ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಎದುರಿನ ‘ಚುಟುಕು’ ಸರಣಿಗೆ ರೂಟ್ ಇಲ್ಲ

Last Updated 31 ಆಗಸ್ಟ್ 2020, 14:35 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್: ಆಸ್ಟ್ರೇಲಿಯಾ ತಂಡದ ಎದುರು ಸೆಪ್ಟೆಂಬರ್ ನಾಲ್ಕರಿಂದ ನಡೆಯಲಿರುವ ಟ್ವೆಂಟಿ–20 ಕ್ರಿಕೆಟ್ ಸರಣಿಯಿಂದ ಇಂಗ್ಲೆಂಡ್‌ನ ಜೋ ರೂಟ್‌ ಅವರನ್ನು ಕೈಬಿಡಲಾಗಿದೆ. ಆದರೆ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಸೋಮವಾರ ತಿಳಿಸಿದೆ.

ತಂದೆಯ ಅನಾರೋಗ್ಯದಿಂದಾಗಿ ಪಾಕಿಸ್ತಾನ ಎದುರಿನ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡದೇ ಇದ್ದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಎರಡೂ ಸರಣಿಗಳಿಂದ ಕೈಬಿಡಲಾಗಿದೆ. ‍‌ಪಕ್ಕೆಲುಬು ನೋವಿಗೆ ಒಳಗಾಗಿದ್ದ ಕಾರಣ ಪಾಕಿಸ್ತಾನ ವಿರುದ್ಧದ ಟ್ವೆಂಟಿ–20 ಸರಣಿಯಿಂದ ದೂರ ಉಳಿದಿದ್ದ ಆರಂಭಿಕ ಬ್ಯಾಟ್ಸ್‌ಮನ್ ಜೇಸನ್ ರಾಯ್ ಅವರನ್ನು ಕೂಡ ಸರಣಿಯಿಂದ ಕೈಬಿಡಲಾಗಿದೆ.

ಟ್ವೆಂಟಿ–20 ಪಂದ್ಯಗಳೆಲ್ಲವೂ ಸೌತಾಂಪ್ಟನ್‌ನ ಏಜೀಜ್ ಬೌಲ್‌ನಲ್ಲಿ ನಡೆಯಲಿದ್ದು ಪಂದ್ಯಗಳು ಕ್ರಮವಾಗಿ ಸೆಪ್ಟೆಂಬರ್ 4, 6 ಮತ್ತು 8ರಂದು ನಡೆಯಲಿವೆ. ಏಕದಿನ ಪಂದ್ಯಗಳು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಕ್ರಮವಾಗಿ ಸೆಪ್ಟೆಂಬರ್ 11, 13, 16ರಂದು ನಡೆಯಲಿವೆ.

ಟ್ವೆಂಟಿ–20 ತಂಡ: ಇಯಾನ್ ಮಾರ್ಗನ್ (ನಾಯಕ), ಮೋಯಿನ್ ಅಲಿ, ಜೋಫ್ರಾ ಆರ್ಚರ್, ಜಾನಿ ಬೇಸ್ಟೊ, ಟಾಮ್ ಬ್ಯಾಂಟನ್, ಸ್ಯಾಮ್ ಬಿಲಿಂಗ್ಸ್‌, ಜೋಸ್ ಬಟ್ಲರ್, ಸ್ಯಾಮ್ ಕರನ್, ಟಾಮ್ ಕರನ್, ಜೋ ಡೆನ್ಲಿ, ಕ್ರಿಸ್ ಜೋರ್ಡನ್, ಡೇವಿಡ್ ಮಲಾನ್, ಆದಿಲ್ ರಶೀದ್, ಮಾರ್ಕ್ ವುಡ್; ಕಾಯ್ದಿರಿಸಿದ ಆಟಗಾರರು: ಲಿಯಾಮ್ ಲಿವಿಂಗ್‌ಸ್ಟೋನ್, ಸಕೀಬ್ ಮಹಮೂದ್.

ಏಕದಿನ ತಂಡ: ಇಯಾನ್ ಮಾರ್ಗನ್ (ನಾಯಕ), ಮೋಯಿನ್ ಅಲಿ, ಜೋಫ್ರಾ ಆರ್ಚರ್, ಜಾನಿ ಬೇಸ್ಟೊ, ಟಾಮ್ ಬ್ಯಾಂಟನ್, ಸ್ಯಾಮ್ ಬಿಲಿಂಗ್ಸ್‌, ಜೋಸ್ ಬಟ್ಲರ್, ಸ್ಯಾಮ್ ಕರನ್, ಟಾಮ್ ಕರನ್, ಆದಿಲ್ ರಶೀದ್, ಜೋ ರೂಟ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್; ಕಾಯ್ದಿರಿಸಿದವರು: ಜೋ ಡೆನ್ಲಿ, ಸಕೀಬ್ ಮಹಮೂದ್.

ಇಂಗ್ಲೆಂಡ್–ಪಾಕಿಸ್ತಾನ ಪಂದ್ಯ ಇಂದು

ಮ್ಯಾಂಚೆಸ್ಟರ್: ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮೂರನೇ ಹಾಗೂ ಅಂತಿಮ ಟ್ವೆಂಟಿ–20 ಪಂದ್ಯ ಸೆಪ್ಟೆಂಬರ್ ಒಂದರಂದು ನಡೆಯಲಿದೆ. ಮೊದಲ ಪಂದ್ಯ ಮಳೆಯಿಂದಾಗಿ ಅರ್ಧಕ್ಕೇ ನಿಂತುಹೋಗಿತ್ತು. ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಐದು ವಿಕೆಟ್‌ಗಳ ಜಯ ಗಳಿಸಿತ್ತು. ಬಾಬರ್ ಆಜಂ ಮತ್ತು ಮೊಹಮ್ಮದ್ ಹಫೀಜ್ ಅವರ ಅರ್ಧಶತಕಗಳ ಬಲದಿಂದ ಪಾಕಿಸ್ತಾನ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳಿಗೆ 195 ರನ್ ಗಳಿಸಿತ್ತು. ಇಂಗ್ಲೆಂಡ್ 19.1 ಓವರ್‌ಗಳಲ್ಲಿ 199 ರನ್ ಗಳಿಸಿತು. ಡೇವಿಡ್ ಮಲಾನ್ 54 ಮತ್ತು ಇಯಾನ್ ಮಾರ್ಗನ್ 66 ರನ್ ಗಳಿಸಿದ್ದರು. ಇಂದಿನ ಪಂದ್ಯ ಆರಂಭ: ರಾತ್ರಿ 10.30 (ಭಾರತೀಯ ಕಾಲಮಾನ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT