ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಜಿಂಕ್ಯ ರಹಾನೆ

Last Updated 14 ನವೆಂಬರ್ 2019, 19:58 IST
ಅಕ್ಷರ ಗಾತ್ರ

ನವದೆಹಲಿ: ಕನ್ನಡಿಗ ಕೃಷ್ಣಪ್ಪ ಗೌತಮ್ ಮತ್ತು ಅಜಿಂಕ್ಯ ರಹಾನೆ ಅವರು ರಾಜಸ್ಥಾನ್ ರಾಯಲ್ಸ್ ತಂಡವನ್ನು ಬಿಟ್ಟು ಬೇರೆ ತಂಡಗಳಿಗೆ ಸೇರ್ಪಡೆಯಾಗಿದ್ದಾರೆ.

ಟ್ರೇಡ್ ಟ್ರಾನ್ಸ್‌ಫರ್ ವಿಂಡೋದಲ್ಲಿ ಗೌತಮ್ ಅವರು ಕಿಂಗ್ಸ್‌ ಇಲೆವನ್ ಪಂಜಾಬ್ ತಂಡಕ್ಕ ವಲಸೆ ಹೋಗಿದ್ದಾರೆ. ಇದರಿಂದಾಗಿ ಪಂಜಾಬ್ ತಂಡದಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಿದೆ. ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್ ಮತ್ತು ಕರುಣ್ ನಾಯರ್ ಈಗಾಗಲೇ ಪಂಜಾಬ್ ತಂಡದಲ್ಲಿದ್ದಾರೆ. ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅವರು ಈ ವರ್ಷದಿಂದ ತಂಡದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ಧಾರೆ.

ಹೋದ ವರ್ಷದ ಬಿಡ್‌ ಪ್ರಕ್ರಿಯೆಯಲ್ಲಿ ಗೌತಮ್ ₹ 6.2 ಕೋಟಿ ಮೌಲ್ಯ ಗಳಿಸಿದ್ದರು. 2018ರ ಐಪಿಎಲ್‌ನಲ್ಲಿ ಅವರು 15 ಪಂದ್ಯಗಳನ್ನು ಆಡಿ 126 ರನ್ ಗಳಿಸಿ, 11 ವಿಕೆಟ್‌ಗಳನ್ನು ಪಡೆದಿದ್ದರು. 2019ರಲ್ಲಿ ಏಳು ಪಂದ್ಯಗಳಿಂದ ಕೇವಲ 18 ರನ್ ಗಳಿಸಿ ಒಂದು ವಿಕೆಟ್ ಕಿತ್ತಿದ್ದರು.

ರಾಜಸ್ಥಾನ್ ತಂಡದಲ್ಲಿ 100 ಪಂದ್ಯಗಳನ್ನು ಆಡಿದ್ದ ಅಜಿಂಕ್ಯ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪಾಲಾಗಿದ್ದಾರೆ. 2011ರಿಂದ 2015 ಮತ್ತು 2018 ಹಾಗೂ 2019ರಲ್ಲಿ ಅವರು ರಾಜಸ್ಥಾನ್ ತಂಡದಲ್ಲಿದ್ದರು. 24 ಪಂದ್ಯಗಳಲ್ಲಿ ಅವರು ನಾಯಕತ್ವ ವಹಿಸಿದ್ದರು. ಎರಡು ಶತಕಗಳು ಮತ್ತು 17 ಅರ್ಧಶತಕಗಳು ಸೇರಿದಂತೆ ಒಟ್ಟು 2810 ರನ್‌ಗಳನ್ನು ಅವರು ಗಳಿಸಿದ್ದಾರೆ. ಹೋದ ಸಲ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಸ್ಟೀವ್ ಸ್ಮಿತ್ ನಾಯಕತ್ವ ವಹಿಸಿದ್ದರು.

ಡೆಲ್ಲಿ ತಂಡದಲ್ಲಿದ್ದ ಸ್ಪಿನ್ನರ್ ಮಯಂಕ್ ಮಾರ್ಕಂಡೆ ಮತ್ತು ರಾಹುಲ್ ತೆವಾಟಿಯಾ ಅವರು ರಾಜಸ್ಥಾನ್ ತಂಡಕ್ಕೆ ಸೇರ್ಪಡೆಯಾದರು ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT