ದುಬೈ : ಭಾರತದ ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಮಂಗಳವಾರ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿದ ‘ಮಾರ್ಚ್ ತಿಂಗಳ ಆಟಗಾರ’ ಗೌರವಕ್ಕೆ ಭಾಜನರಾಗಿದ್ದಾರೆ.

31 ವರ್ಷದ ಸ್ಯಾಮ್ಸನ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಇದರಿಂದಾಗಿ ಭಾರತ ತಂಡವು ದಾಖಲೆಯ ಮೂರನೇ ಬಾರಿ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿತ್ತು.

ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಸ್ಯಾಮ್ಸನ್ ಅವರಿಗೆ ತಂಡದಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಆದರೆ, ಕೊನೆಯ ಹಂತದ ನಿರ್ಣಾಯಕ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ತಂಡವು ಪ್ರಶಸ್ತಿ ಉಳಿಸಿಕೊಳ್ಳಲು ಮಹತ್ವದ ಕಾಣಿಕೆ ನೀಡಿದರು.

ವಿಶ್ವಕಪ್ ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸಂಜು ಅಜೇಯ 97 ರನ್ ಬಾರಿಸಿದ್ದರು. ಅವರ ಆಟದ ನೆರವಿನಿಂದ ಭಾರತ ಸೆಮಿಫೈನಲ್ ಪ್ರವೇಶಿಸಿತ್ತು. ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಮತ್ತು ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ತಲಾ 89 ರನ್ ಬಾರಿಸಿದ್ದರು. ಈ ಮೂರು ಪಂದ್ಯಗಳಲ್ಲಿ 199.27ರ ಸ್ಟ್ರೈಕ್ರೇಟ್ನಲ್ಲಿ ಒಟ್ಟು 275 ರನ್ ಗಳಿಸಿ ಗಮನ ಸೆಳೆದಿದ್ದರು.

ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ನ್ಯೂಜಿಲೆಂಡ್ ತಂಡದ ನಾಯಕಿ ಅಮೇಲಿಯಾ ಕೆರ್ ಅವರು ಮೂರನೇ ಬಾರಿಗೆ ‘ತಿಂಗಳ ಮಹಿಳಾ ಆಟಗಾರ್ತಿ’ ಗೌರವಕ್ಕೆ ಪಾತ್ರರಾಗಿದ್ದಾರೆ.

‘ತಿಂಗಳ ಆಟಗಾರ ಗೌರವ ಲಭಿಸಿರುವುದು ಅದ್ಭುತ ಅನುಭವ. ವಿಶೇಷವಾಗಿ ಇದು ನನ್ನ ಕ್ರಿಕೆಟ್ ಪ್ರಯಾಣದ ಅತ್ಯಂತ ಮರೆಯಲಾಗದ ಹಂತದಲ್ಲಿ ಬಂದಿದೆ. ಟಿ20 ವಿಶ್ವಕಪ್ ಗೆಲುವಿಗೆ ಕೊಡುಗೆ ನೀಡುವುದು ನನ್ನ ಕನಸಾಗಿತ್ತು’ ಎಂದು ಸಂಜು ಪ್ರತಿಕ್ರಿಯಿಸಿದ್ದಾರೆ.

ಇದೇ ಮೊದಲ ಬಾರಿಗೆ ಸಂಜು ಈ ಗೌರವಕ್ಕೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಕಳೆದ ಐದು ತಿಂಗಳಲ್ಲಿ ಐದು ದೇಶಗಳ ಆಟಗಾರರು ಈ ಗೌರವಕ್ಕೆ ಪಾತ್ರರಾದಂತಾಗಿದೆ. ಈ ಮೊದಲು ದಕ್ಷಿಣ ಆಫ್ರಿಕಾದ ಸೈಮನ್ ಹಾರ್ಮರ್, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್, ನ್ಯೂಜಿಲೆಂಡ್ನ ಡೇರಿಲ್ ಮಿಚೆಲ್ ಮತ್ತು ಪಾಕಿಸ್ತಾನದ ಸಾಹಿಬ್ಝಾದಾ ಫರ್ಹಾನ್ ಪ್ರಶಸ್ತಿ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.