ಮುಂಬೈ: ‘ಅವರು ಕೊನೆ ಓವರ್ಗಳಲ್ಲಿ ಅಷ್ಟೊಂದು ಅದ್ಭುತವಾಗಿ ಬೌಲಿಂಗ್ ಮಾಡದಿದ್ದರೆ, ನಾನು ಇಲ್ಲಿ ನಿಲ್ಲುತ್ತಿರಲಿಲ್ಲ. ಈ ಎಲ್ಲಾ ಶ್ರೇಯಸ್ಸು ಅವರಿಗೇ ಸಲ್ಲಬೇಕು. ಅವರು ವಿಶ್ವದರ್ಜೆಯ ಬೌಲರ್, ಈ ಪೀಳಿಗೆಯ ಅತ್ಯುತ್ತಮ ಬೌಲರ್... ಇಂದು ಕೂಡ ಅವರು ತಮ್ಮ ಅಮೋಘ ದಾಳಿಯ ಮೂಲಕ ತಂಡಕ್ಕೆ ನರೆವಾದರು. ವಾಸ್ತವವಾಗಿ ಈ ಪ್ರಶಸ್ತಿ ಅವರಿಗೇ ಸಲ್ಲಬೇಕು’.

ಟಿ20 ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಗೆದ್ದ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಸಂಜು ಸ್ಯಾಮ್ಸನ್ ಹೇಳಿದ ಮಾತಿದು. ಅಷ್ಟಕ್ಕೂ ಅವರು ಹೇಳಿದ್ದು ಬೇರೆ ಯಾರ ಬಗ್ಗೆಯೂ ಅಲ್ಲ ಭಾರತ ತಂಡದ ತಾರಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಕುರಿತು.

ಸೂಪರ್–8ರ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಸಂಜು ಅವರು, ನಿನ್ನೆ (ಗುರುವಾರ) ನಡೆದ ಪಂದ್ಯದಲ್ಲೂ ಸ್ಫೋಟಕ 89 ರನ್ ಗಳಿಸಿ ಸತತ ಎರಡನೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಪಂದ್ಯಶ್ರೇಷ್ಠ ಪ್ರಶಸ್ತಿಯ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್, ಈ ಪ್ರಶಸ್ತಿ ಬುಮ್ರಾ ಅವರಿಗೆ ಸಲ್ಲಬೇಕಿತ್ತು ಎಂದು ಹೇಳಿದ್ದಾರೆ.
.T20 World Cup: ಸಂಜು ಸ್ಯಾಮ್ಸನ್ಗಾಗಿ ನಾನು ನೋವು ಅನುಭವಿಸಿದ್ದೆ ಎಂದ ಕೈ ಸಂಸದ.T20 World Cup: ಹೋರಾಡಿ ಸೋತ ಇಂಗ್ಲೆಂಡ್; ಸತತ ಎರಡನೇ ಸಲ ಫೈನಲ್ ತಲುಪಿದ ಭಾರತ.
ಸ್ಯಾಮ್ಸನ್ ಹೀಗಂದಿದ್ದು ಯಾಕೆ?

254 ರನ್ಗಳ ಬೃಹತ್ ಗುರಿ ಬೆನ್ನಟಿದ ಇಂಗ್ಲೆಂಡ್ ತಂಡವು 16ನೇ ಓವರ್ ಮುಕ್ತಾಯದ ವೇಳೆಗೆ 209 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಇಂಗ್ಲೆಂಡ್ ಗೆಲುವಿಗೆ 18 ಎಸೆತಗಳಲ್ಲಿ 45 ರನ್ಗಳ ಅಗತ್ಯವಿತ್ತು. ಆದರೆ, 17 ಓವರ್ ಬೌಲಿಂಗ್ ಬಂದ ಬುಮ್ರಾ ಅವರು ಕೇವಲ 6 ರನ್ ನೀಡಿ ಇಂಗ್ಲೆಂಡ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು.

ಇದು ಮಾತ್ರವಲ್ಲ, 15 ಓವರ್ನಲ್ಲಿ ಕೂಡ ಕೇವಲ 8 ರನ್ ಬಿಟ್ಟುಕೊಟ್ಟು ಇಂಗ್ಲೆಂಡ್ ತಂಡದ ಮೇಲೆ ಒತ್ತಡ ಹೇರಿದರು. ಈ ಎರಡು ಓವರ್ಗಳು ಭಾರತದ ಗೆಲುವಿಗೆ ನಿರ್ಣಾಯಕವಾದವು. ಹಾಗಾಗಿಯೇ ಸಂಜು ಸ್ಯಾಮ್ಸನ್ ಈ ಪ್ರಶಸ್ತಿ ಬುಮ್ರಾ ಅವರಿಗೆ ಸಲ್ಲಬೇಕಿತ್ತು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.