ನವದೆಹಲಿ: ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಅವರಿಗೆ ಪಂದ್ಯದ ಸಂಭಾವನೆಯ ಶೇ 25ರಷ್ಟು ಮೊತ್ತವನ್ನು ದಂಡ ವಿಧಿಸಲಾಗಿದೆ.

ಈಚೆಗೆ ಮುಲ್ಲನಪುರದಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದ ಸಂದರ್ಭದಲ್ಲಿ ರಿಯಾನ್ ಅವರು ಡ್ರೆಸಿಂಗ್ ಕೋಣೆಯಲ್ಲಿ ಇ ಸಿಗರೇಟ್ ಬಳಸಿ ಧೂಮಪಾನ ಮಾಡುತ್ತಿದ್ದರು. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅವರ ನಡವಳಿಕೆಯು ಕ್ರಿಕೆಟ್ಗೆ ‘ಅಪಖ್ಯಾತಿ’ ಉಂಟು ಮಾಡಿದೆ ಎಂದು ದಂಡ ವಿಧಿಸಲಾಗಿದೆ.

ಆ ಪಂದ್ಯದ ಫೀಲ್ಡ್ ಅಂಪೈರ್ಗಳಾದ ನಿತಿನ್ ಮೆನನ್ ಮತ್ತು ತನ್ಮಯ್ ಶ್ರೀವಾಸ್ತವ ಅವರು ರಿಯಾನ್ ನಡವಳಿಕೆ ಕುರಿತು ಪಂದ್ಯದ ಸಂದರ್ಭದಲ್ಲಿ ವರದಿ ಮಾಡಿರಲಿಲ್ಲ. ಆದರೆ ವಿಡಿಯೊ ದೃಶ್ಯಗಳನ್ನು ನೋಡಿದ ನಂತರ ಅಂಪೈರ್ಗಳು ರೆಫರಿ ಅಮಿತ್ ಶರ್ಮಾ ಅವರಿಗೆ ವರದಿ ಸಲ್ಲಿಸಿದ್ದಾರೆ. ವರದಿ ಮತ್ತು ವಿಡಿಯೊಗಳನ್ನು ಪರಿಶೀಲಿಸಿದ ನಂತರ ಶರ್ಮಾ ಅವರು ಐಪಿಎಲ್ ನಿಯಮ ಲೆವೆಲ್ 1 ಅಪರಾಧ ಎಂದು ಪರಿಗಣಿಸಿದ್ದಾರೆ. ಪಂದ್ಯ ಶುಲ್ಕದ ಶೇ 25ರಷ್ಟು ಮೊತ್ತದ ದಂಡ ವಿಧಿಸಲು ಪರಾಗ್ ಅವರಿಗೆ ತಿಳಿಸಲಾಗಿದೆ. ಒಂದು ಡಿಮೆರಿಟ್ ಪಾಯಿಂಟ್ ಕೂಡ ವಿಧಿಸಲಾಗಿದೆ.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ, ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ. ತಂಡದ ಅಧಿಕಾರಿಗಳು ಮತ್ತು ಆಟಗಾರರು ಐಪಿಎಲ್ ಘನತೆಯು ಮುಕ್ಕಾಗದಂತೆ ನೋಡಿಕೊಳ್ಳಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಪ್ರಕಟಣೆಯಲ್ಲಿ ತಿಳಿಸಿದಂತೆ ತಂಡದ ಮೇಲೆ ಏನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಆದರೆ ಇಲ್ಲಿಯವರೆಗೂ ಯಾವುದೇ ನಿರ್ಣಯ ಕೈಗೊಂಡಿಲ್ಲ’ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ಪಿಟಿಐಗೆ ತಿಳಿಸಿದ್ದಾರೆ.

2019ರಲ್ಲಿಯೇ ಭಾರತ ಸರ್ಕಾರವು ಇ–ಸಿಗರೇಟ್ ಉತ್ಪಾದನೆ, ಮಾರಾಟ ಮತ್ತು ಹಂಚಿಕೆಯನ್ನು ನಿಷೇಧಿಸಿದೆ. ಇ–ಸಿಗರೇಟ್ ಬಳಕೆ ಕಾನೂನುಬಾಹಿರವಾಗಿದೆ. ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.