ಶುಕ್ರವಾರ, ಆಗಸ್ಟ್ 12, 2022
27 °C

ಕ್ರಿಕೆಟ್‌ | ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ಗೆ ರೂಟ್ ಅಲಭ್ಯ?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮುಂದಿನ ತಿಂಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಆಡುವುದು ಸಂದೇಹ. ಅವರ ಪತ್ನಿ ಗರ್ಭಿಣಿಯಾಗಿದ್ದು ಜುಲೈ ತಿಂಗಳಲ್ಲಿ ಹೆರಿಗೆಯಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಪತ್ನಿಯೊಂದಿಗೆ ಇರಲು ಬಯಸಿರುವುದರಿಂದ ಬೆನ್ ಸ್ಟೋಕ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ.  

ಕೊರೊನಾ ಹಾವಳಿಯಿಂದಾಗಿ ವೆಸ್ಟ್ ಇಂಡೀಸ್‌ ತಂಡದ ಇಂಗ್ಲೆಂಡ್ ಪ್ರವಾಸದ ವೇಳಾಪಟ್ಟಿಯನ್ನು ಮರುನಿಗದಿಗೊಳಿಸಲಾಗಿತ್ತು. ಇದರ ಪ್ರಕಾರ ಮೊದಲ ಟೆಸ್ಟ್ ಜುಲೈ ಎಂಟರಂದು ಸೌತಾಂಪ್ಟನ್‌ನಲ್ಲಿ ಆರಂಭಗೊಳ್ಳಲಿದೆ. ಆದರೆ ರೂಟ್ ಪತ್ನಿ ಎರಡನೇ ಮಗುವಿಗೆ ಜುಲೈ ಮೊದಲ ವಾರದಲ್ಲಿ ಜನ್ಮನೀಡುವ ಸಾಧ್ಯತೆ ಇದೆ. 

‘ಖಚಿತವಾಗಿ ಏನನ್ನೂ ಹೇಳಲಾಗದು. ವೈದ್ಯಕೀಯ ತಂಡದೊಂದಿಗೆ ಸತತ ಮಾತುಕತೆ ನಡೆಯುತ್ತಿದೆ. ಟೆಸ್ಟ್ ಕ್ರಿಕೆಟ್ ಮತ್ತು ಪತ್ನಿಯ ಹೆರಿಗೆಯ ದಿನಾಂಕಗಳು ಬಹುತೇಕ ಹತ್ತಿರ ಇರುವುದು ಗೊಂದಲಕ್ಕೆ ಕಾರಣವಾಗಿದೆ’ ಎಂದು ರೂಟ್ ಹೇಳಿದರು.

‘ನನ್ನ ಬದಲಿಗೆ ಬೆನ್‌ ಸ್ಟೋಕ್ಸ್ ತಂಡವನ್ನು ಮುನ್ನಡೆಸುವುದಾದರೆ ಯಾವುದೇ ಆತಂಕವಿಲ್ಲ. ಉಪನಾಯಕನಾಗಿ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದನ್ನು ಕಂಡಿದ್ದೇನೆ. ಸವಾಲುಗಳು ಎದುರಾದಾಗ ಅವರು ಎದುರಿಸುವ ರೀತಿ ಅನನ್ಯ’ ಎಂದು ರೂಟ್ ನುಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು