ಮುಂಬೈ: ಅನುಕ್ರಮವಾಗಿ ಐಸಿಸಿ ಟ್ವೆಂಟಿ-20 ಹಾಗೂ ಏಕದಿನ ವಿಶ್ವಕಪ್ ಗೆದ್ದ ಭಾರತದ ಪುರುಷ ಹಾಗೂ ಮಹಿಳಾ ತಂಡಗಳಿಗೆ ‘ಹಿಟ್ಮ್ಯಾನ್’ ಖ್ಯಾತಿಯ ಮಾಜಿ ನಾಯಕ ರೋಹಿತ್ ಶರ್ಮಾ ಸಂದೇಶವನ್ನು ನೀಡಿದ್ದಾರೆ.

'ಭಾರತೀಯ ಪುರುಷ ಹಾಗೂ ಮಹಿಳಾ ತಂಡಗಳು ಗೆಲುವಿನ ಇದೇ ಆವೇಗವನ್ನು ಮುಂದುವರಿಸಲಿದ್ದು, ದೇಶಕ್ಕೆ ಹೆಚ್ಚಿನ ಕೀರ್ತಿ ಹಾಗೂ ಯಶಸ್ಸು ತಂದುಕೊಡಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2024ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಜಯಿಸಿತ್ತು. ಈಗ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಸತತ ಎರಡನೇ ಸಲ ವಿಶ್ವಕಪ್ ಗೆದ್ದ ಸಾಧನೆ ಮಾಡಿತು.

ಮತ್ತೊಂದೆಡೆ 2025ರಲ್ಲಿ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡವು ಏಕದಿನ ವಿಶ್ವಕಪ್ ಜಯಿಸಿತ್ತು. ಆ ಮೂಲಕ ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡವು ಜೈತ್ರಯಾತ್ರೆ ಮುಂದುವರಿಸಿದೆ.

'ಕಳೆದ ಎರಡು ವರ್ಷಗಳಲ್ಲಿ ಭಾರತದ ನಿರ್ವಹಣೆ ನೋಡಿ ತುಂಬಾ ಹೆಮ್ಮೆಯಾಗುತ್ತಿದೆ' ಎಂದು ಮುಂಬೈ ಟಿ20 ಲೀಗ್ ರಾಯಭಾರಿ ಆಗಿರುವ ರೋಹಿತ್ ತಿಳಿಸಿದರು.

'ಐಸಿಸಿ ಟೂರ್ನಿಗಳಲ್ಲಿ ಭಾರತ ಉತ್ತಮ ಪ್ರದರ್ಶನ ಮುಂದುವರಿಸಬೇಕಿದೆ. ಇದು ಕೇವಲ ಆರಂಭ ಮಾತ್ರ. ಈ ಎಲ್ಲ ಯಶಸ್ಸಿನ ಹಿಂದೆ ಯಾವುದೇ ರಹಸ್ಯವಿಲ್ಲ. ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯವಾಗಿದೆ' ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ತೆರೆಯ ಹಿಂದೆ ಕಲಸ ಮಾಡಿದ ವ್ಯಕ್ತಿಗಳನ್ನು ರೋಹಿತ್ ಮೆಲುಕು ಹಾಕಿದ್ದಾರೆ. 'ಈ ಯಶಸ್ಸು ಸಾಧಿಸಲು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು' ಎಂದು ತಿಳಿಸಿದ್ದಾರೆ.

'ಕ್ರಿಕೆಟ್ನಲ್ಲಿ ಹೆಚ್ಚು ಸ್ಪರ್ಧೆಯಿದೆ. ನೀವು ಯಶಸ್ಸನ್ನು ಕಂಡುಕೊಳ್ಳಲು ಪ್ರತಿಭೆಯೂ ಇರಬೇಕು. ಕೆಲವೊಮ್ಮೆ ಎಷ್ಟೇ ಪ್ರತಿಭಾನ್ವಿತರಾಗಿದ್ದರೂ ಸರಿಯಾಗಿ ಗುರುತಿಸಿಕೊಳ್ಳದಿದ್ದರೆ ದುರದೃಷ್ಟವಂತರಾಗಬಹುದು. ಹಾಗಾಗಿ ಅದೃಷ್ಟದ ಜೊತಗೆ ಕಠಿಣ ಪರಿಶ್ರಮಕ್ಕೆ ಯಾವುದೇ ಪರ್ಯಾಯವಿಲ್ಲ' ಎಂದು ತಿಳಿಸಿದ್ದಾರೆ.

ಟಿ20 ವಿಶ್ವಕಪ್ ವಿಜೇತ ನಾಯಕ ರೋಹಿತ್ ಶರ್ಮಾ ಸದ್ಯ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಆಡುತ್ತಿದ್ದಾರೆ.
.ಪಿತೃವಿಯೋಗದ ಮುಂದೆ ವಿಶ್ವಕಪ್ ಸ್ಥಾನ ಸಿಗದ ಬೇಸರ ಗೌಣ: ಜಿತೇಶ್ ಶರ್ಮಾ.ವಿಶ್ವಕಪ್ ಗೆದ್ದ ಬೆನ್ನಲ್ಲೆ ಹಾರ್ದಿಕ್ ಪಾಂಡ್ಯಾಗೆ ಸಂಕಷ್ಟ: ದೂರು ದಾಖಲಿಸಿದ ವಕೀಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.