ಡರ್ಬನ್, ದಕ್ಷಿಣ ಆಫ್ರಿಕಾ: ಟ್ರಿಸ್ಟನ್ ಸ್ಟಬ್ಸ್ (122; 221)ಮತ್ತು ನಾಯಕ ತೆಂಬಾ ಬವುಮಾ (113; 228ಎ) ಅವರ ಶತಕಗಳ ನೆರವಿನಿಂದ ಆತಿಥೇಯ ದಕ್ಷಿಣ ಆಫ್ರಿಕಾವು ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಹಿಡಿತ ಸಾಧಿಸಿದೆ.

ಡರ್ಬನ್ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 149 ರನ್ಗಳ ಮುನ್ನಡೆ ಪಡೆದಿದ್ದ ದಕ್ಷಿಣ ಆಫ್ರಿಕಾ ತಂಡವು ಎರಡನೇ ಇನಿಂಗ್ಸ್ನಲ್ಲಿ 100.4 ಓವರ್ಗಳಲ್ಲಿ ಐದು ವಿಕೆಟ್ಗೆ 366 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಶ್ರೀಲಂಕಾ ತಂಡಕ್ಕೆ 516 ರನ್ಗಳ ಗುರಿ ನೀಡಿತು.

ಕಠಿಣ ಗುರಿ ಪಡೆದ ಲಂಕಾ ತಂಡಕ್ಕೆ ಕಗಿಸೊ ರಬಾಡ ಮತ್ತು ಮಾರ್ಕೊ ಯಾನ್ಸನ್ ಆರಂಭದಲ್ಲೇ ಪೆಟ್ಟು ನೀಡಿದ್ದಾರೆ. 31 ಓವರ್ಗಳಲ್ಲಿ 103 ರನ್ಗೆ ಐದು ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ. ಇನ್ನೂ ಗೆಲುವಿಗೆ 413 ರನ್ ಅಗತ್ಯವಿದೆ.

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ 49.4 ಓವರ್ಗಳಲ್ಲಿ 191.

ಶ್ರೀಲಂಕಾ: 13.5 ಓವರ್ಗಳಲ್ಲಿ 42.

ಎರಡನೇ ಇನಿಂಗ್ಸ್:

ದಕ್ಷಿಣ ಆಫ್ರಿಕಾ: 100.4 ಓವರ್ಗಳಲ್ಲಿ 5 ವಿಕೆಟ್ಗೆ 366 ಡಿಕ್ಲೇರ್ (ಟ್ರಿಸ್ಟನ್ ಸ್ಟಬ್ಸ್ 122, ತೆಂಬಾ ಬವುಮಾ 113).

ಶ್ರೀಲಂಕಾ: 31 ಓವರ್ಗಳಲ್ಲಿ 5 ವಿಕೆಟ್ಗೆ 103 (ದಿನೇಶ್ ಚಾಂಡಿಮಾಲ್ ಔಟಾಗದೇ 29, ಕಗಿಸೊ ರಬಾಡ 34ಕ್ಕೆ 2, 22ಕ್ಕೆ 2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.