ಧರ್ಮಶಾಲಾ: ಇಂಡಿಯನ್ ಪ್ರೀಮಿಯರ್ ಲೀಗ್ 2026ರಲ್ಲಿ ಇಂದು (ಮೇ 26) ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಆರ್ಸಿಬಿ ಹಾಗೂ ಗುಜರಾತ್ ಟೈಟನ್ಸ್ ಪರ ಪ್ರಮುಖವಾಗಿ ಈ ಐವರು ಆಟಗಾರರು ಫಲಿತಾಂಶ ನಿರ್ಧರಿಸುವ ಸಾಮರ್ಥ್ಯ ಹೊಂದಿದ್ದಾರೆ.

ವಿರಾಟ್ ಕೊಹ್ಲಿ:

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಟೂರ್ನಿಯುದ್ಧಕ್ಕೂ ಅಮೋಘ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ ತಂಡದಲ್ಲಿ ಇರುವುದೇ ಬಲ. ಇಂದು ಅವರ ಬ್ಯಾಟ್ನಿಂದ ಉತ್ತಮ ಸ್ಕೋರ್ ಮೂಡಿಬಂದರೆ, ಆರ್ಸಿಬಿ ಪಂದ್ಯ ಗೆಲ್ಲುವುದರಲ್ಲಿ ಅನುಮಾನವಿಲ್ಲ. ಅವರು ಈ ಬಾರಿ ಆಡಿರುವ 14 ಪಂದ್ಯಗಳಿಂದ 557 ರನ್ ಕಲೆಹಾಕಿದ್ದಾರೆ.

ಭುವನೇಶ್ವರ ಕುಮಾರ್:

ಐಪಿಎಲ್ 2026ರಲ್ಲಿ 8ರ ಅತ್ಯುತ್ತಮ ಸರಾಸರಿಯಲ್ಲಿ ಬೌಲಿಂಗ್ ಮಾಡುವ ಮೂಲಕ 24 ವಿಕೆಟ್ ಕಬಳಿಸಿದ್ದಾರೆ. ಮಾತ್ರವಲ್ಲ, ಪರ್ಪಲ್ ಕ್ಯಾಪ್ ಓಟದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇವರು ಇಂದಿನ ಪಂದ್ಯದಲ್ಲಿ ಉತ್ತಮ ದಾಳಿ ನಿರ್ವಹಿಸಿದರೆ, ಆರ್ಸಿಬಿ ಗೆಲುವು ಖಚಿತವಾಗಲಿದೆ.

ಶುಭಮನ್ ಗಿಲ್:

ಗುಜರಾತ್ ಟೈಟನ್ಸ್ ನಾಯಕ ಶುಭಮನ್ ಗಿಲ್ ಈ ಬಾರಿ ಅಮೋಘ ಲಯದಲ್ಲಿದ್ದಾರೆ. ಅವರು, ಆಡಿರುವ 13 ಪಂದ್ಯಗಳಿಂದ 47ರ ಸರಾಸರಿಲ್ಲಿ 616 ರನ್ ಕಲೆ ಹಾಕಿದ್ದಾರೆ. ಆ ಮೂಲಕ ಆರೆಂಜ್ ಕ್ಯಾಪ್ ಓಟದಲ್ಲಿ ತಮ್ಮ ಸಹ ಆಟಗಾರ ಸಾಯಿ ಸುದರ್ಶನ್ ಅವರ ನಂತರದ ಸ್ಥಾನದಲ್ಲಿದ್ದಾರೆ. ಇಂದು ಕೂಡ ಗಿಲ್ ಬ್ಯಾಟ್ ಅಬ್ಬರಿಸಿದರೆ, ಗುಜರಾತ್ ಗೆಲುವು ಖಚಿತವಾಗಲಿದೆ.

ಸಾಯಿ ಸುದರ್ಶನ್:

ಗುಜರಾತ್ ತಂಡ ಪ್ಲೇ ಆಫ್ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಸಾಯಿ ಸುದರ್ಶನ್. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿರುವ ಅವರು ಆರೆಂಜ್ ಕ್ಯಾಪ್ ಓಟದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಪ್ರಸ್ತುತ 14 ಪಂದ್ಯಗಳಲ್ಲಿ ಬ್ಯಾಟ್ ಮಾಡಿರುವ ಅವರು 638 ರನ್ ಕಲೆಹಾಕಿದ್ದಾರೆ.

ರಶೀದ್ ಖಾನ್

ಗುಜರಾತ್ ಟೈಟನ್ಸ್ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಅಫ್ಗಾನಿಸ್ತಾನದ ರಶೀದ್ ಖಾನ್ ಅವರು ಈ ಬಾರಿಯೂ 8.71ರ ಉತ್ತಮ ಸರಾಸರಿಯಲ್ಲಿ 19 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದಾರೆ. ಅವರು ಇಂದು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರೆ, ಗುಜರಾತ್ ಗೆಲ್ಲುವ ಅವಕಾಶ ಹೆಚ್ಚಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.