ರಾಯಲ್‌ ತಂಡಕ್ಕೆ ಗೆಲುವು

7

ರಾಯಲ್‌ ತಂಡಕ್ಕೆ ಗೆಲುವು

Published:
Updated:

ಬೆಂಗಳೂರು: ಚಿಂತಾಮಣಿಯ ರಾಯಲ್‌ ಕ್ರಿಕೆಟ್ ಕ್ಲಬ್‌ ತಂಡ, ಕೆಎಸ್‌ಸಿಎ ಆಶ್ರಯದಲ್ಲಿ ಮೆಟ್ರೊ ಶೀಲ್ಡ್‌ಗಾಗಿ ನಡೆಯುತ್ತಿರುವ ಗುಂಪು ಒಂದರ ನಾಲ್ಕನೇ ಡಿವಿಷನ್ ಕ್ರಿಕೆಟ್ ಟೂರ್ನಿಯ ಗುರುವಾರದ ಪಂದ್ಯದಲ್ಲಿ ಜಯ ಸಾಧಿಸಿತು. ಮಳೆಯಿಂದಾಗಿ 47 ಓವರ್‌ಗಳಿಗೆ ಸೀಮಿತಗೊಳಿಸಿದ ಪಂದ್ಯದಲ್ಲಿ ಈ ತಂಡ ಸೆಲೆಕ್ಟ್ ಕ್ರಿಕೆಟರ್ಸ್ ತಂಡವನ್ನು 46 ರನ್‌ಗಳಿಂದ ಸೋಲಿಸಿತು. ದಿನದ ಇತರ ಪಂದ್ಯಗಳಿಗೆ ಮಳೆ ಅಡ್ಡಿಯಾದ ಕಾರಣ ಅರ್ಧಕ್ಕೇ ನಿಂತವು.

ಸಂಕ್ಷಿಪ್ತ ಸ್ಕೋರು: ರಾಯಲ್‌ ಕ್ರಿಕೆಟ್ ಕ್ಲಬ್‌ ಚಿಂತಾಮಣಿ: 47 ಓವರ್‌ಗಳಲ್ಲಿ 9ಕ್ಕೆ 238 (ವೀರೇಂದ್ರ ಸಾಂಬ್ರಾಣಿ 43, ವಿನಾಯಕ 41, ಸಾತ್ವಿಕ್ ಗುಡರಡ್ಡಿ 21, ಜಯಕುಮಾರ್‌ ಮೂರ್ತಿ 42, ರಾಘವನ್‌ 37; ಅಬ್ದುಲ್‌ ಜುನೈದ್‌ 26ಕ್ಕೆ3); ಸೆಲೆಕ್ಟ್‌ ಕ್ರಿಕೆಟರ್ಸ್‌: 40.3 ಓವರ್‌ಗಳಲ್ಲಿ 192 (ಸುರೇಶ್‌ ಎಲ್‌.ಎಸ್‌ 65, ಸಂಜಯ್‌ ಅಶ್ವಿನ್‌ 50; ಸೋಮೇಶ್ವರ ನಾವಳ್ಳಿಮಠ 48ಕ್ಕೆ3, ವೀರೇಂದ್ರ ಸಾಂಬ್ರಾಣಿ 42ಕ್ಕೆ2, ಸಾತ್ವಿಕ್ ಗುಡರಡ್ಡಿ 49ಕ್ಕೆ2). ಫಲಿತಾಂಶ: ರಾಯಲ್‌ ಕ್ರಿಕೆಟ್ ಕ್ಲಬ್‌ಗೆ 46 ರನ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !