ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯ 23ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಮತ್ತು ಲಖನೌ ಸೂಪರ್ ಜೈಂಟ್ಸ್(ಎಲ್ಎಸ್ಜಿ) ತಂಡಗಳು ಮುಖಾಮುಖಿಯಾಗಲಿವೆ.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ನಡೆಯಲಿದೆ.

ಉಭಯ ತಂಡಗಳ ಮುಖಾಮುಖಿಯಲ್ಲಿ ಆರ್ಸಿಬಿ ಬಲಿಷ್ಠ: ಆರ್ಸಿಬಿ ಮತ್ತು ಎಲ್ಎಸ್ಜಿ ತಂಡಗಳು ಇದುವರೆಗೂ ಐಪಿಎಲ್ನಲ್ಲಿ ಒಟ್ಟು 6 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ 4 ಪಂದ್ಯಗಳಲ್ಲಿ ಆರ್ಸಿಬಿ ಗೆದ್ದಿದೆ, ಉಳಿದ 2 ಪಂದ್ಯಗಳಲ್ಲಿ ಎಲ್ಎಸ್ಜಿ ಗೆಲುವು ಸಾಧಿಸಿದೆ. ಉಭಯ ತಂಡಗಳ ಮುಖಾಮುಖಿಯಲ್ಲಿ ಆರ್ಸಿಬಿ ಬಲಿಷ್ಠವಾಗಿದ್ದರೂ, ಲಖನೌ ಗೆದ್ದಿರುವ ಎರಡೂ ಪಂದ್ಯಗಳು ಕೂಡ ಚಿನ್ನಸ್ವಾಮಿ ಮೈದಾನದಲ್ಲಿ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ.

ಭರ್ಜರಿ ಫಾರ್ಮ್ನಲ್ಲಿರುವ ಆರ್ಸಿಬಿ: ರಜತ್ ಪಾಟೀದಾರ್ ನಾಯಕತ್ವದ ಆರ್ಸಿಬಿ ತಂಡವು, ಟೂರ್ನಿಯಲ್ಲಿ ಇದುವರೆಗೂ ಚಾಂಪಿಯನ್ ಆಟ ಆಡುತ್ತಿದೆ. ಹಾಲಿ ಚಾಂಪಿಯನ್ ಆರ್ಸಿಬಿ, ಈ ಆವೃತ್ತಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಿದೆ. ಎಲ್ಲಾ ಪಂದ್ಯಗಳಲ್ಲೂ 200ಕ್ಕೂ ಅಧಿಕ ರನ್ ಬಾರಿಸಿದೆ. ವಿರಾಟ್, ಸಾಲ್ಟ್, ಪಡಿಕ್ಕಲ್, ಟಿಮ್ ಡೇವಿಡ್ ಸೇರಿದಂತೆ ತಂಡದ ಬ್ಯಾಟರ್ಗಳು ಉತ್ತಮ ಲಯದಲ್ಲಿದ್ದಾರೆ. ಆದರೆ, ಎಲ್ಲಾ ಪಂದ್ಯಗಳಲ್ಲೂ ಬೌಲರ್ಗಳು 200ಕ್ಕೂ ಅಧಿಕ ರನ್ ಬಿಟ್ಟುಕೊಟ್ಟಿರುವುದು, ಬ್ಯಾಟರ್ಗಳ ಮೇಲಿನ ಅವಲಂಬನೆಯನ್ನು ಹೆಚ್ಚು ಮಾಡಿದೆ.

ಲಖನೌಗೆ ಬೌಲರ್ಗಳೇ ಪ್ರಮುಖ ಅಸ್ತ್ರ: ಎಲ್ಎಸ್ಜಿ ಪರ ಬ್ಯಾಟರ್ಗಳು ನಿರೀಕ್ಷಿತ ಆಟ ಆಡುವಲ್ಲಿ ವಿಫಲರಾಗಿದ್ದಾರೆ. ಆದರೆ, ಬೌಲರ್ಗಳು ಉತ್ತಮ ಆಟವಾಡುತ್ತಿದ್ದಾರೆ. ಮೊಹಮ್ಮದ್ ಶಮಿ, ಆವೇಶ್ ಖಾನ್, ಮಯಾಂಕ್ ಯಾದವ್, ದಿಗ್ವೇಶ್ ರಾಠಿ, ಪ್ರಿನ್ಸ್ ಯಾದವ್ ಅವರನ್ನು ಒಳಗೊಂಡ ಬೌಲಿಂಗ್ ಪಡೆಯು ಆರ್ಸಿಬಿಯ ಲಯದಲ್ಲಿರುವ ಬ್ಯಾಟರ್ಗಳನ್ನು ಕಟ್ಟಿಹಾಕುವ ಭರವಸೆಯಲ್ಲಿದ್ದಾರೆ.

ಆರ್ಸಿಬಿಗೆ ನಾಯಕನ ಬಲ: ಆರ್ಸಿಬಿ ತಂಡಕ್ಕೆ ನಾಯಕ ರಜತ್ ಪಾಟೀದಾರ್ ಅವರ ಬ್ಯಾಟಿಂಗ್ ಬಲ ನೀಡಿದೆ. 2024ರ ಐಪಿಎಲ್ನಿಂದ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಪಾಟೀದಾರ್, 170ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಅದರಲ್ಲಿ 8 ಅರ್ಧಶತಕಗಳು ಕೂಡ ಸೇರಿವೆ. ಈ ಆವೃತ್ತಿಯಲ್ಲೂ ಅವರ ಫಾರ್ಮ್ ಮುಂದುವರೆದಿದ್ದು, ಆಡಿರುವ 4 ಪಂದ್ಯಗಳಿಂದ 65ರ ಸರಾಸರಿಯಲ್ಲಿ 195 ರನ್ ಗಳಿಸಿದ್ದಾರೆ.

ಆರ್ಸಿಬಿ ವಿರುದ್ಧ ಪಂತ್ ಪ್ರದರ್ಶನ: ಆರ್ಸಿಬಿ ವಿರುದ್ಧ ಪಂತ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಬೆಂಗಳೂರು ವಿರುದ್ಧ 159ರ ಸ್ಟ್ರೈಕ್ರೇಟ್ನಲ್ಲಿ 4 ಅರ್ಧಶತಕ, ಒಂದು ಶತಕ ಸಿಡಿಸಿದ್ದಾರೆ. ಈ ಆವೃತ್ತಿಯಲ್ಲಿ ಎಸ್ಆರ್ಎಚ್ ವಿರುದ್ಧ ಅರ್ಧಶತಕ ಸಿಡಿಸಿದ್ದು ಬಿಟ್ಟರೆ, ಪಂತ್ ಬ್ಯಾಟ್ನಿಂದ ನಿರೀಕ್ಷಿತ ಆಟ ಬಂದಿಲ್ಲ. ಐಪಿಎಲ್ನಲ್ಲಿ ಪಂತ್ ಅವರನ್ನು ಕೃಣಾಲ್ ಪಾಂಡ್ಯ ಅವರು ಮೂರು ಬಾರಿ ಔಟ್ ಮಾಡಿದ್ದಾರೆ. ಹಾಗಾಗಿ, ಎಲ್ಎಸ್ಜಿ ನಾಯಕನ ವಿಕೆಟ್ ಪಡೆಯಲು ಆರ್ಸಿಬಿ ‘ಬೌನ್ಸರ್ ಸ್ಪಿನ್ನರ್’ಗೆ ಬೇಗನೇ ಬೌಲಿಂಗ್ ಕೊಡುವ ಸಾಧ್ಯತೆಯಿದೆ.

ಗಾಯಾಳುಗಳ ಚೇತರಿಕೆ: ಆರ್ಆರ್ ವಿರುದ್ಧದ ಪಂದ್ಯದ ವೇಳೆ ಗಾಯಾಳಾಗಿದ್ದ ಕಾರಣ ಎರಡನೇ ಇನ್ನಿಂಗ್ಸ್ನಲ್ಲಿ ಫೀಲ್ಡಿಂಗ್ ಬರದೇ ಇದ್ದ ವಿರಾಟ್ ಕೊಹ್ಲಿ ಅವರು ಗಾಯದಿಂದ ಚೇತರಿಸಿಕೊಂಡಿದ್ದು, ಎಲ್ಎಸ್ಜಿ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಲಖನೌ ಪರ ಗಾಯಗೊಂಡಿದ್ದ ಮಯಾಂಕ್ ಯಾದವ್ ಹಾಗೂ ಮೊಹ್ಸಿನ್ ಖಾನ್ ಕೂಡ ಚೇತರಿಸಿಕೊಂಡಿದ್ದು, ಆರ್ಸಿಬಿ ವಿರುದ್ದ ಆಡುವ ನಿರೀಕ್ಷೆಯಲ್ಲಿದ್ದಾರೆ.

ಪಿಚ್ ರಿಫೋರ್ಟ್: ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಇದು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು, ಹೈಸ್ಕೋರಿಂಗ್ ಪಂದ್ಯಗಳು ಇಲ್ಲಿ ಸಾಮಾನ್ಯ. ಹಾಗಾಗಿ, ಈ ಪಂದ್ಯದಲ್ಲೂ 200ಕ್ಕೂ ಅಧಿಕ ರನ್ಗಳು ಬರುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.