ದುಬೈ: ಅಮೋಘ ಲಯದಲ್ಲಿರುವ ಭಾರತದ ವಿಕೆಟ್ ಕೀಪರ್– ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಟಿ20 ವಿಶ್ವಕಪ್ ‘ಟೂರ್ನಿಯ ಆಟಗಾರ’ ನಾಮನಿರ್ದೇಶನಕ್ಕೆ ಐಸಿಸಿ ಶುಕ್ರವಾರ ಅಂತಿಮಗೊಳಿಸಿರುವ ಎಂಟು ಆಟಗಾರರಲ್ಲಿ ಒಳಗೊಂಡಿದ್ದಾರೆ.

ಇಂಗ್ಲೆಂಡ್ನ ಆಲ್ರೌಂಡರ್ ವಿಲ್ ಜ್ಯಾಕ್ಸ್, ಪಾಕಿಸ್ತಾನದ ಆರಂಭ ಆಟಗಾರ ಸಾಹಿಬ್ಝಾದ ಫರ್ಹಾನ್, ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಂಗಿ ಎನ್ಗಿಡಿ, ನಾಯಕ ಏಡನ್ ಮರ್ಕರಂ, ನ್ಯೂಜಿಲೆಂಡ್ನ ಆಲ್ರೌಂಡರ್ ರಚಿನ್ ರವೀಂದ್ರ, ಆರಂಭ ಆಟಗಾರ ಟಿಮ್ ಸೀಫರ್ಟ್ ಮತ್ತು ಅಮೆರಿದಕ ವೇಗದ ಬೌಲರ್ ಶಾಡ್ಲಿ ವಾನ್ ಶಾಲ್ವಿಕ್ ಅವರು ನಾಮನಿರ್ದೇಶನಗೊಂಡಿರುವ ಇತರ ಏಳು ಆಟಗಾರರು.

ಈ ಟೂರ್ನಿಯಲ್ಲಿ ಸ್ಯಾಮ್ಸನ್ ಬರೇ ಮೂರು ಪಂದ್ಯಗಳನ್ನಾಡಿದ್ದು ಕೊನೆಯ ಎರಡು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ. 201.73 ಸ್ಟ್ರೈಕ್ರೇಟ್ನಲ್ಲಿ 77.33 ಸರಾಸರಿಯಲ್ಲಿ 232 ರನ್ ಪೇರಿಸಿದ್ದಾರೆ.

ಕ್ವಾರ್ಟರ್ಫೈನಲ್ ಮತ್ತು ಸೆಮಿಫೈನಲ್ನಲ್ಲಿ ಅವರು ತಂಡದ ದೊಡ್ಡಮೊತ್ತಕ್ಕೆ ಭದ್ರಬುನಾದಿ ಹಾಕಿದ್ದರು. ಗುರುವಾರ ನಡೆದ ಸೆಮಿಫೈನಲ್ನಲ್ಲಿ 42 ಎಸೆತಗಳಲ್ಲಿ 89 ರನ್ ಹೊಡೆದು ತಂಡದ ದೊಡ್ಡ ಮೊತ್ತಕ್ಕೆ ಅಡಿಪಾಯ ಹಾಕಿದ್ದರು. ಎಂಟರ ಘಟ್ಟದ ಪಂದ್ಯದಲ್ಲಿ ತಂಡವನ್ನು ಬಹುತೇಕ ಏಕಾಂಗಿಯಾಗಿ ಗೆಲ್ಲಿಸಿದ್ದರು.

ಇಂಗ್ಲೆಂಡ್ ತಂಡದ ಆರು ಗೆಲುವುಗಳಲ್ಲಿ ಜ್ಯಾಕ್ಸ್ ಕೊಡುಗೆ ದೊಡ್ಡದು. ಅವರು ನಾಲ್ಕು ಪಂದ್ಯಗಳಲ್ಲಿ ಪಂದ್ಯದ ಆಟಗಾರ ಗೌರವಕ್ಕೆ ಪಾತ್ರರಾಗಿದ್ದಾರೆ.

ಫರ್ಹಾನ್ 6 ಇನಿಂಗ್ಸ್ಗಳಲ್ಲಿ 383 ರನ್ ಗಳಿಸಿದ್ದರು. ಇದು ಟಿ20 ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಆಟಗಾರನೊಬ್ಬ ಗಳಿಸಿದ ಅತ್ಯಧಿಕ ಮೊತ್ತ. ಅವರು ಒಂದೇ ಆವೃತ್ತಿಯಲ್ಲಿ ಎರಡು ಶತಕ ಗಳಿಸಿದ ಮೊದಲ ಆಟಗಾರ ಸಹ.

ವೇಗದ ಬೌಲರ್ ಲುಂಗಿ ಎನ್ಗಿಡಿ ಅವರು ದಕ್ಷಿಣ ಆಫ್ರಿಕಾ ಪರ 7.19ರ ಇಕಾನಮಿಯಲ್ಲಿ 7 ಪಂದ್ಯಗಳಿಂದ 12 ವಿಕೆಟ್ ಕಿತ್ತು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮರ್ಕರಂ ಮೂರು ಅರ್ಧ ಶತಕಗಳು ಸೇರಿದಂತೆ 286 ರನ್ ಗಳಿಸಿದ್ದರು. ಒಂದು ವಿಕೆಟ್ ಸಹ ಪಡೆದಿದ್ದಾರೆ.

ನ್ಯೂಜಿಲೆಂಡ್ನ ಆಲ್ರೌಂಡರ್ ರಚಿನ್ ರವೀಂದ್ರ ಎಂಟು ಪಂದ್ಯಗಳಲ್ಲಿ 128 ರನ್ಗಳ ಜೊತೆ 11 ವಿಕೆಟ್ಗಳನ್ನು ಪಡೆದು ತಂಡದ ಯಶಸ್ಸಿನಲ್ಲಿ ಕಾಣಿಕೆ ನೀಡಿದ್ದಾರೆ.

ಅಮೆರಿಕ ಟೂರ್ನಿಯಲ್ಲಿ ಬಲುಬೇಗ ಹೊರಬಿದ್ದರೂ, ಛಾಪು ಮೂಡಿಸುವಲ್ಲಿ ಶಾಲ್ವಿಕ್ ಯಶಸ್ವಿ ಆಗಿದ್ದರು. ಅವರು 4 ಪಂದ್ಯಗಳಿಂದ 6.80ರ ಇಕಾನಮಿಯಲ್ಲಿ 13 ವಿಕೆಟ್ ಬಾಚಿಕೊಂಡು ಗಮನ ಸೆಳೆದಿದ್ದಾರೆ.

ವಿಕೆಟ್ ಕೀಪರ್–ಬ್ಯಾಟರ್ ಟಿಮ್ ಸೀಫರ್ಟ್ ಅವರು ನ್ಯೂಜಿಲೆಂಡ್ನ ಯಶಸ್ಸಿನಲ್ಲಿ ಗಣನೀಯ ಪಾತ್ರ ವಹಿಸಿದ್ದಾರೆ. ಅವರು ಎಂಟು ಪಂದ್ಯಗಳಿಂದ 274 ರನ್ ಗಳಿಸಿದ್ದು ತಂಡಕ್ಕೆ ಮಿಂಚಿನ ಆರಂಭ ಒದಗಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.