ಬುಧವಾರ, ನವೆಂಬರ್ 13, 2019
25 °C

ಟ್ವೆಂಟಿ–20ಯಲ್ಲಿ ಸಚಿನ್‌, ಲಾರಾ ಆಟ

Published:
Updated:
Prajavani

ಮುಂಬೈ: ಹಿರಿಯ ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್‌ ಮತ್ತು ಬ್ರಯನ್‌ ಲಾರಾ ಅವರು ಮುಂದಿನ ವರ್ಷ ಭಾರತದಲ್ಲಿ ನಡೆಯುವ ವಿಶ್ವ ಸೀರಿಸ್‌ ಟ್ವೆಂಟಿ–20 ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷವೂ ವಿಶ್ವ ಸೀರಿಸ್‌ ಟೂರ್ನಿ ಆಯೋಜಿಸಲಾಗುತ್ತಿದೆ. ಇದರಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್‌ ಇಂಡೀಸ್‌ ಮತ್ತು ಭಾರತದ ಹಿರಿಯ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ.

ಮುಂದಿನ ವರ್ಷದ ಟೂರ್ನಿ ಫೆಬ್ರುವರಿ 2ರಿಂದ 16ರವರೆಗೆ ನಡೆಯಲಿದೆ. ಭಾರತದ ವೀರೇಂದ್ರ ಸೆಹ್ವಾಗ್‌, ಆಸ್ಟ್ರೇಲಿಯಾದ ಬ್ರೆಟ್‌ ಲೀ, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್‌ ಮತ್ತು ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್‌ ಅವರೂ ಟೂರ್ನಿಯಲ್ಲಿ ಆಡಲಿದ್ದಾರೆ.

46 ವರ್ಷ ವಯಸ್ಸಿನ ಸಚಿನ್‌, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 34,000ರನ್‌ ಗಳಿಸಿದ ಸಾಧನೆ ಮಾಡಿದ್ದಾರೆ. ಶತಕಗಳ ಶತಕ ಬಾರಿಸಿದ ಹಿರಿಮೆಯೂ ಅವರದ್ದಾಗಿದೆ.

ಪ್ರತಿಕ್ರಿಯಿಸಿ (+)