ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಕಾಶ್ಮೀರದಲ್ಲಿ ಕ್ರಿಕೆಟ್: ಸೇನೆಯ ಕಾರ್ಯಕ್ಕೆ ಸಚಿನ್‌, ಪಠಾಣ್‌ ಮೆಚ್ಚುಗೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಮಹಿಳಾ ಕ್ರಿಕೆಟ್‌ ಕಲರವ
Last Updated 14 ಅಕ್ಟೋಬರ್ 2020, 14:19 IST
ಅಕ್ಷರ ಗಾತ್ರ

ಅನಂತನಾಗ್‌, ಜಮ್ಮು ಮತ್ತು ಕಾಶ್ಮೀರ: ಅನಂತನಾಗ್‌ ಜಿಲ್ಲೆಯಲ್ಲಿಮಹಿಳಾ ಕ್ರಿಕೆಟ್‌ ಲೀಗ್‌ಅನ್ನು ಯಶಸ್ವಿಯಾಗಿ ಆಯೋಜಿಸಿದ್ದ ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ ಕಾರ್ಯಕ್ಕೆ ಕ್ರಿಕೆಟಿಗರಾದ ಮಾಸ್ಟರ್ಸ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಹಾಗೂ ಇರ್ಫಾನ್‌ ಪಠಾಣ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಹಿಳಾ ಕ್ರಿಕೆಟ್ ಅನ್ನು ಉತ್ತೇಜಿಸುವ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸುವ ಉದ್ದೇಶದಿಂದ ಸರಕಾರೇತರ ಸಂಸ್ಥೆ ಅಸೀಮ್ ಫೌಂಡೇಶನ್, ಭಾರತೀಯ ಸೇನೆಯ ಸಹಭಾಗಿತ್ವದೊಂದಿಗೆ ಜಿಲ್ಲೆಯ ಡೂರು ಪಟ್ಟಣದಲ್ಲಿ ಕ್ರಿಕೆಟ್‌ ಲೀಗ್‌ ಆಯೋಜಿಸಿತ್ತು. ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಜಾರಿಗೊಳಿಸಿದ ಲಾಕ್‌ಡೌನ್‌ನಿಂದಾಗಿ ಸುಮಾರು ಆರು ತಿಂಗಳು ಕಾಶ್ಮೀರದಲ್ಲಿ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.

‘ಡೂರು, ಅನಂತನಾಗ್‌ ಹಾಗೂ ಕುಲ್ಗಾಮ್‌ ಪಟ್ಟಣಗಳ ನಾಲ್ಕು ತಂಡಗಳು ಲೀಗ್‌ನಲ್ಲಿ ಭಾಗವಹಿಸಿದ್ದವು. ನಾಕೌಟ್‌ ಮಾದರಿಯಲ್ಲಿ ಲೀಗ್‌ ಪಂದ್ಯಗಳು ನಡೆದಿದ್ದು, 70 ಮಹಿಳೆಯರು ಪಾಲ್ಗೊಂಡಿದ್ದರು‘ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.

‘ಟೂರ್ನಿಯನ್ನು ಆಯೋಜಿಸಿದ್ದ ರಾಷ್ಟ್ರೀಯ ರೈಫಲ್ಸ್ ಹಾಗೂ ಅಸೀಮ್‌ ಫೌಂಡೇಶನ್‌ಗೆ ಅಭಿನಂದನೆಗಳು. ಕ್ರೀಡೆಗೆ ಲಿಂಗಭೇದವಿಲ್ಲ. ಇದು ಪ್ರತಿಭೆ ಹಾಗೂ ಪರಿಶ್ರಮವನ್ನು ಬಯಸುತ್ತದೆ‘ ಎಂದು ವಿಡಿಯೊ ಸಂದೇಶದಲ್ಲಿ ತೆಂಡೂಲ್ಕರ್ ಹೇಳಿದ್ದಾರೆ.

‘ಕಾಶ್ಮೀರದಲ್ಲಿ ನಾನು ಬಹಳಷ್ಟು ಸಮಯ ಕಳೆದಿದ್ದೇನೆ. ಇಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಎಂಬುದು ನನ್ನ ದೃಢನಂಬಿಕೆ. ಇಲ್ಲಿಯ ಮಹಿಳೆಯರಿಗೆ ಇಂತಹ ಅವಕಾಶ ಮಾಡಿಕೊಟ್ಟ ರಾಷ್ಟ್ರೀಯ ರೈಫಲ್ಸ್ ಮತ್ತು ಅಸೀಮ್‌ ಫೌಂಡೇಶನ್‌ಗೆ ಅಭಿನಂದನೆಗಳು‘ ಎಂದು ಇರ್ಫಾನ್‌ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT