ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯ ನೆಲೆಯಲ್ಲಿ ‘ಕಾಲೂ’ ಎಂದು ಕರೆದಿದ್ದ ಆಟಗಾರ:ಕ್ಷಮೆ ಬೇಡಿಕೆ ಕೈಬಿಟ್ಟ ಸಾಮಿ

Last Updated 12 ಜೂನ್ 2020, 9:44 IST
ಅಕ್ಷರ ಗಾತ್ರ

ಕಿಂಗ್‌ಸ್ಟನ್‌: ‘ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯಲ್ಲಿ ತಮ್ಮನ್ನು ವರ್ಣಭೇದ ಅರ್ಥವಿರುವ ಅಡ್ಡಹೆಸರಿನಿಂದ ಕರೆಯಲಾಗುತ್ತಿತ್ತು. ತಮ್ಮನ್ನು ಕಾಲೂ ಎಂದು ಕರೆದಿದ್ದ ಆಟಗಾರರು ಕ್ಷಮೆ ಕೋರಬೇಕು’ ಎಂದು ಒತ್ತಾಯಿಸಿದ್ದ ವೆಸ್ಟ್‌ ಇಂಡೀಸ್‌ ಆಟಗಾರ ಡ್ಯಾರೆನ್‌ ಸಾಮಿ, ಈಗ ಆ ಬೇಡಿಕೆಯಿಂದ ಹಿಂದೆಸರಿದಿದ್ದಾರೆ.

‘ಆ ರೀತಿ ನನ್ನನ್ನು ಕರೆದಿದ್ದ ಆಟಗಾರ ನನ್ನನ್ನು ಸಂಪರ್ಕಿಸಿದ್ದರು. ಪ್ರೀತಿ, ಸಲುಗೆಯ ನೆಲೆಯಲ್ಲಿ ಆ ರೀತಿ ಕರೆದಿದ್ದಾಗಿ ಹೇಳಿದ್ದಾರೆ’ ಎಂದು ಸಾಮಿ ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ತಾವಾಡುವ ಐಪಿಎಲ್‌ ಫ್ರಾಂಚೈಸ್‌ ಸನ್‌ರೈಸರ್ಸ್‌ ಹೈದರಾಬಾದ್‌ನ ಆಟಗಾರನ ವಿರುದ್ಧ ಸಾಮಿ ಜನಾಂಗೀಯ ನಿಂದನೆ ಆರೋಪ ಮಾಡಿದ್ದರು.

‘ನಾನು ಆ ಆಟಗಾರನೊಂದಿಗೆ (ಕಾಲೂ ಎಂದು ಕರೆದ) ನಡೆಸಿದ ಸಂಭಾಷಣೆ ಆಸಕ್ತಿದಾಯಕವಾಗಿತ್ತು. ನಕಾರಾತ್ಮಕ ಚಿಂತನೆಗಳತ್ತ ಗಮನಹರಿಸುವುದನ್ನು ಬಿಟ್ಟು ತಿಳಿವಳಿಕೆ ಮೂಡಿಸುವ ಮಾರ್ಗಗಳತ್ತ ನಾವು ನೋಡಬೇಕು. ಪ್ರೀತಿಯ ನೆಲೆಯಲ್ಲಿ ಆ ರೀತಿ ಕರೆದಿದ್ದಾಗಿ ಸಹೋದರ ಸ್ಪಷ್ಟಪಡಿಸಿದ್ದಾನೆ. ಅವನ ಮೇಲೆ ನಂಬಿಕೆಯಿದೆ’ ಎಂದು ಸಾಮಿ ಟ್ವೀಟ್‌ ಮಾಡಿದ್ದಾರೆ.

‘ಪಶ್ಚಾತ್ತಾಪದ ತರುವಾಯ ಕ್ಷಮೆಗೆ ನಾನು ಒತ್ತಾಯಿಸುವುದಿಲ್ಲ. ನಾನು ಅಥವಾ ನನ್ನ ತಂಡ ಉದ್ದೇಶಪೂರ್ವಕವಾಗಿ ಈ ರೀತಿ ಮಾಡದಿದ್ದರೆ, ಕ್ಷಮೆಗೆ ಬೇಡಿಕೆ ಇಡುವುದು ನನ್ನದೇ ತಂಡಕ್ಕೆ ನೋವು ತರಬಹುದು. ಈ ಬಗ್ಗೆ ನನಗೆ ಅರಿವಿದೆ’ ಎಂದು ಅವರು ಇಎಸ್‌ಪಿಎನ್‌ ಕ್ರಿಕ್ಇನ್ಫೊಗೆ ತಿಳಿಸಿದ್ದಾರೆ.

ಆದರೆ ತಮ್ಮನ್ನು ಸಂಪರ್ಕಿಸಿದ್ದ ಆಟಗಾರನ ಹೆಸರನ್ನು ಸಾಮಿ ಬಹಿರಂಗಪಡಿಸಿಲ್ಲ.

‘ಒಂದೊಮ್ಮೆ ತಾನು ಮಾಡಿದ್ದು ತಪ್ಪು ಎನಿಸಿದರೆ ಮಾತ್ರ ಆತ ಕ್ಷಮೆ ಕೇಳಬಹುದು. ನನಗೆ ವಿಶ್ವಾಸವಿದೆ ಮತ್ತು ಕಪ್ಪು ಬಣ್ಣದವನಾಗಿದ್ದಕ್ಕೆ ಹೆಮ್ಮೆಯಿದೆ. ಆ ಭಾವನೆ ಎಂದೂ ಬದಲಾಗುವುದಿಲ್ಲ’ ಎಂದು ಸಾಮಿ ಹೇಳಿದ್ದಾರೆ.

ಈ ವಿಷಯದ ಕುರಿತು ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಕೋಚ್‌ ಟಾಮ್‌ ಮೂಡಿ ಅವರೊಂದಿಗೂ ಚರ್ಚಿಸಿದ್ದಾಗಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT