ಗುರುವಾರ , ಡಿಸೆಂಬರ್ 3, 2020
23 °C

ಫೈನಾನ್ಸ್‌ಪಿಯರ್‌ಗೆ ರೋಹಿತ್‌ ಶರ್ಮಾ ಪ್ರಚಾರ ರಾಯಭಾರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಶಿಕ್ಷಣ ಶುಲ್ಕಕ್ಕೆ ಹಣಕಾಸು ಒದಗಿಸುವ ಫೈನಾನ್ಸ್‌ಪಿಯರ್‌ ಸಂಸ್ಥೆಯು ಭಾರತ ಕ್ರಿಕೆಟ್‌ ತಂಡದ ಆಟಗಾರ ರೋಹಿತ್ ಶರ್ಮಾ ಅವರನ್ನು ಪ್ರಚಾರ ರಾಯಭಾರಿಯಾಗಿ ಮಾಡಿಕೊಂಡಿದೆ.

ಶಿಕ್ಷಣ ಕ್ಷೇತ್ರದಲ್ಲಿ ಪರಿವರ್ತನೆ ತರಲು ಮತ್ತು ಶಿಕ್ಷಣದ ವಿವಿಧ ಹಂತಗಳಲ್ಲಿ ಹೊಸತನವನ್ನು ಪರಿಚಯಿಸುವ ಉದ್ದೇಶದೊಂದಿಗೆ ಫೈನಾನ್ಸ್‌ಪಿಯರ್‌ ಜೊತೆ ರೋಹಿತ್‌ ಕೈಜೋಡಿಸಿದ್ದಾರೆ.

ಹಣಕಾಸು ಸೇವೆ ಅಲ್ಲದೆ ವಿಮಾ ರಕ್ಷಣೆ ಹಾಗೂ ಆನ್‌ಲೈಕ್‌ ಕಲಿಕೆಗೆ ವೇದಿಕೆಯನ್ನೂ ಫೈನಾನ್ಸ್‌ಪಿಯರ್‌ ಒದಗಿಸುತ್ತಿದೆ.

‘ಫೈನಾನ್ಸ್‌ಪಿಯರ್‌ನೊಂದಿಗೆ ಕೈಜೋಡಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ಅತ್ಯಂತ ಪ್ರಮುಖವಾದ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿ ಕಂಪನಿಯು ಸೇವೆಯಲ್ಲಿ ನಿರತವಾಗಿದೆ‘ ಎಂದು ರೋಹಿತ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು