ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಮೂರೂ ಮಾದರಿಯ ಅಗ್ರ ಹತ್ತರೊಳಗೆ ರೋಹಿತ್‌ ಶರ್ಮಾ

Last Updated 23 ಅಕ್ಟೋಬರ್ 2019, 19:10 IST
ಅಕ್ಷರ ಗಾತ್ರ

ದುಬೈ: ಆರಂಭ ಆಟಗಾರ ರೋಹಿತ್‌ ಶರ್ಮಾ, ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಐಸಿಸಿ ಕ್ರಮಾಂಕಪಟ್ಟಿಯ ಅಗ್ರ ಹತ್ತರೊಳಗೆ ಸ್ಥಾನ ಪಡೆದ ಭಾರತದ ಮೂರನೇ ಆಟಗಾರ ಎನಿಸಿದರು.

ನಾಯಕ ವಿರಾಟ್‌ ಕೊಹ್ಲಿ ಮತ್ತು ಮಾಜಿ ಆರಂಭ ಆಟಗಾರ ಗೌತಮ್‌ ಗಂಭೀರ್‌ ಈ ಹಿಂದೆ ಇಂಥದ್ದೇ ಸಾಧನೆ ಮಾಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಆರಂಭ ಆಟಗಾರನಾಗಿ ಟೆಸ್ಟ್‌ಗೆ ಪುನರಾಗಮನ ಮಾಡಿದ್ದ ಅವರು ಮೂರು ಟೆಸ್ಟ್‌ಗಳಲ್ಲಿ 529 ರನ್‌ ಕಲೆಹಾಕಿ ಗಮನ ಸೆಳೆದಿದ್ದರು. ಇದರಿಂದಾಗಿ ಅವರು ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ 12 ಸ್ಥಾನಗಳಷ್ಟು ಬಡ್ತಿ ಪಡೆದು, 10ನೇ ಸ್ಥಾನಕ್ಕೇರಿದ್ದಾರೆ. ಏಕದಿನ ಕ್ರಿಕೆಟ್‌ ಮತ್ತು ಟ್ವೆಂಟಿ–20 ಮಾದರಿಗಳಲ್ಲಿ ಅವರು ಕ್ರಮವಾಗಿ ಎರಡು ಮತ್ತು ಏಳನೇ ಸ್ಥಾನದಲ್ಲಿದ್ದಾರೆ.

ಮುಂಬೈನ ಇನ್ನೊಬ್ಬ ಆಟಗಾರ ಅಜಿಂಕ್ಯ ರಹಾನೆ ರಾಂಚಿ ಟೆಸ್ಟ್‌ನಲ್ಲಿ 116 ರನ್‌ ಹೊಡೆದಿದ್ದರು. ಇದರಿಂದಾಗಿ ಅವರು ಐದನೇ ಸ್ಥಾನಕ್ಕೆ ಮರಳಿದ್ದಾರೆ. 2016ರಲ್ಲಿಯೂ ಅವರು ಈ ಸ್ಥಾನವನ್ನು ಪಡೆದಿದ್ದರು. ಕನ್ನಡಿಗ ಮಯಂಕ್ ಅಗರವಾಲ್ ಅವರು 18ನೇ ಸ್ಥಾನಕ್ಕೇರಿದ್ದಾರೆ.

ಬೌಲರ್‌ಗಳ ವಿಭಾಗದಲ್ಲಿ; ಮೊಹಮ್ಮದ್ ಶಮಿ ಮತ್ತು ಮತ್ತು ಉಮೇಶ್ ಯಾದವ್ ಅವರು ಕ್ರಮವಾಗಿ 751 ಮತ್ತು 624 ಪಾಯಿಂಟ್ಸ್‌ ಗಳಿಸಿದ್ದಾರೆ. ಇದರೊಂದಿಗೆ ಶಮಿ 14ನೇ ಸ್ಥಾನ ಮತ್ತು 18ನೇ ಸ್ಥಾನ ಪಡೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಬೌಲರ್ ಜಾರ್ಜ್ ಲಿಂಡ್ ಈ ಸರಣಿಗೂ ಮುನ್ನ 104ನೇ ಸ್ಥಾನದಲ್ಲಿದ್ದರು. ಇದೀಗ ಅರ8 99ಕ್ಕೆ ಬಡ್ತಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT