ಧರ್ಮಶಾಲಾ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯ 19ನೇ ಆವೃತ್ತಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 92 ರನ್ಗಳ ಗೆಲುವು ದಾಖಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡವು ಫೈನಲ್ ಪ್ರವೇಶಿಸಿದೆ.

ಹಾಲಿ ಚಾಂಪಿಯನ್ ಆರ್ಸಿಬಿ ತಂಡವು, ಸತತ ಎರಡನೇ ಪ್ರಶಸ್ತಿ ಮುಡಿಗೇರಿಸಿಕೊಳ್ಳವ ಕನಸಿಗೆ ಇನ್ನೊಂದೆ ಹೆಜ್ಜೆ ಬಾಕಿಯಿದೆ.

ಧರ್ಮಶಾಲಾ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡವು ಮೊದಲ ಓವರ್ನಿಂದಲೇ ಸ್ಪೋಟಕ ಆಟಕ್ಕೆ ಒತ್ತು ನೀಡಿದರು. ವೆಂಕಟೇಶ್ ಅಯ್ಯರ್ 7 ಎಸೆತಗಳಲ್ಲಿ 19 ರನ್ ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು.

ಉತ್ತಮ ಲಯದಲ್ಲಿದ್ದ ವಿರಾಟ್ ಕೊಹ್ಲಿ, 25 ಎಸೆತಗಳಲ್ಲಿ 43 ರನ್ ಬಾರಿಸಿ ಹೋಲ್ಡರ್ಗೆ ವಿಕೆಟ್ ಒಪ್ಪಿಸಿದರು. ಅದೇ ಓವರ್ನಲ್ಲಿ 19 ಎಸೆತಗಳಲ್ಲಿ 30 ರನ್ ಗಳಿಸಿದ್ದ ದೇವದತ್ತ ಪಡಿಕ್ಕಲ್ ಕೂಡ ಔಟಾದರು.

ನಾಲ್ಕನೇ ವಿಕೆಟ್ಗೆ ಜೊತೆಯಾದ ನಾಯಕ ರಜತ್ ಪಾಟೀದಾರ್( ಅಜೇಯ 93 ರನ್: 33 ಎಸೆತ) ಮತ್ತು ಕೃಣಾಲ್ ಪಾಂಡ್ಯ ( 43 ರನ್: 28 ಎಸೆತ) 45 ಎಸೆತಗಳಲ್ಲಿ 95 ರನ್ ಜೊತೆಯಾಟವಾಡಿದರು. ಜಿತೇಶ್ ಶರ್ಮಾ 5 ಎಸೆತಗಳಲ್ಲಿ ಅಜೇಯ 15 ರನ್ ಗಳಿಸಿದರು.

ಆರ್ಸಿಬಿ ತಂಡವು 20 ಓವರ್ಗಳ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿತು. ಗುಜರಾತ್ ಟೈಟನ್ಸ್ ಪರ ರಬಾಡ, ಹೋಲ್ಡರ್ ತಲಾ 2 ವಿಕೆಟ್ ಪಡೆದರು.

255 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಗುಜರಾತ್ ಬ್ಯಾಟರ್ಗಳು ಆರ್ಬಿಸಿ ಬೌಲಿಂಗ್ ದಾಳಿ ಎದುರು ರನ್ ಗಳಿಸಲು ಪರದಾಡಿದರು. ಉತ್ತಮ ಲಯದಲ್ಲಿದ್ದ ಸಾಯಿ ಸುದರ್ಶನ್(14 ರನ್) ಅನಿರೀಕ್ಷಿತವಾಗಿ ಔಟ್ ಆಗುವ ಮೂಲಕ ತಂಡದ ಕುಸಿತ ಆರಂಭವಾಯಿತು. ನಾಯಕ ಶುಭಮನ್ ಗಿಲ್(2 ರನ್), ನಿಶಾಂತ್ ಸಿಂಧು (5 ರನ್), ವಾಷಿಂಗ್ಟನ್ ಸುಂದರ್ (8 ರನ್) ಗಳಿಸಿ ಪೆವಿಲಿಯನ್ ಸೇರಿದರು. 11 ಎಸೆತಗಳಲ್ಲಿ 29 ರನ್ ಗಳಿಸಿ ಆಡುತ್ತಿದ್ದ ಅನುಭವಿ ಬ್ಯಾಟರ್ ಜೋಸ್ ಬಟ್ಲರ್ ಕೂಡ ಹೇಜಲ್ವುಡ್ಗೆ ವಿಕೆಟ್ ಒಪ್ಪಿಸಿದರು.

ಕೊನೆಯಲ್ಲಿ ರಾಹುಲ್ ತೆವಾಟಿಯಾ (68 ರನ್: 43 ಎಸೆತ) ಕೆಲಹೊತ್ತು ಆರ್ಸಿಬಿ ಬೌಲರ್ಗಳಿಗೆ ಪ್ರತಿರೋಧ ತೋರಿದರೂ, ತಂಡವನ್ನು ಗೆಲುವಿನ ಗಡಿ ದಾಟಿಸಲು ಸಾಧ್ಯವಾಗಲಿಲ್ಲ.

ಆರ್ಸಿಬಿ ಪರ ಜಾಕೋಬ್ ಡಫಿ 3 ವಿಕೆಟ್, ಭುವನೇಶ್ವರ್ ಕುಮಾರ್ ಹಾಗೂ ರಸಿಕ್ ಸಲಾಂ ದಾರ್ ತಲಾ 2 ವಿಕೆಟ್ ಪಡೆಯುವ ಮೂಲಕ ಗುಜರಾತ್ ತಂಡವನ್ನು 162 ರನ್ಗೆ ಕಟ್ಟಿಹಾಕಿದರು. ಈ ಮೂಲಕ 92 ರನ್ಗಳ ಗೆಲುವು ದಾಖಲಿಸಿ, ಫೈನಲ್ಗೆ ಲಗ್ಗೆ ಇಟ್ಟಿತು.

ಐದನೇ ಬಾರಿ ಫೈನಲ್ಗೆ: ಆರ್ಸಿಬಿ ತಂಡವು ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಐಪಿಎಲ್ ಟೂರ್ನಿಯಲ್ಲಿ ಐದನೇ ಬಾರಿ ಫೈನಲ್ಗೆ ಲಗ್ಗೆಯಿಟ್ಟಿತು. ಸಿಎಸ್ಕೆ ತಂಡ 10 ಬಾರಿ ಫೈನಲ್ ಆಡಿದ್ದರೆ, ಮುಂಬೈ ಇಂಡಿಯನ್ಸ್ ತಂಡವು 6 ಬಾರಿ ಫೈನಲ್ ಪ್ರವೇಶಿಸಿದೆ.

ಐಪಿಎಲ್ ಇತಿಹಾಸದಲ್ಲಿ ಹಾಲಿ ಚಾಂಪಿಯನ್ ತಂಡವು ಫೈನಲ್ ಪ್ರವೇಶಿಸಿದ 6ನೇ ನಿದರ್ಶನ ಇದಾಗಿದೆ. ಸಿಎಸ್ಕೆ (2010-11, 2011-12, 2018-19), ಮುಂಬೈ ಇಂಡಿಯನ್ಸ್ (2019-20), ಗುಜರಾತ್ ಟೈಟನ್ಸ್ (2022-23) ನಂತರ ಆರ್ಸಿಬಿ ಈ ಸಾಧನೆ ಮಾಡಿದೆ.

ನಾಕೌಟ್ ಪಂದ್ಯದಲ್ಲಿ 2ನೇ ದೊಡ್ಡ ಗೆಲುವು: ಆರ್ಸಿಬಿಯು 92 ರನ್ಗಳ ಗೆಲುವು ದಾಖಲಿಸಿದ್ದು, ಐಪಿಎಲ್ನ ನಾಕೌಟ್ ಪಂದ್ಯಗಳಲ್ಲಿ ಅತಿದೊಡ್ಡ ಗೆಲುವಾಗಿದೆ. 2008ರ ನಾಕೌಟ್ ಪಂದ್ಯದಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 105 ರನ್ಗಳ ಗೆಲುವು ಸಾಧಿಸಿದ್ದು, ಅತಿದೊಡ್ಡ ಗೆಲುವಾಗಿದೆ.

ಪವರ್ಪ್ಲೇನಲ್ಲಿ ಅಧಿಕ ವಿಕೆಟ್: ಗುಜರಾತ್ ಟೈಟನ್ಸ್ ತಂಡದ ವೇಗದ ಬೌಲರ್ ಕಗಿಸೋ ರಬಾಡ ಈ ಆವೃತ್ತಿಯ ಪವರ್ಪ್ಲೇನಲ್ಲಿ 18 ವಿಕೆಟ್ ಕಬಳಿಸಿದ್ದು, 2023ರ ಆವೃತ್ತಿಯ ಪವರ್ಪ್ಲೇನಲ್ಲಿ 17 ವಿಕೆಟ್ ಕಿತ್ತಿದ್ದ ಮೊಹಮ್ಮದ್ ಶಮಿ ಅವರ ದಾಖಲೆಯನ್ನು ಹಿಂದಿಕ್ಕಿದರು. ಐಪಿಎಲ್ ಆವೃತ್ತಿಯಲ್ಲಿ 3 ಬಾರಿ 25ಕ್ಕೂ ಅಧಿಕ ವಿಕೆಟ್ ಕಬಳಿಸಿದ ಏಕೈಕ ಬೌಲರ್ ಎನ್ನುವ ಸಾಧನೆಗೆ ಪಾತ್ರರಾದರು.

6 ಬಾರಿ 600ಕ್ಕೂ ಅಧಿಕ ರನ್: ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಐಪಿಎಲ್ ಆವೃತ್ತಿಯಲ್ಲಿ 6 ಬಾರಿ 600ಕ್ಕೂ ಅಧಿಕ ರನ್ ಗಳಿಸಿದ ಸಾಧನೆ ಮಾಡಿದರು. 4 ಆವೃತ್ತಿಗಳಲ್ಲಿ 600ಕ್ಕೂ ಅಧಿಕ ರನ್ ಗಳಿಸಿರುವ ಕೆ.ಎಲ್ ರಾಹುಲ್ ನಂತರದ ಸ್ಥಾನದಲ್ಲಿದ್ದಾರೆ.

ರಜತ್ ನಾಯಕನ ಆಟ: ಆರ್ಸಿಬಿ ನಾಯಕ ರಜತ್ ಪಾಟೀದಾರ್, ಅಜೇಯ 93 ರನ್ ಗಳಿಸಿದರು. ಇದು ಐಪಿಎಲ್ ಪ್ಲೇ–ಆಫ್ನಲ್ಲಿ ನಾಯಕನೊಬ್ಬನ ಅಧಿಕ ಮೊತ್ತವಾಗಿದೆ. ಗುಜರಾತ್ ಲಯನ್ಸ್ ವಿರುದ್ಧ ಡೆವಿಡ್ ವಾರ್ನರ್ ಕೂಡ ಅಜೇಯ 93 ರನ್ ಗಳಿಸಿದ್ದರು. ರಜತ್ ನಾಯಕತ್ವದಲ್ಲಿ ಆರ್ಸಿಬಿ ತಂಡವು ಮೂರು ನಾಕೌಟ್ ಪಂದ್ಯಗಳನ್ನು ಆಡಿದ್ದು, ಮೂರರಲ್ಲೂ ಗೆಲುವು ಸಾಧಿಸಿದೆ.

ಮೇ 31 ರಂದು ಅಹಮದಾಬಾದ್ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.