ಸೋಮವಾರ, ಜೂನ್ 1, 2020
27 °C

ಕ್ಷಮೆ ಕೋರಿದ ಸ್ಪಾರ್ಟನ್ ಬ್ಯಾಟ್ ಕಂಪೆನಿ: ದಾವೆ ಹಿಂಪಡೆಯಲು ಸಚಿನ್‌ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ:ಆಸ್ಟ್ರೇಲಿಯಾದ ಸ್ಪಾರ್ಟನ್ ಬ್ಯಾಟ್ ತಯಾರಕ ಸಂಸ್ಥೆಯು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಕ್ಷಮೆ ಕೋರಿದೆ. ಇದರಿಂದಾಗಿ ಕಂಪೆನಿಯ ವಿರುದ್ಧ ಹೂಡಿದ್ದ ದಾವೆಯನ್ನು ಹಿಂಪಡೆಯಲು ಸಚಿನ್ ನಿರ್ಧರಿಸಿದ್ದಾರೆ.

2016ರಲ್ಲಿ ಸಚಿನ್ ಅವರು ಸ್ಪಾರ್ಟನ್‌ ಬ್ಯಾಟ್‌ ಪ್ರಚಾರ ರಾಯಭಾರಿಯಾಗಿ ಕಂಪೆನಿಯೊಂದಿಗೆ ಪ್ರಾಯೋಜಕತ್ವದ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಒಪ್ಪಂದದ ಪ್ರಕಾರ ಸಚಿನ್‌ಗೆ ಸಂಭಾವನೆ ಮತ್ತು ರಾಯಧನವನ್ನು ನೀಡುವಲ್ಲಿ ಕಂಪೆನಿಯು ವಿಫಲವಾಗಿತ್ತು. ಆದ್ದರಿಂದ ಸಚಿನ್ ನಿಯಮ ಉಲ್ಲಂಘನೆಯ ದಾವೆ ಹೂಡಿದ್ದರು.

‘ಸ್ಪಾರ್ಟನ್‌ ಸಂಸ್ಥೆಯು ತೆಂಡೂಲ್ಕರ್ ಅವರಲ್ಲಿ ಕ್ಷಮೆ ಕೋರಿದೆ. ಪ್ರಾಯೋಜಕತ್ವ ಒಪ್ಪಂದದ ನಿಯಮವನ್ನು ಪಾಲಿಸುವಲ್ಲಿ ವಿಫಲರಾಗಿದ್ದಕ್ಕೆ ವಿಷಾದಿಸುತ್ತೇವೆ. ಸಚಿನ್ ಅವರ ತಾಳ್ಮೆ ಮತ್ತು ಸಹಕಾರಕ್ಕೆ ನಾವು ಆಭಾರಿಯಾಗಿದ್ದೇವೆ’ ಎಂದು ಕಂಪೆನಿಯ ಮುಖ್ಯ ಆಪರೇಟಿಂಗ್ ಆಫಿಸರ್ (ಸಿಒಒ) ಲೆಸ್ ಗಲ್ಬ್ರೇತ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು