ಧರ್ಮಶಾಲಾ: ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ (ಶನಿವಾರ) ಮೊದಲ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಬಲಿಷ್ಠ ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದಲ್ಲಿ ಆರ್ಸಿಬಿ ಗೆದ್ದರೆ, ಪ್ಲೇ ಆಫ್ಗೆ ಸ್ಥಾನ ಖಚಿತಪಡಿಸಿಕೊಳ್ಳಲಿದೆ. ಸೋತರೆ, ಪಂಜಾಬ್ ಪ್ಲೇ ಆಫ್ ಆಸೆ ಜೀವಂತವಾಗಿರಲಿದೆ.

ಟೂರ್ನಿಯಲ್ಲಿ 12 ಪಂದ್ಯಗಳನ್ನು ಆಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 8 ಗೆಲುವು ಹಾಗೂ 4 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇತ್ತ, ಟೂರ್ನಿಯಲ್ಲಿ ಮೊದಲ 7 ಪಂದ್ಯಗಳಲ್ಲಿ 6 ಗೆಲುವು ಒಂದು ಪಂದ್ಯ ರದ್ದಾಗಿ 13 ಅಂಕಗಳೊಂದಿಗೆ ಅಜೇಯವಾಗಿದ್ದ ಪಂಜಾಬ್ ಕಿಂಗ್ಸ್ ತಂಡವು, ಕೊನೆಯ 5 ಪಂದ್ಯಗಳಲ್ಲಿ ಸೋಲುವ ಮೂಲಕ ಪ್ಲೇ ಆಫ್ ಪ್ರವೇಶ ಪಡೆಯಲು ಪರದಾಡುತ್ತಿದೆ. ಈ ತಂಡವು ಟೂರ್ನಿಯಲ್ಲಿ 12 ಪಂದ್ಯಗಳನ್ನು ಆಡಿದೆ.

ಪಂಜಾಬ್ ಕಿಂಗ್ಸ್ಗೆ ಇಂದಿನ ಪಂದ್ಯ ನಿರ್ಣಾಯಕ

ಪಂಜಾಬ್ ಕಿಂಗ್ಸ್ ತಂಡವನ್ನು ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕು ಎಂದರೆ, ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಒಂದುವೇಳೆ, ಇಂದು ಸೋತು ಮುಂದಿನ ಪಂದ್ಯವನ್ನು ಗೆದ್ದರೆ, ಅಂಕಪಟ್ಟಿಯಲ್ಲಿ 15 ಅಂಕ ಪಡೆಯಲಿದೆ. ಆಗ, ಸಿಎಸ್ಕೆ ಹಾಗೂ ರಾಜಸ್ಥಾನ ರಾಯಲ್ಸ್ ಹಾಗೂ ಎಸ್ಆರ್ಎಚ್ ತಂಡಗಳಿಗೆ ಮುಂದಿನ ಹಂತ ತಲುಪಲು ಅವಕಾಶ ಹೆಚ್ಚಿರುತ್ತದೆ.

ಆಗ್ರಸ್ಥಾನ ಭದ್ರಪಡಿಸಿಕೊಳ್ಳಲು ಉತ್ತಮ ಅವಕಾಶ

ಬಲಿಷ್ಠವಾಗಿರುವ ಆರ್ಸಿಬಿ ತಂಡಕ್ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆಯಲು ಉತ್ತಮ ಅವಕಾಶ ಇದೆ. ಸೋಲಿನ ಸುಳಿಯಲ್ಲಿರುವ ಪಂಜಾಬ್ ತಂಡವನ್ನು ಮಣಿಸಿದರೆ, ಆರ್ಸಿಬಿ ಪ್ಲೇ ಆಫ್ ಸ್ಥಾನ ಖಚಿತವಾಗಲಿದೆ ಮತ್ತು ಲೀಗ್ ಅನ್ನು ಟಾಪ್–2ರೊಳಗೆ ಮುಗಿಸುವ ಉತ್ತಮ ಅವಕಾಶ ಇರಲಿದೆ. ಜೊತೆಗೆ ಪ್ಲೇ ಆಫ್ ಪೈಪೋಟಿಯನ್ನು ಇನ್ನಷ್ಟು ರೋಮಾಂಚನಗೊಳಿಸಲಿದೆ.

