ರಾಬಿನ್ ಉತ್ತಪ್ಪ ಅಬ್ಬರ: ಕೇರಳಕ್ಕೆ ಜಯ

ಮುಂಬೈ: ‘ಕೊಡಗಿನ ಹುಡುಗ‘ ರಾಬಿನ್ ಉತ್ತಪ್ಪ (91; 54ಎಸೆತ, 3ಬೌಂಡರಿ, 8ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಬಲದಿಂದ ಕೇರಳ ತಂಡವು 6 ವಿಕೆಟ್‌ಗಳಿಂದ ದೆಹಲಿ ತಂಡದ ಎದುರು ಜಯಿಸಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶಿಖರ್ ಧವನ್ ನಾಯಕತ್ವದ ದೆಹಲಿ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 212 ರನ್ ಗಳಿಸಿತು. ಧವನ್ 48 ಎಸೆತಗಳಲ್ಲಿ 77 ರನ್ ಗಳಿಸಿದರು.
ಕೇರಳದ ಎಸ್. ಶ್ರೀಶಾಂತ್ ಎರಡು ವಿಕೆಟ್ ಗಳಿಸಿದರು. ಗುರಿ ಬೆನ್ನಟ್ಟಿದ್ದ ಕೇರಳವು 19 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 218 ರನ್ ಗಳಿಸಿತು.
ಸಂಕ್ಷಿಪ್ತ ಸ್ಕೋರು: ದೆಹಲಿ: 20 ಓವರ್‌ಗಳಲ್ಲಿ 4ಕ್ಕೆ 212 (ಶಿಖರ್ ಧವನ್ 77, ಹಿಮ್ಮತ್ ಸಿಂಗ್ 26, ಲಲಿತ್ ಯಾದವ್ 52, ಅನುಜ್ ರಾವತ್ ಔಟಾಗದೆ 27, ಎಸ್. ಶ್ರೀಶಾಂತ್ 46ಕ್ಕೆ2) ಕೇರಳ: 19 ಓವರ್‌ಗಳಲ್ಲಿ 4ಕ್ಕೆ218 (ರಾಬಿನ್ ಉತ್ತಪ್ಪ 91, ಸಚಿನ್ ಬೇಬಿ 22, ವಿಷ್ಣು ವಿನೋದ್ ಔಟಾಗದೆ 71, ಇಶಾಂತ್ ಶರ್ಮಾ 48ಕ್ಕೆ1, ಸಿಮ್ರನ್‌ಜೀತ್ ಸಿಂಗ್ 52ಕ್ಕೆ1, ಪ್ರದೀಪ್ ಸಂಗ್ವಾನ್ 39ಕ್ಕೆ1, ಲಲಿತ್ ಯಾದವ್ 33ಕ್ಕೆ1) ಫಲಿತಾಂಶ: ಕೇರಳ ತಂಡಕ್ಕೆ 6 ವಿಕೆಟ್‌ಗಳ ಜಯ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.