ಹೈದರಾಬಾದ್: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು (ಮೇ 22) ಐಪಿಎಲ್ 2026ನೇ ಆವೃತ್ತಿಯ ತಮ್ಮ ಕೊನೆಯ ಪಂದ್ಯವನ್ನು ಆಡಲು ಸಜ್ಜಾಗಿದೆ. ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದವು. ಅಂದಿನ ಪಂದ್ಯದಲ್ಲಿ ಆರ್ಸಿಬಿ ಗೆಲ್ಲುವ ಮೂಲಕ ಶುಭಾರಂಭ ಮಾಡಿತ್ತು. ಸದ್ಯ, ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿರುವ ಆರ್ಸಿಬಿ ತಂಡವು ಕಡಿಮೆ ಅಂತರದಲ್ಲಿ ಸೋತರೂ ಟಾಪ್–2ರಲ್ಲಿಯೇ ಲೀಗ್ ಅನ್ನು ಮುಕ್ತಾಯಗೊಳಿಸಲಿದೆ. ಒಂದುವೇಳೆ ಈ ಪಂದ್ಯವನ್ನು ದೊಡ್ಡ ಅಂತರದಲ್ಲಿ ಸೋತರೆ, ಎಸ್ಆರ್ಎಚ್ ಗುಜರಾತ್ ಅನ್ನು ಹಿಂದಿಕ್ಕಿ ಅಗ್ರ ಎರಡರೊಳಗೆ ಲೀಗ್ ಮುಗಿಸುವ ಸಾಧ್ಯತೆ ಇದೆ.

ಈ ಪಂದ್ಯವನ್ನು ಆರ್ಸಿಬಿ ಗೆದ್ದರೆ, ಅಗ್ರಸ್ಥಾನ ಅಬಾಧಿತವಾಗಿರಲಿದೆ. ಒಂದುವೇಳೆ ಸೋತರೆ, ರನ್ರೇಟ್ ಎಸ್ಆರ್ಎಚ್ ತಂಡದ ಅಗ್ರ–2 ಸ್ಥಾನಗಳನ್ನು ನಿರ್ಧರಿಸಲಿದೆ.

ಐಪಿಎಲ್ನಲ್ಲಿ ಉಭಯ ತಂಡಗಳ ಹೆಡ್ ಟು ಹೆಡ್

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಉಭಯ ತಂಡಗಳು 26 ಭಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಎಸ್ಆರ್ಎಚ್ 14 ಪಂದ್ಯಗಳಲ್ಲಿ ಗೆದ್ದರೆ, ಆರ್ಸಿಬಿ 12 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.

ಆರ್ಸಿಬಿ ತಂಡವು ಆಡಿರುವ 13 ಪಂದ್ಯಗಳಲ್ಲಿ 9 ಗೆಲುವು ಹಾಗೂ 4 ಸೋಲುಗಳೊಂದಿಗೆ 18 ಅಂಕಗಳ ಸಹಿತ ಅಗ್ರಸ್ಥಾನದಲ್ಲಿದೆ. ಇನ್ನೊಂದೆಡೆ, ಇಷ್ಟೇ ಪಂದ್ಯಗಳನ್ನು ಆಡಿರುವ ಎಸ್ಆರ್ಎಚ್ 8 ಗೆಲುವು 5 ಸೋಲುಗಳೊಂದಿಗೆ 16 ಅಂಕ ಗಳಿಸಿದೆ. ಅದರೊಂದಿಗೆ ಮೂರನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.