ಸಿಎಸ್ಕೆ, ಆರ್ಆರ್, ಎಸ್ಆರ್ಎಚ್ ಹಾಗೂ ಕೆಕೆಆರ್ ತಂಡಗಳಿಗಿರುವ ಅವಕಾಶ

ಐದು ಬಾರಿಯ ಚಾಂಪಿಯನ್ ಸಿಎಸ್ಕೆ ತಂಡವು ಬಾಕಿ ಉಳಿದಿರುವ 2 ಪಂದ್ಯಗಳನ್ನು ಉತ್ತಮ ರನ್ರೇಟ್ನೊಂದಿಗೆ ಗೆಲ್ಲಬೇಕು. ಇತ್ತ ರಾಜಸ್ಥಾನ ರಾಯಲ್ಸ್ 3 ಪಂದ್ಯಗಳಲ್ಲಿ ಎರಡರಲ್ಲಿ ಸೋಲಬೇಕು. ಇನ್ನೂ, ಎಸ್ಆರ್ಎಚ್ ತಂಡ ಕೂಡ ಬಾಕಿ ಉಳಿದ ಎರಡು ಪಂದ್ಯಗಳಲ್ಲಿ ಎರಡರಲ್ಲಿ ಕನಿಷ್ಠ ಒಂದು ಪಂದ್ಯ ಸೋಲಬೇಕು. ಇದರ ಜೊತೆಗೆ, ಪಂಜಾಬ್ ಕೂಡ ಎರಡು ಪಂದ್ಯಗಳಲ್ಲಿ ಒಂದನ್ನು ಸೋತರೂ ಸಿಎಸ್ಕೆಗೆ ಅವಕಾಶ ಇರಲಿದೆ. ಒಂದುವೇಳೆ, ಸಿಎಸ್ಕೆ ಎರಡರಲ್ಲಿ ಒಂದು ಪಂದ್ಯ ಸೋತರೂ ಟೂರ್ನಿಯಿಂದ ಹೊರಗುಳಿಯಲಿದೆ.

ಇನ್ನೂ, ಆರ್ಆರ್ ತಂಡವು ಬಾಕಿ ಉಳಿದಿರುವ 3 ಪಂದ್ಯಗಳಲ್ಲಿ ಮೂರನ್ನೂ ಗೆದ್ದರೆ, ಸುಲಭವಾಗಿ ಪ್ಲೇ ಆಫ್ ತಲುಪಲಿದೆ. ಒಂದರಲ್ಲಿ ಸೋತರೂ ರನ್ರೇಟ್, ತಂಡದ ಪ್ಲೇ ಆಫ್ ಹಾದಿಯನ್ನು ನಿರ್ಧರಿಸಿಲಿದೆ. ಎರಡರಲ್ಲಿ ಸೋತು ಒಂದು ಗೆದ್ದರೂ ಆರ್ಆರ್ ಪ್ಲೇ ಆಫ್ ಕನಸು ನುಚ್ಚುನೂರಾಗಲಿದೆ.

ಎಸ್ಆರ್ಎಚ್ ತಂಡವು ಈಗಾಗಲೇ 14 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಒಂದುವೇಳೆ, ಬಾಕಿ ಉಳಿದಿರುವ 2 ಪಂದ್ಯಗಳಲ್ಲಿ ಎರಡನ್ನೂ ಗೆದ್ದರೆ, ಸುಲಭವಾಗಿ ಪ್ಲೇ ಆಫ್ ಪ್ರವೇಶಿಸಲಿದೆ. ಒಂದುವೇಳೆ, ಒಂದು ಪಂದ್ಯ ಸೋತು, ಒಂದು ಗೆದ್ದರೆ ರನ್ರೇಟ್ ಮೊರೆ ಹೋಗಬೇಕಾಗುತ್ತದೆ. ಎಸ್ಆರ್ಎಚ್ ಬಾಕಿ ಉಳಿದ 2 ಪಂದ್ಯಗಳಲ್ಲಿ ಎರಡನ್ನೂ ಸೋತರೆ ಟೂರ್ನಿಯಿಂದ ಹೊರಬೀಳಲಿದೆ.

ಕೆಕೆಕೆಆರ್ ತಂಡಕ್ಕೂ ಪ್ಲೇ ಆಫ್ ತಲುಪುವ ಕೊಂಚ ಅವಕಾಶ ಇದೆ. ಅವರು ಬಾಕಿ ಉಳಿದಿರುವ ಎರಡು ಪಂದ್ಯಗಳಲ್ಲಿ ಎರಡರಲ್ಲಿ ಗೆಲ್ಲುವುದರ ಜೊತೆಗೆ ಉಳಿದ ತಂಡಗಳ ಸೋಲು ಗೆಲುವು ಕೆಕೆಆರ್ ಪ್ಲೇ ಆಫ್ ಹಾದಿಯನ್ನು ನಿರ್ಧರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.