೊಳ್ಳುವ ಜವಾಬ್ದಾರಿ ಆರ್ಸಿಬಿ ಬೌಲರ್ಗಳ ಮೇಲಿದೆ.

ಸಮೀರ್ ರಿಜ್ವಿ ಹೊರತುಪಡಿಸಿ ಡೆಲ್ಲಿಯ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಮಟ್ಟದಲ್ಲಿ ರನ್ ಬಂದಿಲ್ಲ. ಸಮೀರ್ ನಾಲ್ಕು ಪಂದ್ಯಗಳಲ್ಲಿ 55ರ ಸರಾಸರಿಯಲ್ಲಿ 166 ರನ್ ಗಳಿಸಿದ್ದು, ತಂಡದ ಗರಿಷ್ಠ ಸ್ಕೋರರ್ ಎನಿಸಿದ್ದಾರೆ. ಶ್ರೀಲಂಕಾದ ಬ್ಯಾಟರ್ ಪಥುಮ್ ನಿಸಾಂಕ (127) ನಂತರದ ಸ್ಥಾನದಲ್ಲಿದ್ದಾರೆ. ಡೇವಿಡ್ ಮಿಲ್ಲರ್, ಟ್ರಿಸ್ಟನ್ ಸ್ಟಬ್ಸ್ ಅವರ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

ನಾಲ್ಕು ಪಂದ್ಯಗಳಲ್ಲಿ ಐದು ವಿಕೆಟ್ ಕಬಳಿಸಿರುವ ಲುಂಗಿ ಎನ್ಗಿಡಿ ಬೌಲರ್ಗಳ ಪೈಕಿ ಪರಿಣಾಮಕಾರಿ ಎನಿಸಿದ್ದಾರೆ. ಆದರೆ ಮುಕೇಶ್ ಕುಮಾರ್, ಟಿ. ನಟರಾಜ್ ತಲಾ ನಾಲ್ಕು ವಿಕೆಟ್ ಪಡೆದರೂ ಉದಾರಿಯೆನಿಸಿದ್ದಾರೆ. ಅನುಭವಿ ಸ್ಪಿನ್ನರ್ಗಳಾದ ಕುಲದೀಪ್ ಯಾದವ್, ಅಕ್ಷರ್ ಅವರ ಕೈಚಳಕವೂ ನಡೆಯುತ್ತಿಲ್ಲ. ಆರ್ಸಿಬಿ ವಿರುದ್ಧ ಹೊಸ ಮುಖಗಳಿಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ.

ಹಸಿರು ಜೆರ್ಸಿಯಲ್ಲಿ ಆಡಲಿರುವ ಆರ್ಸಿಬಿ ಆಟಗಾರರು ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಪ್ರಯತ್ನ ಪ್ರತಿ ಆವೃತ್ತಿಯ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿಆಟದಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯವಾದುದು. ಆರ್ಸಿಬಿ ವಿರುದ್ಧ ಸೇರಿದಂತೆ ಮುಂದಿನ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉತ್ತಮ ಪ್ರದರ್ಶನ ನೀಡಲಿದೆ ಹೇಮಂಗ್ ಬದಾನಿ ಡೆಲ್ಲಿ ತಂಡದ ಕೋಚ್

ಆರ್ಸಿಬಿ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಸಮತೋಲನದಿಂದ ಕೂಡಿದೆ. ಬ್ಯಾಟರ್ಗಳು ಉತ್ತಮ ಮೊತ್ತ ಗಳಿಸುವುದರಿಂದ ಬೌಲರ್ಗಳ ಮೇಲೆ ಒತ್ತಡ ಕಡಿಮೆಯಾಗುತ್ತಿದೆ
ಜೋಶ್ ಹ್ಯಾಜರ್ವುಡ್ ಆರ್ಸಿಬಿ ವೇಗಿ

ಆಟದಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯವಾದುದು. ಆರ್ಸಿಬಿ ವಿರುದ್ಧ ಸೇರಿದಂತೆ ಮುಂದಿನ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉತ್ತಮ ಪ್ರದರ್ಶನ ನೀಡಲಿದೆ
ಹೇಮಂಗ್ ಬದಾನಿ ಡೆಲ್ಲಿ ತಂಡದ ಕೋಚ್

ಬಲಾಬಲ ಒಟ್ಟು ಪಂದ್ಯ 33 ಆರ್ಸಿಬಿ ಗೆಲುವು 20 ಡಿಸಿ ಗೆಲುವು 12 ಫಲಿತಾಂಶವಿಲ್ಲ 1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.