ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: PBKS vs KKR – ರಾಹುಲ್ ಬಳಗಕ್ಕೆ ಇಂದು ಮಾರ್ಗನ್‌ ಪಡೆಯ ಸವಾಲು

ಪಂಜಾಬ್‌ಗೆ ಜಯ ಮುಂದುವರಿಸುವ ತವಕ
Last Updated 25 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌: ಸತತ ಸೋಲಿನ ಸರಪಣಿ ಕಳಚಿಕೊಂಡು ಜಯದ ಹಾದಿಗೆ ಮರಳಿರುವ ಪಂಜಾಬ್ ಕಿಂಗ್ಸ್ ತಂಡವು ಸೋಮವಾರ ಕೋಲ್ಕತ್ತ ನೈಟ್ ರೈಡರ್ಸ್ ಸವಾಲಿಗೆ ಸಜ್ಜಾಗಿದೆ. ಇಲ್ಲಿಯ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉಭಯ ತಂಡಗಳ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದೆ.

ಟೂರ್ನಿಯಲ್ಲಿ ಜಯದ ಆರಂಭ ಮಾಡಿದ್ದ ಕೆ.ಎಲ್‌.ರಾಹುಲ್ ಸಾರಥ್ಯದ ಪಂಜಾಬ್‌, ನಂತರ ಸತತ ಮೂರು ಪಂದ್ಯಗಳಲ್ಲಿ ನಿರಾಸೆ ಅನುಭವಿಸಿತ್ತು. ಶುಕ್ರವಾರ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ವಿರುದ್ಧ ಒಂಬತ್ತು ವಿಕೆಟ್‌ಗಳ ಜಯ ಗಳಿಸಿ ಆತ್ಮವಿಶ್ವಾಸ ಮರಳಿ ಪಡೆದಿದೆ. ಸತತ ನಾಲ್ಕು ಪಂದ್ಯಗಳಲ್ಲಿ ಸೋತಿರುವ ಕೋಲ್ಕತ್ತ ತಂಡಕ್ಕೂ ಗೆಲುವು ಬೇಕಾಗಿದೆ.

ಸ್ಥಿರ ಸಾಮರ್ಥ್ಯ ತೋರುತ್ತಿರುವ ರಾಹುಲ್‌, ಮುಂಬೈ ಎದುರಿನ ಪಂದ್ಯದಲ್ಲೂ ಅಜೇಯ ಅರ್ಧಶತಕ (60) ಗಳಿಸಿದ್ದರು. ಕೇವಲ ಒಂದು ಪಂದ್ಯದಲ್ಲಿ ಮಿಂಚಿರುವ ದೀಪಕ್ ಹೂಡಾ ಲಯಕ್ಕೆ ಮರಳಬೇಕಿದೆ. ನಿಕೋಲಸ್‌ ಪೂರನ್‌ ಕೂಡ ಸಾಮರ್ಥ್ಯ ತೋರಬೇಕಿದೆ. ಸ್ಪಿನ್ನರ್ ರವಿ ಬಿಷ್ಣೋಯಿ ಹಾಗೂ ವೇಗಿ ಮೊಹಮ್ಮದ್‌ ಶಮಿ ಮುಂಬೈ ಎದುರು ಪರಿಣಾಮಕಾರಿ ಬೌಲಿಂಗ್ ಮಾಡಿದ್ದು, ತಂಡದ ನಿರೀಕ್ಷೆ ಹೆಚ್ಚಿಸಿದ್ದಾರೆ.

ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಎಡವಿರುವ ಏಯಾನ್ ಮಾರ್ಗನ್ ನೇತೃತ್ವದ ಕೋಲ್ಕತ್ತ, ಈ ಹಣಾಹಣಿಯಲ್ಲಿ ಜಯ ನಿರೀಕ್ಷಿಸುತ್ತಿದೆ. ಇದುವರೆಗೆ ಎರಡು ಅರ್ಧಶತಕ ದಾಖಲಿಸಿರುವ ನಿತೀಶ್ ರಾಣಾ ಹಾಗೂ ದಿನೇಶ್ ಕಾರ್ತಿಕ್ ಆ ತಂಡದ ಬ್ಯಾಟಿಂಗ್‌ನಲ್ಲಿ ಮಿಂಚಿದ್ದಾರೆ. ಇನ್ನುಳಿದವರ ವೈಫಲ್ಯ ಕಳವಳಕ್ಕೆ ಕಾರಣವಾಗಿದೆ. ವೇಗಿ ಪ್ಯಾಟ್ ಕಮಿನ್ಸ್, ಚೆನ್ನೈ ಎದುರಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದರೂ ತಂಡವು ಸೋಲಿನಿಂದ ಪಾರಾಗಿರಲಿಲ್ಲ.

ಶುಭಮನ್ ಗಿಲ್ ಹಾಗೂ ಸ್ವತಃ ನಾಯಕ ಮಾರ್ಗನ್‌ ದೊಡ್ಡ ಮೊತ್ತ ಗಳಿಸುವಲ್ಲಿ ಯಶಸ್ವಿಯಾಗಿಲ್ಲ. ಬೌಲಿಂಗ್‌ನಲ್ಲಿ ವರುಣ್ ಚಕ್ರವರ್ತಿ, ಪ್ರಸಿದ್ಧ ಕೃಷ್ಣ, ಆ್ಯಂಡ್ರೆ ರಸೆಲ್‌ ಮೇಲೆಕೋಲ್ಕತ್ತ ನಿರೀಕ್ಷೆ ಇಟ್ಟುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT