ನವದೆಹಲಿ: ಇಲ್ಲಿ ಮುಕ್ತಾಯಗೊಂಡ ಐಪಿಎಲ್ನ 48ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೈನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವು ಸಾಧಿಸಿದೆ. ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ ಸಂಜು ಸ್ಯಾಮ್ಸನ್ ಮಾತನಾಡಿ, ‘ವೈಯಕ್ತಿಕ ಮೈಲುಗಲ್ಲಿಗಿಂತ ತಂಡದ ಗೆಲುವು ಮುಖ್ಯ’ ಎಂದಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 155 ರನ್ ಗಳಿಸಿತ್ತು. ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸುಲಭ ಜಯ ಸಾಧಿಸಿತು. ಆರಂಭಿಕ ಆಟಗಾರ ಸ್ಯಾಮ್ಸನ್ 52 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 87 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಗೆಲುವಿನ ಬಳಿಕ ಮಾತನಾಡಿದ ಸ್ಯಾಮ್ಸನ್ ‘ ನಾನು ಯಾವಾಗಲೂ ಶಾಂತವಾಗಿಯೇ ಇರುತ್ತೇನೆ. ಜನರು ಇತ್ತೀಚೆಗೆ ನನ್ನನ್ನು ಹೆಚ್ಚು ಗಮನಿಸುತ್ತಿದ್ದಾರೆ. ಹಾಗಾಗಿ ಸಂಜು ತುಂಬಾ ಶಾಂತ ವ್ಯಕ್ತಿ ಎಂದು ಅವರು ಹೇಳುತ್ತಾರೆ’ ಎಂದು ಹೇಳಿದ್ದಾರೆ.

ಶತಕದ ಕುರಿತು ಮಾತನಾಡಿರುವ ಸಂಜು ‘ ಈ ಪಂದ್ಯದಲ್ಲಿ ನನಗೆ ಶತಕವನ್ನು ದಾಖಲಿಸಲು ಅವಕಾಶವಿತ್ತು. ಆದರೆ ಸ್ವಾರ್ಥಿಯಾಗಬೇಕಿತ್ತು. ನನಗೆ ಶತಕಕ್ಕಿಂತ ತಂಡದ ಗೆಲುವು ಮುಖ್ಯವಾಗಿತ್ತು. ನಾನು ನಿಜವಾಗಿಯೂ ಈ ಪಂದ್ಯವನ್ನು ಆನಂದಿಸಿದ್ದೇನೆ. ಮಾತ್ರವಲ್ಲದೆ ಕೊನೆಯವರೆಗೂ ಇದ್ದು ಆಟ ಮುಗಿಸಿರುವುದು ತೃಪ್ತಿ ನೀಡುತ್ತದೆ’ ಎಂದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಪಂದ್ಯವನ್ನು ಗೆಲ್ಲುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ. ಮಾತ್ರವಲ್ಲದೆ ಪ್ಲೇ–ಆಪ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.