ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ 50 ಇನಿಂಗ್ಸ್‌ಗಳಿಂದ ಶತಕ ಬಾರಿಸದ ವಿರಾಟ್‌ ಕೊಹ್ಲಿ

Last Updated 26 ಆಗಸ್ಟ್ 2021, 7:18 IST
ಅಕ್ಷರ ಗಾತ್ರ

ಹೆಡಿಂಗ್ಲಿ: ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ ಎನಿಸಿಕೊಂಡಿರುವ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಶತಕದ ಬರಅನುಭವಿಸುತ್ತಿದ್ದಾರೆ. ಅವರುಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಮೂರೂ ಮಾದರಿಯಲ್ಲಿ) ಇತ್ತೀಚೆಗೆ ಆಡಿರುವ ಸತತ ಐವತ್ತು ಇನಿಂಗ್ಸ್‌ಗಳಿಂದಒಮ್ಮೆಯೂ ಮೂರಂಕಿ ಮುಟ್ಟಿಲ್ಲ.

ಕೊಹ್ಲಿ2019ರಲ್ಲಿ ಬಾಂಗ್ಲಾದೇಶದ ತಂಡದ ವಿರುದ್ಧ ನಡೆದ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ ಕೊನೆಯ ಸಲ ಶತಕ ಬಾರಿಸಿದ್ದರು.

ಸದ್ಯ ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಐದು ಟೆಸ್ಟ್‌ ಸರಣಿಯಲ್ಲಿಯೂ ಲಯಕ್ಕೆ ಮರಳಲು ಪರದಾಡುತ್ತಿದ್ದಾರೆ. ಆಡಿರುವನಾಲ್ಕು ಇನಿಂಗ್ಸ್‌ಗಳಲ್ಲಿ ಕೇವಲ 69 (ಕ್ರಮವಾಗಿ 0, 42, 20, 7) ರನ್‌ ಗಳಿಸಿದ್ದಾರೆ. ಒಂದೇ ರೀತಿ (ವಿಕೆಟ್‌ ಕೀಪರ್‌ ಇಲ್ಲವೇ ಸ್ಲಿಪ್‌ ಫೀಲ್ಡರ್‌ಗೆ ಕ್ಯಾಚ್‌ನೀಡಿ) ಔಟಾಗುತ್ತಿರುವುದು ತಂಡದ ಪಾಲಿಗೂ ತಲೆನೋವಾಗಿ ಪರಿಣಮಿಸಿದೆ.

ಇಂಗ್ಲೆಂಡ್‌ ವಿರುದ್ಧದ ಮೊದಲ ಪಂದ್ಯ ಡ್ರಾ ನಲ್ಲಿ ಅಂತ್ಯವಾಗಿತ್ತು. ಎರಡನೇ ಪಂದ್ಯವನ್ನು ಭಾರತ151ರನ್‌ ಅಂತರದಿಂದ ಗೆದ್ದುಕೊಂಡಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿರುವ ಭಾರತ ಕೇವಲ78 ರನ್‌ ಗಳಿಸಿ ಆಲೌಟ್‌ ಆಗಿದೆ.‌ ಅನುಭವಿ ರೋಹಿತ್‌ ಶರ್ಮಾ (19) ಮತ್ತು ಉಪನಾಯಕ ಅಜಿಂಕ್ಯ ರಹಾನೆ(18) ಮಾತ್ರವೇ ಹತ್ತಕ್ಕಿಂತ ಹೆಚ್ಚು ರನ್‌ ಗಳಿಸಿದರು. ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರಲಿಲ್ಲ.

ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಮತ್ತುಕ್ರೇಗ್‌ ಓವರ್ಟನ್ತಲಾ ಮೂರು ವಿಕೆಟ್‌, ಒಲ್ಲೀ ರಾಬಿನ್‌ಸನ್‌ಮತ್ತು ಸ್ಯಾಮ್‌ ಕರನ್ ತಲಾ ಎರಡು ವಿಕೆಟ್‌ ಕಬಳಿಸಿಮಿಂಚಿದರು.

ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿರುವಇಂಗ್ಲೆಂಡ್‌,ಮೊದಲ ದಿನದಾಟದ ಅಂತ್ಯಕ್ಕೆ ಬುಧವಾರ 42 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 120 ರನ್ ಗಳಿಸಿ ಭಾರಿ ಮುನ್ನಡೆಯತ್ತ ಸಾಗಿದೆ.ರೋರಿ ಬರ್ನ್ಸ್ (ಬ್ಯಾಟಿಂಗ್ 52) ಮತ್ತು ಹಸೀಬ್ ಹಮೀದ್‌ (ಬ್ಯಾಟಿಂಗ್‌ 60) ಕ್ರೀಸ್‌ ಕಾಯ್ದುಕೊಂಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT