ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ ಪೊಲೀಸರಿಗೆ ಕ್ರೀಡಾ ಸಾಧಕರ ಸಲಾಂ

Last Updated 6 ಡಿಸೆಂಬರ್ 2019, 10:05 IST
ಅಕ್ಷರ ಗಾತ್ರ

ಬೆಂಗಳೂರು: ತೆಲಂಗಾಣ ಪಶುವೈದ್ಯೆ ಅತ್ಯಾಚಾರಆರೋಪಿಗಳನ್ನು ಎನ್‌ಕೌಂಟರ್ ಮಾಡಿರುವುದಕ್ಕೆ ಕ್ರೀಡಾ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ವೈದ್ಯೆಯನ್ನು ಹತ್ಯೆ ಮಾಡಿದ್ದ ಸ್ಥಳಕ್ಕೆ ಮಹಜರು ಮಾಡಲು ಕರೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ನಡೆದಎನ್‌ಕೌಂಟರ್‌ಗೆ ಆರೋಪಿಗಳಾದ ಮೊಹಮ್ಮದ್ ಅಲಿ ಅಲಿಯಾಸ್ ಮೊಹಮ್ಮದ್ ಆರಿಫ್, ಜೊಲ್ಲು ಶಿವಾ, ಜೊಲ್ಲು ನವೀನ್ ಕುಮಾರ್ ಮತ್ತು ಚಿನಟಕುಂಟ ಚೆನ್ನ ಕೇಶವುಲು ಬಲಿಯಾಗಿದ್ದರು.

ಈ ಪ್ರಕರಣ ಸಂಬಂಧ ದೇಶದ ಕ್ರೀಡಾ ತಾರೆಗಳಾದ ಹರ್ಭಜನ್ ಸಿಂಗ್‌, ಸೈನಾ ನೆಹ್ವಾಲ್‌, ಗೀತಾ–ಬಬಿತಾ ಪೂಗಟ್‌, ಯೋಗೇಶ್ವರ್‌ ದತ್‌ ಹಾಗೂ ಮತ್ತಿತರರು ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

‘ಈ ರೀತಿಯಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ನೀಡಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮಹಿಳೆಯರಲ್ಲಿನ ಸಬಲೀಕರಣ ಭಾವಈಗ ಮತ್ತಷ್ಟು ಗಟ್ಟಿಗೊಂಡಿದೆ. ಈ ಕಾರಣಕ್ಕಾಗಿ ಸಾರ್ವಜನಿಕರು ಹೂ ಮಳೆ ಸುರಿಸುತ್ತಿದ್ದಾರೆ.ನಾನು ಅವರಿಗೆ(ಪೊಲೀಸರಿಗೆ) ವಂದಿಸುತ್ತೇನೆ’ ಎಂದು ಕುಸ್ತಿಪಟು ಬಬಿತಾ ಪೂಗಟ್‌ ಟ್ವೀಟ್‌ ಮಾಡಿದ್ದಾರೆ.

ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್, ‘ತೆಲಂಗಾಣ ಪೊಲೀಸರು ಉತ್ತಮ ಕೆಲಸ ಮಾಡಿದ್ದೀರಿ. ಮುಂದೆ ಈ ರೀತಿ (ಅತ್ಯಾಚಾರ) ಮಾಡಲು ಯಾರೂ ಧೈರ್ಯ ಮಾಡಬಾರದು ಎಂಬುದನ್ನು ನೀವು ಈ ರೀತಿ ತೋರಿಸಿಕೊಟ್ಟಿದ್ದೀರಿ’ ಎಂದು ಬರೆದುಕೊಂಡಿದ್ದಾರೆ.

‌ಕುಸ್ತಿಪಟು ಗೀತಾ ಪೂಗಟ್‌ ಪೊಲೀಸರಿಗೆ ವಂದನೆ ಸಲ್ಲಿಸಿದ್ದು,ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌, ‘ಉತ್ತಮ ಕೆಲಸ’ ಎಂದು ಶ‌್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT