ಮಂಗಳವಾರ, ಅಕ್ಟೋಬರ್ 20, 2020
23 °C
ಸ್ಯಾಮ್‌ ಕರನ್‌ಗೆ ಮೂರು ವಿಕೆಟ್; ಸ್ಮಿತ್‌ ಅರ್ಧಶತಕ; ಪಂದ್ಯದಲ್ಲಿ 33 ಸಿಕ್ಸರ್‌ ದಾಖಲು

IPL-2020 | ಸ್ಯಾಮ್ಸನ್ ಆಟ; ರಾಜಸ್ಥಾನ ರಾಯಲ್ಸ್‌ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಾರ್ಜಾ: ಕೇರಳದ ಸಂಜು ಸ್ಯಾಮ್ಸನ್‌ ಮತ್ತು ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಅವರ ಜೊತೆಯಾಟದ ಮುಂದೆ ಚೆನ್ನೈ ಸೂಪರ್ ಕಿಂಗ್ಸ್‌ ಬೌಲರ್‌ಗಳು ಬಸವಳಿದರು. ನಾಯಕ ಮಹೇಂದ್ರಸಿಂಗ್ ಧೋನಿಯ ತಂತ್ರಗಳು ಫಲ ನೀಡಲಿಲ್ಲ.

ಸಂಜು (74;32ಎಸೆತ, 1ಬೌಂಡರಿ, 9ಸಿಕ್ಸರ್) ಮತ್ತು  ಸ್ಮಿತ್ (69; 47ಎ, 4ಬೌಂ, 4ಸಿ) ಎರಡನೇ ವಿಕೆಟ್‌ಗೆ ಸೇರಿಸಿದ 121 ರನ್‌ಗಳ ಜೊತೆಯಾಟದ ಬಲದಿಂದ ರಾಜಸ್ಥಾನ ರಾಯಲ್ಸ್‌ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 216 ರನ್‌ ಗಳಿಸಿತು.  ಟಾಸ್ ಗೆದ್ದ ಚೆನ್ನೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ದೀಪಕ್ ಚಾಹರ್ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಬೌಲರ್‌ಗೇ ಕ್ಯಾಚಿತ್ತರು. ಚೆನ್ನೈ ಬಳಗದ ಸಂತಸ ಹೆಚ್ಚು ಹೊತ್ತು ಉಳಿಯಲು ಸಂಜು ಬಿಡಲಿಲ್ಲ.

ಕ್ರೀಸ್‌ಗೆ ಬಂದವರೇ ಅಬ್ಬರಿಸಲು ಆರಂಭಿಸಿದರು. ಕೇವಲ 19 ಎಸೆತಗಳಲ್ಲಿ 50 ರನ್‌ ಹೊಡೆದರು. ಅವರ ಆಟಕ್ಕೇ ಹೆಚ್ಚು ಅವಕಾಶ ಮಾಡಿಕೊಟ್ಟ ನಾಯಕ ಸ್ಮಿತ್ ನಿಧಾನವಾಗಿ ಆಡಿದರು. ಸಂಜು ಒಂಬತ್ತು ಸಿಕ್ಸರ್‌ಗಳನ್ನು ಎತ್ತಿದರು. ಕೇವಲ ಒಂಬತ್ತು ಓವರ್‌ಗಳಲ್ಲಿ ತಂಡದ ಮೊತ್ತವು 100ರ ಗಡಿ ಮುಟ್ಟಿತು. ಇದು ಮುಂದೆ ದೊಡ್ಡ ಮೊತ್ತ ಕಲೆಹಾಕಲು ಅಡಿಪಾಯವಾಯಿತು. 12ನೇ ಓವರ್‌ನಲ್ಲಿ ಸ್ಯಾಮ್ಸನ್‌ ದೊಡ್ಡ ಹೊಡೆತಕ್ಕೆ ಯತ್ನಿಸಿ ದೀಪಕ್ ಚಾಹರ್‌ಗೆ ಕ್ಯಾಚಿತ್ತರು. ವಿಕೆಟ್ ಗಳಿಸಿದ ಲುಂಗಿ ಗಿಡಿ ಸಂಭ್ರಮಿಸಿದರು. ಆದರ ಕ್ರೀಸ್‌ನಲ್ಲಿದ್ದ ಸ್ಮಿತ್ ತಮ್ಮ ಆಟದ ವೇಗ ಹೆಚ್ಚಿಸಿಕೊಂಡರು. ಆದರೆ ಕ್ರೀಸ್‌ಗೆ ಬಂದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಇರಲಿಲ್ಲ.

ಕೋವಿಡ್‌ನಿಂದ ಚೇತರಿಸಿಕೊಂಡ ನಂತರ ಕಣಕ್ಕಿಳಿದಿ ಋತುರಾಜ್ ಗಾಯಕವಾಡ್ ಅವರ ಚುರುಕಿನ ಫೀಲ್ಡಿಂಗ್‌ನಿಂದ ಡೇವಿಡ್‌ ಮಿಲ್ಲರ್ ಖಾತೆ ತೆರೆಯದೇ ರನ್‌ಔಟ್ ಆದರು. ಕನ್ನಡಿಗ ರಾಬಿನ್ ಉತ್ತಪ್ಪ (5ರನ್) ಅವರಿಗೆ ಪಿಯೂಷ್ ಚಾವ್ಲಾ ಪೆವಿಲಿಯನ್ ದಾರಿ ತೋರಿಸಿದರು. ಒಂದೆಡೆ ವಿಕೆಟ್ ಹೋಗುತ್ತಿದ್ದರೂ ಸ್ಮಿತ್  ಬ್ಯಾಟ್ ಬೀಸುತ್ತಿದ್ದರು. 19ನೇ ಓವರ್‌ನಲ್ಲಿ ಸ್ಮಿತ್ ಔಟಾದಾಗ ತಂಡದ ಮೊತ್ತವು 178  ಆಗಿತ್ತು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ಜೋಫ್ರಾ ಆರ್ಚರ್ ಎಂಟು ಎಸೆತಗಳಲ್ಲಿ 27 ರನ್‌ಗಳನ್ನು ಸೂರೆ ಮಾಡಿದರು. ನಾಲ್ಕು ಅಮೋಘ ಸಿಕ್ಸರ್ ಸಿಡಿಸಿ ತಂಡದ ಮೊತ್ತವು ಇನ್ನೂರರ ಗಡಿ ದಾಟುವಂತೆ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು