ರಾಯಪುರ: ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಎದುರು ನೋಡುತ್ತಿರುವ ರಾಯಲ್ ಚಾಲೆಂಜರ್ಸ್ ಹಾಗೂ ಟೂರ್ನಿಯಲ್ಲಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಹೋರಾಟ ನಡೆಸುತ್ತಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಇಂದು (ಮೇ 13) ರಾಯಪುರದಲ್ಲಿ ಸೆಣಸಾಟ ನಡೆಸಲಿವೆ.

ಸತತ 4 ಪಂದ್ಯಗಳಲ್ಲಿ ಗೆಲುವು

ಟೂರ್ನಿಯ ಆರಂಭದಲ್ಲಿ ಮೊದಲ 6 ಪಂದ್ಯಗಳಲ್ಲಿ ಒಂದೇ ಒಂದು ಗೆಲುವು ಕಾಣದ ಅಜಿಂಕ್ಯಾ ರಹಾನೆ ನಾಯಕತ್ವದ ಕೆಕೆಆರ್ ತಂಡ, ನಂತರ ಆಡಿದ ನಾಲ್ಕಕ್ಕೆ 4 ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಈ ತಂಡವು ಪ್ಲೇ ಆಫ್ ತಲುಪಬೇಕು ಅಂದರೆ, ಬಾಕಿ ಉಳಿದಿರುವ 4 ಪಂದ್ಯಗಳಲ್ಲಿ ನಾಲ್ಕನ್ನೂ ಗೆಲ್ಲಬೇಕಿದೆ. ಒಂದು ಪಂದ್ಯ ಸೋತರೂ ಕೂಡ ಉಳಿದ ತಂಡಗಳ ಗೆಲುವು ಸೋಲು ಕೆಕೆಆರ್ ಪ್ಲೇ ಆಫ್ ಹಾದಿಯನ್ನು ನಿರ್ಧರಿಸಲಿದೆ.

ಅಗ್ರಸ್ಥಾನದ ಮೇಲೆ ಆರ್ಸಿಬಿ ಕಣ್ಣು

ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ತೋರುತ್ತಿರುವ ಹಾಲಿ ಚಾಂಪಿಯನ್ ಆರ್ಸಿಬಿ ತಂಡವು ಇಂದಿನ ಪಂದ್ಯ ಗೆದ್ದರೆ, ಪ್ಲೇ ಆಫ್ ಹಾದಿ ಸುಗಮವಾಗಲಿದೆ. ಮಾತ್ರವಲ್ಲ, ಅಂಕಪಟ್ಟಿಯಲ್ಲಿ ಗುಜರಾತ್ ಟೈಟನ್ಸ್ ಅನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೆ ತಲುಪಲಿದೆ. ಸದ್ಯ, ಆಡಿರುವ 11 ಪಂದ್ಯಗಳಲ್ಲಿ 7 ಗೆಲುವು ಹಾಗೂ 4 ಸೋಲುಗಳೊಂದಿಗೆ 14 ಅಂಕ ಹೊಂದಿರುವ ಆರ್ಸಿಬಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ಹೆಡ್ ಟು ಹೆಡ್

ಕೆಕೆಆರ್ ಹಾಗೂ ಆರ್ಸಿಬಿ ತಂಡಗಳು ಐಪಿಎಲ್ನಲ್ಲಿ ಇದುವರೆಗೂ 35 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್ಸಿಬಿ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಕೆಕೆಆರ್ 20 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಐತಿಹಾಸಿಕವಾಗಿ ಆರ್ಸಿಬಿ ವಿರುದ್ಧ ಕೆಕೆಆರ್ ಮೇಲುಗೈ ಸಾಧಿಸಿದ್ದರೂ, ಈ ಬಾರಿ ಆರ್ಸಿಬಿ ತಂಡವು ಕೆಕೆಆರ್ಗಿಂತಲೂ ಬಲಿಷ್ಠವಾಗಿದೆ.

ಆರ್ಸಿಬಿ ಬಲಾಬಲ

ಪ್ರಸ್ತುತ ಆರ್ಸಿಬಿ ತಂಡವು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಬಲಿಷ್ಠವಾಗಿದೆ. ವಿಶೇಷವಾಗಿ ರಜತ್ ಪಾಟಿದಾರ್, ದೇವದತ್ತ ಪಡಿಕ್ಕಲ್, ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ ಉತ್ತಮ ಲಯದಲ್ಲಿದ್ದಾರೆ. ಇತ್ತ ಬೌಲಿಂಗ್ನಲ್ಲಿ ಭುವನೇಶ್ವರ ಕುಮಾರ್, ಜೋಶ್ ಹೆಜಲ್ವುಡ್ ಉತ್ತಮ ದಾಳಿ ನಡೆಸುತ್ತಿದ್ದಾರೆ. ಆದರೆ, ವಿರಾಟ್ ಕೊಹ್ಲಿ, ರೊಮಾರಿಯೊ ಶೆಫರ್ಡ್ ಹಾಗೂ ಜಿತೇಶ್ ಶರ್ಮಾ ಲಯದಲ್ಲಿ ಇಲ್ಲದಿರುವುದು ತಂಡದ ಚಿಂತೆಗೆ ಕಾರಣವಾಗಿದೆ.

ಕೆಕೆಆರ್ ಬಲಾಬಲ

ಆರಂಭಿಕ ಬ್ಯಾಟರ್ ಫಿನ್ ಅಲೆನ್, ಆಂಗ್ಕ್ರಿಶ್ ರಘುವಂಶಿ, ರಿಂಕು ಸಿಂಗ್ ಉತ್ತಮ ಲಯದಲ್ಲಿದ್ದು, ತಂಡಕ್ಕೆ ಉತ್ತಮ ಕಾಣಿಕೆ ನೀಡುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ವರುಣ್ ಚಕ್ರವರ್ತಿ, ಸುನಿಲ್ ನರೈನ್, ವೈಭವ್ ಅರೋರಾ ಉತ್ತಮ ಲಯದಲ್ಲಿರುವುದು ತಂಡಕ್ಕೆ ಬಲ ತಂದಿದೆ.

ಪಂದ್ಯ ಆರಂಭ: ಸಂಜೆ 7:30

ಸ್ಥಳ: ರಾಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.