ಕುಂಬ್ಳೆ, ದ್ರಾವಿಡ್ ಹೋರಾಟ ಸ್ಮರಿಸಿದ ಸೆಹ್ವಾಗ್

ಶನಿವಾರ, ಏಪ್ರಿಲ್ 20, 2019
27 °C

ಕುಂಬ್ಳೆ, ದ್ರಾವಿಡ್ ಹೋರಾಟ ಸ್ಮರಿಸಿದ ಸೆಹ್ವಾಗ್

Published:
Updated:
Prajavani

ನವದೆಹಲಿ: ದೇಶದ ಕ್ರಿಕೆಟಿಗರು ಈಗ ಆರ್ಥಿಕವಾಗಿ ಸದೃಢರಾಗಲು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರ ಹೋರಾಟವೇ ಕಾರಣ ಎಂದು ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

‘ಬಿಸಿಸಿಐನ ವರಮಾನ ಹಂಚಿಕೆಗೆ ಸಂಬಂಧಿಸಿದಂತೆ ಈ ಮೂವರು ಹೋರಾಡದಿದ್ದರೆ ಇಂದು ನಮ್ಮೆಲ್ಲರ ಸ್ಥಿತಿ ಏನಾಗಿರುತ್ತಿತ್ತೋ ಗೊತ್ತಿಲ್ಲ’ ಎಂದು ನ್ಯೂ ಕಬಡ್ಡಿ ಫೆಡರೇಷನ್ ಆಯೋಜಿಸುತ್ತಿರುವ ಇಂಡೊ ಇಂಟರ್‌ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ ಕುರಿತ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

'ಬಿಸಿಸಿಐ ವರಮಾನದ ಹಂಚಿ ಕೆಯಲ್ಲಿ ಕ್ರಿಕೆಟ್ ಆಟಗಾರರ ಪಾಲು ಹೆಚ್ಚಿರಬೇಕು ಎಂದು ಈ ಮೂವರು ವಾದಿಸಿದ್ದರು. ಬಿಸಿಸಿಐನ ಟಿವಿ ಪ್ರಸಾರದ ಹಕ್ಕುಗಳ ಒಪ್ಪಂದದಲ್ಲಿ ಆಟಗಾರರ ಹಿತಾಸಕ್ತಿಯೂ ಇರಬೇಕೆನ್ನುವ ಕನಸಿನ ಬೀಜ ಬಿತ್ತಿದ್ದು ಸಚಿನ್, ಗಂಗೂಲಿ, ದ್ರಾವಿಡ್ ಮತ್ತು ಕುಂಬ್ಳೆ' ಎಂದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !