ಪವರ್‌ಪ್ಲೇ ಹಂತದಲ್ಲಿಯೇ ನಾವು ಪಂದ್ಯ ಸೋತೆವು. ನಮ್ಮ ತಂಡಕ್ಕೆ ಹೆಚ್ಚು ರನ್ ಗಳಿಸಿಕೊಟ್ಟಿದ್ದ ಪ್ರಿಯಾಂಶ್ ಆರ್ಯ ಮತ್ತು ಪ್ರಭಸಿಮ್ರನ್ ಸಿಂಗ್ ಅವರು ಬೇಗನೆ ಔಟಾಗಿದ್ದು ದೊಡ್ಡ ಹಿನ್ನಡೆ.
– ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ ನಾಯಕ
ರಜತ್ ಗೈರುಹಾಜರಿ
ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಅವರು ಈ ಪಂದ್ಯದಲ್ಲಿ ಆಡಲಿಲ್ಲ. ಅವರು ತಂಡದೊಂದಿಗೆ ಧರ್ಮಶಾಲಾಕ್ಕೆ ಪ್ರಯಾಣ ಮಾಡಿರಲಿಲ್ಲ. ಆದ್ದರಿಂದ ಶನಿವಾರದ ನೆಟ್ಸ್ ಅಭ್ಯಾಸದಲ್ಲಿ ಅವರು ಇರಲಿಲ್ಲ. ಆದರೆ ಅವರ ಗೈರುಹಾಜರಿಗೆ ಕಾರಣ ತಿಳಿದುಬಂದಿಲ್ಲ.
‘ರಜತ್ ಚೆನ್ನಾಗಿದ್ದಾರೆ. ಅವರು ಮುಂದಿನ ಪಂದ್ಯದಲ್ಲಿ (ಹೈದರಾಬಾದ್) ಆಡುವ ಭರವಸೆ ಇದೆ’ ಎಂದು ಹಂಗಾಮಿ ನಾಯಕ ಜಿತೇಶ್ ಶರ್ಮಾ ಅವರು ಟಾಸ್ ಸಂದರ್ಭದಲ್ಲಿ ಹೇಳಿದರು.