ಚೆನ್ನೈ: ಸತತ ಮೂರು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಸಂಜು ಸ್ಯಾಮ್ಸನ್ ಶನಿವಾರ ಚೆಪಾಕ್ ಕ್ರೀಡಾಂಗಣದಲ್ಲಿ ಮರಳಿ ಅರಳಿದರು. ಅವರ ಅಮೋಘ ಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ನ ಹಾಲಿ ಆವೃತ್ತಿಯಲ್ಲಿ ಮೊದಲ ಜಯ ದಾಖಲಿಸಿತು.

ಹ್ಯಾಟ್ರಿಕ್ ಸೋಲು ಅನುಭವಿಸಿದ್ದ ಋತುರಾಜ್ ಗಾಯಕವಾಡ್ ಬಳಗವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್ಗಳ ಜಯ ದಾಖಲಿಸಿತು. ಅಕ್ಷರ್ ಪಟೇಲ್ ಪಡೆಗೆ ಇದು ಸತತ ಎರಡನೇ ಸೋಲು.

ರಾಜಸ್ಥಾನ ರಾಯಲ್ಸ್ನಿಂದ ಚೆನ್ನೈ ತಂಡಕ್ಕೆ ಬಂದ ಸಂಜು ಅವರಿಗೆ ಮೊದಲ ಮೂರು ಪಂದ್ಯಗಳಲ್ಲಿ ಎರಡಂಕಿ ದಾಟಲು ಸಾಧ್ಯವಾಗಿರಲಿಲ್ಲ. ಆದರೆ, ಈ ಪಂದ್ಯದಲ್ಲಿ 56 ಎಸೆತಗಳಲ್ಲಿ ಅಜೇಯ 115 ರನ್ ಬಾರಿಸಿದರು. ಐಪಿಎಲ್ನಲ್ಲಿ ಅವರಿಗೆ ಇದು ನಾಲ್ಕನೇ ಶತಕವಾಗಿದೆ. ಅವರು ಮತ್ತು ಯುವತಾರೆ ಆಯುಷ್ ಮ್ಹಾತ್ರೆ (59; 36ಎ, 4x3, 6x4) ಅವರ ಅಟದ ಬಲದಿಂದ ಚೆನ್ನೈ ತಂಡವು 20 ಓವರ್ಗಳಲ್ಲಿ 2 ವಿಕೆಟ್ಗಳಿಗೆ 212 ರನ್ ಗಳಿಸಿತು.

ಕಠಿಣ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಇಂಗ್ಲೆಂಡ್ನ ವೇಗಿ ಜೇಮಿ ಓವರ್ಟನ್ (18ಕ್ಕೆ 4) ಮತ್ತು ಅನ್ಶುಲ್ ಕಂಬೋಜ್ (35ಕ್ಕೆ 3) ಕಡಿವಾಣ ಹಾಕಿದರು. ಇದರಿಂದಾಗಿ ನಿಗದಿತ ಓವರ್ಗಳಲ್ಲಿ 189 ರನ್ ಗಳಿಸಿ ಹೋರಾಟವನ್ನು ಮುಗಿಸಿತು.

ಪಥುಮ್ ನಿಸಾಂಕ (41) ಮತ್ತು ಕೆ.ಎಲ್.ರಾಹುಲ್ (18) ಮೊದಲ ವಿಕೆಟ್ಗೆ 61 ಸೇರಿಸಿ ಉತ್ತಮ ಆರಂಭ ನೀಡಿದರು. ಆದರೆ, ನಂತರದಲ್ಲಿ ಕಂಬೋಜ್ ಮತ್ತು ಓವರ್ಟನ್ ದಾಳಿಗೆ ನಿಯಮಿತವಾಗಿ ವಿಕೆಟ್ಗಳು ಉರುಳಿದವು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಟ್ರಿಸ್ಟನ್ ಸ್ಟಬ್ಸ್ (60;38) ಏಕಾಂಗಿ ಹೋರಾಟ ತೋರಿದರೂ ಗೆಲುವಿನ ಗುರಿ ದೂರವಿತ್ತು.

