ಇತ್ತೀಚಿಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಬಿಸಿಸಿಐನ ನಮನ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ವೇಳೆ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಪ್ರೀತಿಯಿಂದ ಮಾತನಾಡಿಸಿದ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಸಂಜು ಸ್ಯಾಮ್ಸನ್ ಅವರು ಕಳೆದ ಟಿ20 ವಿಶ್ವಕಪ್ನಲ್ಲಿ ಆಡಿದ 5 ಪಂದ್ಯಗಳಲ್ಲಿ 200ರ ಸ್ಟ್ರೈಕ್ರೇಟ್ನಲ್ಲಿ 321 ರನ್ ಗಳಿಸಿ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.

ಬಿಸಿಸಿಐನ ನಮನ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಸಂಜು ಅವರು, ‘ಮುಂಬರುವ ವಿಶ್ವಕಪ್ನಲ್ಲಿ ಟ್ರೋಫಿ ಕೂಡ ನಮ್ಮ ದೇಶದಲ್ಲೇ ಉಳಿಯಲಿದೆ. ನಮ್ಮಲ್ಲಿ ಅನೇಕ ಗುಣಮಟ್ಟದ ಆಟಗಾರರಿದ್ದಾರೆ’ ಎಂದು ಹೇಳಿದ್ದಾರೆ.

ಇನ್ನೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವೇದಿಕೆ ಕಡೆಗೆ ತೆರಳುತ್ತಿದ್ದ ಸಂಜು ಅವರನ್ನು ಕಂಡು ಕನ್ನಡಿಗ ಕೆ.ಎಲ್. ರಾಹುಲ್ ಅವರು ಎದ್ದು ನಿಂತು ಚಪ್ಪಾಳೆ ಮೂಲಕ ಅಭಿನಂದನೆ ಸಲ್ಲಿಸುತ್ತಾರೆ. ಮಾತ್ರವಲ್ಲ, ರಾಹುಲ್ ಅವರು ಸಂಜು ಸ್ಯಾಮ್ಸನ್ ಅವರಿಗೆ ಕೈಕುಲುಕಲು ಮುಂದೆ ಬರುತ್ತಾರೆ. ಆದರೆ, ಅವರನ್ನು ಗಮನಿಸದ ಸ್ಯಾಮ್ಸನ್ ಮುಂದೆ ಹೋಗುತ್ತಾರೆ.

ಅಂತಿಮವಾಗಿ ಕೆ.ಎಲ್ ರಾಹುಲ್ ನಿಂತಿರುವುದನ್ನು ಗಮನಿಸಿದ ಸಂಜು ಮತ್ತೆ ವಾಪಾಸ್ ಬಂದು ರಾಹುಲ್ ಅವರ ಕೈಕುಲುಕಿ ಅಪ್ಪುಗೆ ನೀಡಿ ವೇದಿಕೆಯತ್ತ ತೆರಳುತ್ತಾರೆ. ಸದ್ಯ, ಈ ವಿಡಿಯೊವನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತನ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ. ಅಭಿಮಾನಿಗಳು ಕೂಡ ಈ ಇಬ್ಬರ ಬಾಂಧವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.