ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ ತಂಡದಲ್ಲಿ ಸ್ಯಾಮ್‌ಗೆ ಸ್ಥಾನ

Last Updated 3 ಜುಲೈ 2018, 19:40 IST
ಅಕ್ಷರ ಗಾತ್ರ

ಲಂಡನ್‌: ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಅವರು ಭಾರತದ ಎದುರಿನ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಗೆ ಇಂಗ್ಲೆಂಡ್‌ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಈ ವಿಷಯವನ್ನು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಮಂಗಳವಾರ ಪ್ರಕಟಿಸಿದೆ.

ಈ ಮೊದಲು ತಂಡದಲ್ಲಿ ಸ್ಥಾನ ಪಡೆದಿದ್ದ ಟಾಮ್‌ ಕರನ್‌ ಅವರು ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಟಾಮ್‌ ಅವರ ಸಹೋದರ ಸ್ಯಾಮ್‌ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.

‘ಟಾಮ್‌ ಅವರು ಗಾಯದಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಸ್ಯಾಮ್‌ಗೆ ತಂಡದಲ್ಲಿ ಅವಕಾಶ ನೀಡಿದ್ದೇವೆ’ ಎಂದು ಇಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

ಅನುಭವಿ ಬ್ಯಾಟ್ಸ್‌ಮನ್‌ ಏಯೊನ್‌ ಮಾರ್ಗನ್‌ ಈ ಸರಣಿಯಲ್ಲಿ ಇಂಗ್ಲೆಂಡ್‌ ತಂಡವನ್ನು ಮುನ್ನಡೆಸಲಿದ್ದಾರೆ.

ತಂಡ ಇಂತಿದೆ: ಏಯೊನ್‌ ಮಾರ್ಗನ್‌ (ನಾಯಕ), ಮೋಯಿನ್‌ ಅಲಿ, ಜಾನಿ ಬೇಸ್ಟೊ, ಜೇಕ್‌ ಬಾಲ್‌, ಜೋಸ್‌ ಬಟ್ಲರ್‌, ಸ್ಯಾಮ್‌ ಕರನ್‌, ಅಲೆಕ್ಸ್‌ ಹೇಲ್ಸ್, ಲಿಯಾಮ್‌ ಫ್ಲಂಕೆಟ್‌, ಆದಿಲ್‌ ರಶೀದ್‌, ಜೋ ರೂಟ್‌, ಜೇಸನ್‌ ರಾಯ್‌, ಬೆನ್‌ ಸ್ಟೋಕ್ಸ್‌, ಡೇವಿಡ್‌ ವಿಲ್ಲಿ ಮತ್ತು ಮಾರ್ಕ್‌ ವುಡ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT