ಸೋಮವಾರ, ಡಿಸೆಂಬರ್ 9, 2019
20 °C

ಶಹಾದತ್‌ ಮೇಲೆ ಐದು ವರ್ಷ ನಿಷೇಧ

Published:
Updated:
Prajavani

ಢಾಕಾ: ಸಹ ಆಟಗಾರನ ಮೇಲೆ ಹಲ್ಲೆ ನಡೆಸಿದ್ದ ಹಿರಿಯ ವೇಗದ ಬೌಲರ್‌ ಶಹಾದತ್‌ ಹುಸೇನ್‌ ಮೇಲೆ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ಮಂಗಳವಾರ ಐದು ವರ್ಷ ನಿಷೇಧ ಹೇರಿದೆ. ಜೊತೆಗೆ ₹2.54 ಲಕ್ಷ ದಂಡವನ್ನೂ ವಿಧಿಸಿದೆ.

ಭಾನುವಾರ ನಡೆದಿದ್ದ ರಾಷ್ಟ್ರೀಯ ಕ್ರಿಕೆಟ್‌ ಲೀಗ್‌ನ ಢಾಕಾ ಮತ್ತು ಖುಲ್ನಾ ತಂಡಗಳ ನಡುವಣ ಪಂದ್ಯದ ವೇಳೆ 33 ವರ್ಷ ವಯಸ್ಸಿನ ಶಹಾದತ್‌ ಅವರು ಯುವ ಬೌಲರ್‌ ಅರಾಫತ್‌ ಸನ್ನಿ ಜೂನಿಯರ್‌ಗೆ ಜಾಡಿಸಿ ಒದ್ದಿದ್ದರು. ಈ ಸಂಬಂಧ ಅಂಗಳದ ಅಂಪೈರ್‌ಗಳು ದೂರು ನೀಡಿದ್ದರು.

‘ಶಹಾದತ್‌ ಅವರ ನಡವಳಿಕೆ ಕ್ರೀಡಾಸ್ಫೂರ್ತಿಗೆ   ವಿರುದ್ಧವಾಗಿದೆ. ಹೀಗಾಗಿ ಅವರ ಮೇಲೆ ಐದು ವರ್ಷ ನಿಷೇಧ ಹೇರಿದ್ದೇವೆ’ ಎಂದು ಬಿಸಿಬಿ ತಾಂತ್ರಿಕ ಸಮಿತಿ  ಮುಖ್ಯಸ್ಥ ಮಿನ್‌ಹಾಜುಲ್‌ ಅಬೆದಿನ್‌ ತಿಳಿಸಿದ್ದಾರೆ.

ಬಾಂಗ್ಲಾದೇಶ ಪರ 38 ಟೆಸ್ಟ್‌ ಮತ್ತು 51 ಏಕದಿನ ಪಂದ್ಯಗಳನ್ನು ಆಡಿರುವ ಶಹಾದತ್‌ 2018ರಲ್ಲಿ ಆಟೊ ಚಾಲಕನೊಬ್ಬನಿಗೆ ಥಳಿಸಿ ಸುದ್ದಿಯಾಗಿದ್ದರು.

ಪ್ರತಿಕ್ರಿಯಿಸಿ (+)