ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿತ್‌ಗೆ ದಂಡ

Last Updated 29 ಏಪ್ರಿಲ್ 2019, 15:36 IST
ಅಕ್ಷರ ಗಾತ್ರ

ಕೋಲ್ಕತ್ತ: ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡ ಕಾರಣ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾಗೆ ಐಪಿಎಲ್‌ ಶಿಸ್ತು ಸಮಿತಿಯು ಪಂದ್ಯದ ಸಂಭಾವನೆಯ ಶೇಕಡ 15ರಷ್ಟು ದಂಡ ವಿಧಿಸಿದೆ.

ಭಾನುವಾರ ನಡೆದಿದ್ದ ಕೋಲ್ಕತ್ತ ನೈಟ್‌ರೈಡರ್ಸ್‌ ಎದುರಿನ ಪಂದ್ಯದ ವೇಳೆ ಹ್ಯಾರಿ ಗರ್ನಿ ಹಾಕಿದ ಎಸೆತ ರೋಹಿತ್‌ ಅವರ ಪ್ಯಾಡ್‌ಗೆ ಬಡಿದಿತ್ತು. ಗರ್ನಿ ಅವರ ಎಲ್‌ಬಿಡಬ್ಲ್ಯು ಮನವಿಯನ್ನು ಅಂಗಳದ ಅಂಪೈರ್‌ ಪುರಸ್ಕರಿಸಿದ್ದರು. ಕೂಡಲೇ ರೋಹಿತ್‌ ಡಿಆರ್‌ಎಸ್‌ ಮೊರೆ ಹೋಗಿದ್ದರು. ಚೆಂಡು, ಬ್ಯಾಟಿನ ಒಳ ಅಂಚಿಗೆ ತಾಗಿತ್ತು ಎಂಬ ವಿಶ್ವಾಸ ಅವರದ್ದಾಗಿತ್ತು. ಆದರೆ ‘ಸ್ನಿಕೊ ಮೀಟರ್‌’ನಲ್ಲಿ ಚೆಂಡು ಬ್ಯಾಟಿಗೆ ತಾಗಿಲ್ಲ ಎಂಬುದು ದೃಢಪಟ್ಟಿತ್ತು. ಹೀಗಾಗಿ ಟಿ.ವಿ.ಅಂಪೈರ್‌, ಅಂಗಳದ ಅಂಪೈರ್‌ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದ್ದರು.

ಇದರಿಂದ ಕುಪಿತಗೊಂಡ ರೋಹಿತ್‌, ಪೆವಿಲಿಯನ್‌ನತ್ತ ಹೆಜ್ಜೆ ಹಾಕುವಾಗ ಅಂಪೈರ್‌ಗೆ ಏನನ್ನೊ ಹೇಳಿದರಲ್ಲದೇ, ಬಲಗೈಯಲ್ಲಿ ಹಿಡಿದಿದ್ದ ಬ್ಯಾಟನ್ನು ವಿಕೆಟ್‌ಗೆ ತಾಗಿಸಿ ಬೇಲ್ಸ್‌ ಬೀಳಿಸಿದ್ದರು.

ಈ ಪಂದ್ಯದಲ್ಲಿ ಮುಂಬೈ ತಂಡ 34ರನ್‌ಗಳಿಂದ ಸೋತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT