ಅಹಮದಾಬಾದ್: ಕಿವೀಸ್ ವಿರುದ್ಧದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ತಂಡ 3ನೇ ಟಿ20 ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿದೆ.

ಭಾರತ ತಂಡದ ಆಟಗಾರ ಸಂಜು ಸ್ಯಾಮ್ಸನ್ ಸತತ ಮೂರು ಪಂದ್ಯಗಳಲ್ಲಿ ಅರ್ಧ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಜತೆಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
.ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವೇಗದ ದ್ವಿಶತಕ ಸಿಡಿಸಿ ದಾಖಲೆ ಬರೆದ ಇಶಾನ್ ಕಿಶನ್.T20WC| ಸಂಜು, ಅಭಿಷೇಕ್, ಕಿಶನ್ ಸ್ಫೋಟಕ ಬ್ಯಾಟಿಂಗ್; ವಿಶೇಷ ದಾಖಲೆ ಬರೆದ ಭಾರತ.
ಫೈನಲ್ ಪಂದ್ಯದಲ್ಲಿ ಸಂಜು 46 ಎಸೆತಗಳಲ್ಲಿ 89 ರನ್ ಬಾರಿಸಿದರು. ನಂತರ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಮಾತನಾಡಿದ ಸಂಜು, ‘ನಾನು ಫಾರ್ಮ್ ಕಳೆದುಕೊಂಡು ಹತಾಶನಾಗಿದ್ದಾಗ, ಮಾಜಿ ಕ್ರಿಕೆಟಿಗರೊಬ್ಬರು ನನಗೆ ಸ್ಫೂರ್ತಿ ನೀಡಿದರು’, ನಾನು ಅವರಿಗೆ ಕೃತಜ್ಞ ಎಂದು ಹೇಳಿದ್ದಾರೆ.

‘ನಮ್ಮ ಗೆಲುವು ಕನಸಿನಂತೆ ಕಾಣುತ್ತಿದೆ. ನನ್ನ ಈ ಕನಸಿನ ಪಯಣ ಎರಡು ವರ್ಷಗಳ ಹಿಂದೆ ಆರಂಭವಾಯಿತು. ನಾನು ಕಳೆದ ಟಿ20 ವಿಶ್ವಕಪ್ ತಂಡದಲ್ಲಿದ್ದೆ. ಆದರೆ ಆಗ ತಂಡದಲ್ಲಿ ಆಡಲು ಅವಕಾಶ ದೊರೆತಿರಲಿಲ್ಲ. ಇದಾದ ಬಳಿಕ ಭಾರತದಲ್ಲಿ ನಡೆದ ನ್ಯೂಜಿಲೆಂಡ್ ಸರಣಿಯ ನಂತರ ನಾನು ಫಾರ್ಮ್ ಕಳೆದುಕೊಂಡೆ. ಆ ವೇಳೆ ನನ್ನ ಕನಸು ಎಲ್ಲಿ ಭಗ್ನವಾಗುತ್ತದೆಯೋ ಎಂಬ ಭಯವಿತ್ತು. ಆಗ ಸಚಿನ್ ತೆಂಡ್ಯೂಲ್ಕರ್ ನನ್ನ ಬೆನ್ನಿಗೆ ನಿಂತರು. ಅವರು ನನಗೆ ಸ್ಫೂರ್ತಿ ನೀಡಿದರು’ ಎಂದು ಹೇಳಿದ್ದಾರೆ.

‘ನಾನು ಸಂಕಷ್ಟದಲ್ಲಿದ್ದಾಗ ಅನೇಕ ಮಾಜಿ ಕ್ರಿಕೆಟಿಗರು ನನಗೆ ಕರೆ ಮಾಡಿ ಬೆಂಬಲಿಸಿದರು. ಸಚಿನ್ ಅವರಿಂದ ನಾನು ಮಾರ್ಗದರ್ಶನ ಪಡೆದಿದ್ದೇನೆ. ಅವರೊಂದಿಗೆ ಚಾಟ್ ಮಾಡಿದ್ದೇನೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಸಂಜು ಹೇಳಿದ್ದಾರೆ.
.T–20 World Cup: ಪಿತೃತ್ವ ರಜೆ; ನ್ಯೂಜಿಲೆಂಡ್ನ ಮ್ಯಾಟ್ ಹೆನ್ರಿ ತವರಿಗೆ.
3 ಪಂದ್ಯಗಳಲ್ಲಿ 3 ಅರ್ಧ ಶತಕ

ಭಾರತ ತಂಡದ ಅತಿ ಮುಖ್ಯ 3 ಪಂದ್ಯಗಳಲ್ಲಿ ಸಂಜು ಉತ್ತಮ ಪ್ರದರ್ಶನ ನೀಡಿದ್ದಾರೆ. ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದ, ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 50 ಎಸೆತಗಳಲ್ಲಿ ಅಜೇಯ 97 ರನ್ ಗಳಿಸಿದ್ದರು. ನಂತರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 42 ಎಸೆತಗಳಲ್ಲಿ 89ರನ್ ಹಾಗೂ ನ್ಯೂಜಿಲೆಂಡ್ ವಿರುದ್ದದ ಫೈನಲ್ ಪಂದ್ಯದಲ್ಲಿ 46 ಎಸೆತಗಳಲ್ಲಿ 89 ರನ್ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.