ಇದಕ್ಕೂ ಮುನ್ನ ಟಾಸ್ ಗೆದ್ದ ಡೆಲ್ಲಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸಂಜು ಮತ್ತು ನಾಯಕ ಋತುರಾಜ್ (15; 18ಎ) ಅವರು ಪವರ್ಪ್ಲೇ ಹಂತದಲ್ಲಿ 62 ರನ್ ಸೇರಿಸಿದರು. ಡೆಲ್ಲಿ ನಾಯಕ, ಸ್ಪಿನ್ನರ್ ಅಕ್ಷರ್ ಪಟೇಲ್ ಅವರು ಋತುರಾಜ್ ವಿಕೆಟ್ ಗಳಿಸಿ ಜೊತೆಯಾಟ ಮುರಿದರು.

ಸಂಜು ಜೊತೆಗೂಡಿದ ಆಯುಷ್ ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 68 ಎಸೆತಗಳಲ್ಲಿ 113 ರನ್ ಸೇರಿಸಿದರು. ಆಯುಷ್ ಅವರ ಎರಡು ಕ್ಯಾಚ್ಗಳನ್ನೂ ಫೀಲ್ಡರ್ಗಳು ಕೈಚೆಲ್ಲಿದರು.

ಆಯುಷ್ ಅವರು ಗಾಯಗೊಂಡು ನಿವೃತ್ತರಾಗಿ ಪೆವಿಲಿಯನ್ಗೆ ಮರಳಿದರು. ಈ ಸಂದರ್ಭದಲ್ಲಿ ಕ್ರೀಸ್ಗೆ ಬಂದ ಶಿವಂ ದುಬೆ 10 ಎಸೆತಗಳಲ್ಲಿ 20 ರನ್ ಹೊಡೆದರು.

ಸಂಜು ಕಳೆದೆರಡೂ ಪಂದ್ಯಗಳಲ್ಲಿ ಫಾರ್ಮ್ ಕಳೆದುಕೊಂಡಿದ್ದರು. ಆದರೆ, ಇಲ್ಲಿ ಅವರು ತಮ್ಮ ಬ್ಯಾಟಿಂಗ್ ಸೊಬಗನ್ನು ಚೆನ್ನೈ ಅಭಿಮಾನಿಗಳಿಗೆ ಉಣಬಡಿಸಿದರು. ಅವರ ಶತಕದಲ್ಲಿ 15 ಬೌಂಡರಿ ಹಾಗೂ 4 ಸಿಕ್ಸರ್ ಇದ್ದವು.

ಸಂಕ್ಷಿಪ್ತ ಸ್ಕೋರು:

ಚೆನ್ನೈ ಸೂಪರ್ ಕಿಂಗ್ಸ್: 20 ಓವರ್ಗಳಲ್ಲಿ 2 ವಿಕೆಟ್ಗಳಿಗೆ 212 (ಸಂಜು ಸ್ಯಾಮ್ಸನ್ ಔಟಾಗದೇ 115, ಆಯುಷ್ ಮ್ಹಾತ್ರೆ ಗಾಯಗೊಂಡು ನಿವೃತ್ತಿ 59, ಶಿವಂ ದುಬೆ ಔಟಾಗದೇ 20, ಅಕ್ಷರ್ ಪಟೇಲ್ 39ಕ್ಕೆ1).

ಡೆಲ್ಲಿ ಕ್ಯಾಪಿಟಲ್ಸ್: 20 ಓವರ್ಗಳಲ್ಲಿ 189 (ಪಥುಮ್ ನಿಸಾಂಕ 41, ಕೆ.ಎಲ್.ರಾಹುಲ್ 18, ಟ್ರಿಸ್ಟನ್ ಸ್ಟಬ್ಸ್ 60, ಆಶುತೋಷ್ ಶರ್ಮಾ 19; ಜೇಮಿ ಓವರ್ಟನ್ 18ಕ್ಕೆ4, ಅನ್ಶುಲ್ ಕಂಬೋಜ್ 35ಕ್ಕೆ3). ಪಂದ್ಯದ ಆಟಗಾರ: ಸಂಜು ಸ್ಯಾಮ್ಸನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.