ಸೋಮವಾರ, ಅಕ್ಟೋಬರ್ 26, 2020
26 °C

ಚೆಂಡಿಗೆ ಎಂಜಲು ಹಚ್ಚಿದ ಉತ್ತಪ್ಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಬುಧವಾರದ ಪಂದ್ಯದಲ್ಲಿ ಐಸಿಸಿ ನಿಗದಿಪಡಿಸಿರುವ ಕೋವಿಡ್ –19 ತಡೆ ನಿಯಮವನ್ನು ಉಲ್ಲಂಘಿಸಿದ್ದಾರೆ. ಅವರು ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಚೆಂಡಿಗೆ ಎಂಜಲು ಹಚ್ಚಿರುವುದು ನಿಯಮದ ಉಲ್ಲಂಘನೆಯಾಗಿದೆ.

ಕೊರೊನಾ ವೈರಸ್ ತಡೆಗಾಗಿ ಕ್ರಿಕೆಟ್‌ನಲ್ಲಿ ಚೆಂಡಿನ ಹೊಳಪು ಹೆಚ್ಚಿಸಲು ಎಂಜಲು ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ, ಕೋಲ್ಕತ್ತ ನೈಟ್ ರೈಡರ್ಸ್  ಎದುರಿನ ಪಂದ್ಯದಲ್ಲಿ  ಇನಿಂಗ್ಸ್‌ನ ಮೂರನೇ ಓವರ್‌ನ ಐದನೇ ಎಸೆತದಲ್ಲಿ ಸುನಿಲ್ ನಾರಾಯಣ್ ಕ್ಯಾಚ್‌ ಅನ್ನು ಉತ್ತಪ್ಪ ಕೈಚೆಲ್ಲಿದರು. ನಂತರ ಚೆಂಡನ್ನು ಹಿಡಿದ ಅವರು ಬೌಲರ್‌ನತ್ತ ಎಸೆಯುವ ಮುನ್ನ ಎಂಜಲು ಹಾಕಿ ಹೊಳಪುಗೊಳಿಸಿದರು. ಈ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆದರೆ ಇದುವರೆಗೆ ಐಸಿಸಿಯಿಂದ ಯಾವುದೇ ಕ್ರಮ ಅಥವಾ ಎಚ್ಚರಿಕೆ ಸಂದೇಶವು ರಾಬಿನ್‌ಗೆ ಬಂದಿಲ್ಲವೆನ್ನಲಾಗಿದೆ. 

‘ಇಂತಹ ಸಂದರ್ಭದಲ್ಲಿ ತಂಡವು ಆಟಗಾರನಿಗೆ ಎಚ್ಚರಿಕೆ ನೀಡಬಹುದಾಗಿದೆ. ಎರಡು ಎಚ್ಚರಿಕೆಗಳ ನಂತರವೂ ಅದೇ ಚಾಳಿ ಮುಂದುವರಿಸಿದರೆ ಐದು ರನ್‌ಗಳ ದಂಡವನ್ನು ತಂಡಕ್ಕೆ ವಿಧಿಸಲಾಗುತ್ತದೆ’ ಎಂದು ನಿಯಮ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು