ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಕ್ರಿಕೆಟ್‌: ಸಮರ್ಥ್ ತ್ರಿಶತಕದ ವೈಭವ

Last Updated 19 ಜನವರಿ 2019, 16:21 IST
ಅಕ್ಷರ ಗಾತ್ರ

ಬೆಂಗಳೂರು: ಅಮೋಘ ಆಟ ಆಡಿದ ಸಮರ್ಥ್‌ ಅಜೇಯ 307 ರನ್‌ ಗಳಿಸಿ ಮಿಂಚಿದರು. ಅವರ ಬ್ಯಾಟಿಂಗ್ ವೈಭವದ ನೆರವಿನಿಂದ ದೇವ್ ಇಂಟರ್‌ನ್ಯಾಷನಲ್ ಶಾಲಾ ತಂಡ ಬಿಟಿಆರ್‌ ಶೀಲ್ಡ್‌ಗಾಗಿ ಕೆಎಸ್‌ಸಿಎ ಆಶ್ರಯದಲ್ಲಿ ನಡೆಯುತ್ತಿರುವ 14 ವರ್ಷದೊಳಗಿನವರ ಗುಂಪು 1, ಮೂರನೇ ಡಿವಿಷನ್‌ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಜಯ ಸಾಧಿಸಿತು.

ಗುರುವಾರ ನಡೆದ ಪಂದ್ಯದಲ್ಲಿ ದೇವ್‌ ಶಾಲೆ 276 ರನ್‌ಗಳಿಂದ ನ್ಯಾಷನಲ್ ಅಕಾಡೆಮಿ ಫಾರ್ ಲರ್ನಿಂಗ್ ತಂಡವನ್ನು ಮಣಿಸಿತು.

ಸಂಕ್ಷಿಪ್ತ ಸ್ಕೋರು: ದೇವ್‌ ಇಂಟರ್‌ನ್ಯಾಷನಲ್ ಶಾಲೆ: 50 ಓವರ್‌ಗಳಲ್ಲಿ 5ಕ್ಕೆ 383 (ಸಮರ್ಥ್‌ ಅಜೇಯ 307; ತನ್ಮಯ್‌ 79ಕ್ಕೆ2); ನ್ಯಾಷನಲ್‌ ಅಕಾಡೆಮಿ ಫಾರ್ ಲರ್ನಿಂಗ್‌: 31.4 ಓವರ್‌ಗಳಲ್ಲಿ 107 (ತನ್ಮಯ್‌ 47; ಪುರಬ್‌ 21ಕ್ಕೆ2, ನಂದ ಕಿಶೋರ್‌ 17ಕ್ಕೆ5). ಫಲಿತಾಂಶ: ದೇವ್ ಶಾಲೆಗೆ 276 ರನ್‌ಗಳ ಜಯ. ಶೇರ್ವುಡ್‌ ಹೈಸ್ಕೂಲ್‌: 45.5 ಓವರ್‌ಗಳಲ್ಲಿ 145 (ಮೇಘ್ ಲಾಡ್‌ 12ಕ್ಕೆ2, ಆದರ್ಶ್‌ 29ಕ್ಕೆ2, ಶ್ರೇಯಸ್‌ ಕುಮಾರ್‌ 25ಕ್ಕೆ2, ಮನೀಷ್‌ 31ಕ್ಕೆ2); ರಯನ್‌ ಇಂಟರ್‌ನ್ಯಾಷನಲ್ ಶಾಲೆ: 25.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 146 (ಶ್ರೇಯಸ್ ಕುಮಾರ್ ಅಜೇಯ 81). ಫಲಿತಾಂಶ: ರಯನ್‌ ಇಂಟರ್‌ನ್ಯಾಷನಲ್ ಶಾಲೆಗೆ 8 ವಿಕೆಟ್ ಜಯ. ಪ್ರೆಸಿಡೆನ್ಸಿ ಸ್ಕೂಲ್‌ (ದಕ್ಷಿಣ): 24 ಓವರ್‌ಗಳಲ್ಲಿ 56 (ರಾಘವ್‌ 19ಕ್ಕೆ5); ಕ್ರೈಸಲಿಸ್ ಹೈಸ್ಕೂಲ್‌: 7.3 ಓವರ್‌ಗಳಲ್ಲಿ 3ಕ್ಕೆ 59. ಫಲಿತಾಂಶ: ಕ್ರೈಸಲಿಸ್ ಹೈಸ್ಕೂಲ್‌ಗೆ 7 ವಿಕೆಟ್ ಜಯ. ಪ್ರೆಸಿಡೆನ್ಸಿ ಸ್ಕೂಲ್ (ಉತ್ತರ): 42.1 ಓವರ್‌ಗಳಲ್ಲಿ 265 (ಭಾರ್ಗವ್‌ 63, ಆದಿತ್ಯ 90; ಕೇತನ್‌ 17ಕ್ಕೆ2, ಗೌತಮ್‌ 67ಕ್ಕೆ4); ಬಿ.ಎಂ.ಇಂಗ್ಲಿಷ್‌ ಶಾಲೆ: 19.4 ಓವರ್‌ಗಳಲ್ಲಿ 74 (ಆದಿತ್ಯ 22ಕ್ಕೆ5, ಲಲಿತ್‌ ವರ್ಮಾ 15ಕ್ಕೆ4). ಫಲಿತಾಂಶ: ಪ್ರೆಸಿಡೆನ್ಸಿ ಸ್ಕೂಲ್‌ಗೆ 291 ರನ್‌ಗಳ ಜಯ. ವ್ಯಾಸ ಇಂಟರ್‌ನ್ಯಾಷನಲ್ ಸ್ಕೂಲ್: 47.4 ಓವರ್‌ಗಳಲ್ಲಿ 200 (ನಿರಂಜನ್ 80; ಆಗ್ನೇಯ 34ಕ್ಕೆ4); ಆಕ್ರಿಜ್ ಇಂಟರ್‌ನ್ಯಾಷನಲ್ ಸ್ಕೂಲ್‌: 36.2 ಓವರ್‌ಗಳಲ್ಲಿ 5ಕ್ಕೆ 201 (ಪ್ರಣಯ್‌ 58; ಉಲ್ಲಾಸ್‌ 7ಕ್ಕೆ2). ಫಲಿತಾಂಶ: ಆಕ್ರಿಜ್ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ 5 ವಿಕೆಟ್ ಜಯ. ವೀನಸ್ ಇಂಟರ್‌ನ್ಯಾಷನಲ್‌ ಸ್ಕೂಲ್‌: 39.2 ಓವರ್‌ಗಳಲ್ಲಿ 190 (ರಘುವೀರ್‌ 74; ನಿಶಾಂತ್‌ 12ಕ್ಕೆ2, ಹೇಮಾಂಗ್‌ 40ಕ್ಕೆ2, ಅಮೋಘ್‌ 49ಕ್ಕೆ6); ಆರ್ಮಿ ಪಬ್ಲಿಕ್‌ ಸ್ಕೂಲ್‌: 28.4 ಓವರ್‌ಗಳಲ್ಲಿ 94 (ಚಿರಾಗ್‌ 12ಕ್ಕೆ2, ಶ್ರವಣ್‌ 22ಕ್ಕೆ2, ಸಕ್ಲೇನ್‌ 12ಕ್ಕೆ2, ಚಿರಂತ್‌ 11ಕ್ಕೆ2). ಫಲಿತಾಂಶ: ವೀನಸ್ ಇಂಟರ್‌ನ್ಯಾಷನಲ್‌ ಸ್ಕೂಲ್‌ಗೆ 96 ರನ್‌ಗಳ ಜಯ. ದಿ ನ್ಯೂ ಕೇಂಬ್ರಿಜ್‌ ಹೈ ಸ್ಕೂಲ್‌: 50 ಓವರ್‌ಗಳಲ್ಲಿ 8ಕ್ಕೆ 291 (ಹರ್ಷಿತ್‌ 81, ವಿವೇಕ್‌ 94, ಸೋಹನ್‌ 46; ರಿತ್ವಿಕ್‌ 44ಕ್ಕೆ5); ಸೇಂಟ್‌ ಕ್ಲಾರೆಟ್‌ ಸ್ಕೂಲ್‌ ಜಾಲಹಳ್ಳಿ: 43.2 ಓವರ್‌ಗಳಲ್ಲಿ 199 (ತುಷಾರ್‌ 43; ಅಭಿಲಾಷ್‌ 9ಕ್ಕೆ3, ಹರ್ಷಿತ್‌ 29ಕ್ಕೆ3). ಫಲಿತಾಂಶ: ದಿ ನ್ಯೂ ಕೇಂಬ್ರಿಜ್‌ ಹೈ ಸ್ಕೂಲ್‌ಗೆ 92 ರನ್‌ಗಳ ಗೆಲುವು. ಸ್ಕೂಲ್ ಆಫ್ ಇಂಡಿಯಾ: 50 ಓವರ್‌ಗಳಲ್ಲಿ 200 (ಮಾಲತೇಶ್‌ 91; ರೋಹನ್‌ 40ಕ್ಕೆ3, ಗಗನೇಶ್‌ 27ಕ್ಕೆ2, ಮಾಧವ್‌ 40ಕ್ಕೆ3); ಎಂಇಎಸ್‌ ಕಿಶೋರ್ ಕೇಂದ್ರ: 43.5 ಓವರ್‌ಗಳಲ್ಲಿ 171 (ಮಾಧವ್‌ 47, ರೋಹನ್‌ 63; ಕೀರ್ತನ್‌ 25ಕ್ಕೆ4, ಶ್ರೀ ಚರಣ್‌ 22ಕ್ಕೆ3). ಫಲಿತಾಂಶ: ಸ್ಕೂಲ್ ಆಫ್ ಇಂಡಿಯಾಗೆ 29 ರನ್‌ಗಳ ಗೆಲುವು. ವೆಂಕಟ್‌ ಇಂಟರ್‌ನ್ಯಾಷನಲ್‌ ಪಬ್ಲಿಕ್ ಸ್ಕೂಲ್‌: 50 ಓವರ್‌ಗಳಲ್ಲಿ 9ಕ್ಕೆ 275 (ಸುದರ್ಶನ್‌ 52, ಪ್ರದ್ಯುಮ್ನ 52; ಸಂತೋಷ್‌ 56ಕ್ಕೆ2); ಸೇಂಟ್ ಮೀರಾಸ್‌ ಹೈಸ್ಕೂಲ್‌: 37.4 ಓವರ್‌ಗಳಲ್ಲಿ 202 (ಸುಹಾಸ್‌ 59; ಶ್ರೀಕೃಷ್ಣ 35ಕ್ಕೆ5). ಫಲಿತಾಂಶ: ವೆಂಕಟ್‌ ಇಂಟರ್‌ನ್ಯಾಷನಲ್‌ ಪಬ್ಲಿಕ್ ಸ್ಕೂಲ್‌ಗೆ 75 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT