ಸೋಮವಾರ, ಡಿಸೆಂಬರ್ 16, 2019
17 °C
ಸಂಜು ಸ್ಯಾಮ್ಸನ್ ಶತಕ ವ್ಯರ್ಥ; ರಾಯಲ್ಸ್‌ಗೆ ನಿರಾಶೆ

ವಾರ್ನರ್ ಅಬ್ಬರಕ್ಕೆ ಒಲಿದ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್ : ಈ ಬಾರಿಯ ಐಪಿಎಲ್ ಟೂರ್ನಿಯ ಮೊಟ್ಟಮೊದಲ ಶತಕ ಬಾರಿಸಿದ ರಾಜಸ್ಥಾನ್ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್‌ ಆಟಕ್ಕೆ ಗೆಲುವಿನ ಫಲ ಸಿಗಲಿಲ್ಲ. ಆದರೆ, ಡೇವಿಡ್ ವಾರ್ನರ್ ಅಬ್ಬರದ ಶತಕಕ್ಕೆ ಜಯದ ಸಿಹಿ ಲಭಿಸಿತು.

ರಾಜೀವಗಾಂಧಿ ಕ್ರಿಕೆಟ್‌ ಮೈದಾನ ದಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಐದು ವಿಕೆಟ್‌ಗಳಿಂದ ಗೆದ್ದಿತು.

ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್‌ ತಂಡವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಆರಂಭದಲ್ಲಿಯೇ ಜೋಸ್ ಬಟ್ಲರ್ ವಿಕೆಟ್‌ ಕಳೆದುಕೊಂಡಿತು. ಅಜಿಂಕ್ಯ ರಹಾನೆ (70; 49ಎ, 4ಬೌಂಡರಿ, 3ಸಿಕ್ಸರ್) ಮತ್ತು ಸಂಜು ಸ್ಯಾಮ್ಸನ್ (ಔಟಾಗದೆ 102; 55ಎ; 10ಬೌಂ, 4ಸಿ) ಅವರಿಬ್ಬರೂ ಎರಡನೇ ವಿಕೆಟ್‌ಗೆ ಗಳಿಸಿದ 119 ರನ್‌ಗಳ ಬಲದಿಂದ 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 198 ರನ್‌ಗಳ ದೊಡ್ಡ ಮೊತ್ತ ಪೇರಿಸಿತು.

ಆದರೆ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್‌ ತಂಡವು 19 ಓವರ್‌ಗಳಲ್ಲಿ  5 ವಿಕೆಟ್‌ಗಳಿಗೆ 201 ರನ್ ಗಳಿಸಿ ಗೆದ್ದಿತು.

ಇನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್ (69; 37ಎ, 9ಬೌಂ, 2ಸಿ) ಮತ್ತು ಜಾನಿ ಬೆಸ್ಟೊ (45; 28ಎ, 6ಬೌಂ 1ಸಿ)  ಅವರ ಅಬ್ಬರದಿಂದ ಗೆಲುವು ಸುಲಭವಾಯಿತು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು