ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆವಿಲಿಯನ್‌ಗೆ ಸಚಿನ್‌ ಹೆಸರು

Last Updated 28 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಮುಂಬೈ: ಇಲ್ಲಿನ ಎಂಐಜಿ ಕ್ರಿಕೆಟ್‌ ಕ್ಲಬ್‌ನ ಪೆವಿಲಿಯನ್‌ಗೆ ಸಚಿನ್‌ ತೆಂಡೂಲ್ಕರ್‌ ಹೆಸರು ಇಡಲಾಗಿದೆ.

‘ಸಚಿನ್‌, ಭಾರತದ ಪರ ಆಡುವ ದಿನಗಳಲ್ಲಿ ನಮ್ಮ ಕ್ಲಬ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಕ್ಲಬ್‌ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಬ್ಯಾಟಿಂಗ್‌ ದಂತಕತೆಯಾಗಿರುವ ಅವರಿಗೆ ಗೌರವ ಸಲ್ಲಿಸಬೇಕೆಂಬುದು ನಮ್ಮ ಬಯಕೆ. ಈ ಕಾರಣದಿಂದಲೇ ಕ್ಲಬ್‌ನ ಪೆವಿಲಿಯನ್‌ಗೆ ಸಚಿನ್‌ ಹೆಸರು ಇಟ್ಟಿದ್ದೇವೆ. ಮೇ ಎರಡರಂದು ಉದ್ಘಾಟನಾ ಸಮಾರಂಭ ನಡೆಯಲಿದೆ’ ಎಂದು ಕ್ಲಬ್‌ನ ಕಾರ್ಯದರ್ಶಿ ಅಮಿತ್‌ ದಾನಿ ತಿಳಿಸಿದ್ದಾರೆ.

ಸಚಿನ್‌ ಅವರ ಮಗ ಅರ್ಜುನ್‌ ತೆಂಡೂಲ್ಕರ್‌, ಇದೇ ಕ್ಲಬ್‌ನಲ್ಲಿ ಆಡುತ್ತಾರೆ. ಮುಂಬೈ ಕ್ರಿಕೆಟ್‌ ಸಂಸ್ಥೆಯು (ಎಂಸಿಎ) ಆಯೋಜಿಸುವ ಟೂರ್ನಿಗಳಲ್ಲಿ ಎಂಐಜಿ ಕ್ಲಬ್‌ ಭಾಗವಹಿಸುತ್ತದೆ. ವಿನೋದ್‌ ಕಾಂಬ್ಳಿ ಅವರಂತಹ ಹಲವು ಹಿರಿಯ ಕ್ರಿಕೆಟಿಗರು ಈ ಕ್ಲಬ್‌ನ ಮಕ್ಕಳಿಗೆ ಕ್ರಿಕೆಟ್‌ ಪಾಠಗಳನ್ನು ಹೇಳಿಕೊಡುತ್ತಾರೆ.

ತೆಂಡೂಲ್ಕರ್‌ ಮಿಡಲ್‌ಸೆಕ್ಸ್‌ ಗ್ಲೋಬಲ್‌ ಅಕಾಡೆಮಿಯು (ಟಿಎಂಜಿಎ) ಮೇ 2ರಿಂದ 5ರವರೆಗೆ ಬೇಸಿಗೆ ತರಬೇತಿ ಶಿಬಿರ ಆಯೋಜಿಸಿದ್ದು, ಇದು ಎಂಐಜಿ ಕ್ಲಬ್‌ನಲ್ಲಿ ನಡೆಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT