7

ರೋಹಿತ್‌ ಶರ್ಮಾ ಇನಿಂಗ್ಸ್‌ ವಿಶೇಷವಾಗಿತ್ತು: ಹಾರ್ದಿಕ್‌ ಪಾಂಡ್ಯ

Published:
Updated:
ಹಾರ್ದಿಕ್‌ ಪಾಂಡ್ಯ

ಬ್ರಿಸ್ಟಲ್‌, ಇಂಗ್ಲೆಂಡ್‌: ‘ಇಂಗ್ಲೆಂಡ್‌ ವಿರುದ್ಧದ ಮೂರನೇ ಟ್ವೆಂಟಿ–20 ಪಂದ್ಯದಲ್ಲಿ ರೋಹಿತ್‌ ಶರ್ಮಾ ಅವರ ಇನಿಂಗ್ಸ್‌ ವಿಶೇಷವಾಗಿತ್ತು’ ಎಂದು ಭಾರತದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಹೇಳಿದರು. 

ಇಂಗ್ಲೆಂಡ್‌ ವಿರುದ್ಧದ ಪಂದ್ಯದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಭಾನುವಾರ ನಡೆದ ಟ್ವೆಂಟಿ–20 ಸರಣಿಯ ಕೊನೆಯ ಪಂದ್ಯದಲ್ಲಿ ರೋಹಿತ್‌ ಶರ್ಮಾ ಅವರು ಶತಕ ಗಳಿಸಿ (100, 56 ಎಸೆತ, 5 ಸಿಕ್ಸರ್‌, 11 ಬೌಂಡರಿ) ತಂಡದ ಗೆಲುವಿಗೆ ಕಾರಣರಾಗಿದ್ದರು. ಈ ಪಂದ್ಯ ಗೆಲ್ಲುವುದರ ಮೂಲಕ ಭಾರತ ತಂಡವು 2–1ರಿಂದ ಸರಣಿ ತನ್ನದಾಗಿಸಿಕೊಂಡಿತ್ತು. 

‘ರೋಹಿತ್‌ ಅದ್ಭುತವಾಗಿ ಆಡಿದರು. ಅವರ ಕೈಚಳಕ ಅಮೋಘವಾಗಿತ್ತು. ಏಕಪಕ್ಷಿಯವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಚೆಂಡನ್ನು ಅವರಷ್ಟು ಬಲವಾಗಿ ಹೊಡೆಯುವ ಮತ್ತೊಬ್ಬ ಬ್ಯಾಟ್ಸ್‌ಮನ್‌ ಅನ್ನು ನಾನು ನೋಡಿಲ್ಲ’ ಎಂದು ಪಾಂಡ್ಯ ಹೇಳಿದ್ದಾರೆ. 

‘ಅಷ್ಟು ದೊಡ್ಡ ಮೊತ್ತದ ಗುರಿಯಿದ್ದಾಗಲೂ ಒತ್ತಡಕ್ಕೆ ಒಳಗಾಗದ ರೋಹಿತ್‌, ಮಾದರಿಯ ಆಟ ಆಡಿದರು’ ಎಂದು ಅವರು ಅಭಿಪ್ರಾಯ‍ಪಟ್ಟಿದ್ದಾರೆ. 

ಈ ಸರಣಿಯ ಮೊದಲೆರೆಡು ಪಂದ್ಯಗಳಲ್ಲಿ ರೋಹಿತ್‌ ಅವರು ಕ್ರಮವಾಗಿ 32 ಹಾಗೂ 5 ರನ್‌ಗಳನ್ನು ಗಳಿಸಿದ್ದರು. 

 

ಬರಹ ಇಷ್ಟವಾಯಿತೆ?

 • 8

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !