ಸೋಮವಾರ, ಜೂಲೈ 6, 2020
22 °C
ನೂತನ ಅಯ್ಕೆ ಸಮಿತಿಗಳ ಪಟ್ಟಿ ಪ್ರಕಟಿಸಿದ ಕೆಎಸ್‌ಸಿಎ

ಫಜಲ್ ಖಲೀಲ್, ಜಯಶ್ರೀಗೆ ಸೀನಿಯರ್ ತಂಡಗಳ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹಿರಿಯ ಕ್ರಿಕೆಟಿಗರಾದ ಫಜಲ್ ಆರ್ ಖಲೀಲ್ ಮತ್ತು ಡಿ ಜಯಶ್ರಿ ಅವರನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಕ್ರಮವಾಗಿ ರಾಜ್ಯ ಸೀನಿಯರ್ ಪುರುಷ ಮತ್ತು ಮಹಿಳಾ ತಂಡಗಳ ಆಯ್ಕೆ ಸಮಿತಿ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.

ಶುಕ್ರವಾರ ನೂತನ ಸಮಿತಿಗಳ ಪಟ್ಟಿಯನ್ನು ಕೆಎಸ್‌ಸಿಎ ಪ್ರಕಟಿಸಿದೆ. ಸುಮಾರು ಮೂರು ವರ್ಷಗಳ ಕಾಲ ಸೀನಿಯರ್ ತಂಡದ ಆಯ್ಕೆ ಸಮಿತಿಯ ನೇತೃತ್ವ ವಹಿಸಿದ್ದ ರಘುರಾಮ್ ಭಟ್ ಅವರಿಗೆ ಮತ್ತೊಂದು ಅವಕಾಶ ಲಭಿಸಿಲ್ಲ. ‌ಆಗ ಫಜಲ್ ಸದಸ್ಯರಾಗಿದ್ದರು. ಹೊಸ ಸಮಿತಿಯಲ್ಲಿ ಬಿ.ಸಿದ್ಧರಾಮು, ಆನಂದ ಪಿ. ಕಟ್ಟಿ ಮತ್ತು ರಮೇಶ್ ಹೆಜ್ಮಾಡಿ ಸದಸ್ಯರಾಗಿದ್ದಾರೆ. ಆನಂದ ಕಟ್ಟಿಯವರನ್ನು 19 ವರ್ಷದೊಳಗಿನವರ ಮುಖ್ಯಸ್ಥರನ್ನಾಗಿಯೂ ನೇಮಕ ಮಾಡಲಾಗಿದೆ.

ವಿವಿಧ ವಯೋಮಿತಿಯ ಆಯ್ಕೆ ಸಮಿತಿಗಳು
ಸೀನಿಯರ್ ತಂಡ: ಫಜಲ್ ಆರ್‌ ಖಲೀಲ್ (ಮುಖ್ಯಸ್ಥ), ಬಿ.ಸಿದ್ಧರಾಮು, ಆನಂದ ಪಿ ಕಟ್ಟಿ, ರಮೇಶ್ ಹೆಜ್ಮಾಡಿ (ಸದಸ್ಯರು). ಕೆ. ಯರೇಗೌಡ (ಮುಖ್ಯ ಕೋಚ್), ಎಸ್‌. ಅರವಿಂದ್ (ಬೌಲಿಂಗ್ ಕೋಚ್).

23 ವರ್ಷದೊಳಗಿನವರ ತಂಡ: ಫಜಲ್ ಖಲೀಲ್ (ಮುಖ್ಯಸ್ಥ), ಕೆ.ಎಲ್. ಅಶ್ವಥ್, ತೇಜಪಾಲ್ ಕೋಠಾರಿ, ರಘುತ್ತಮ ನವಲಿ (ಸದಸ್ಯರು), ಎಂ.ಎಸ್‌. ರವೀಂದ್ರ (ಮೈಸೂರು ವಲಯ ನಿಮಂತ್ರಕರು),  ದೀಪಕ್ ಚೌಗುಲೆ (ಬ್ಯಾಟಿಂಗ್ ಕೋಚ್), ಗೋಪಾಲಕೃಷ್ಣ ಚೈತ್ರಾ (ಬೌಲಿಂಗ್ ಕೋಚ್).

19 ವರ್ಷದೊಳಗಿನವರು: ಆನಂದ ಪಿ ಕಟ್ಟಿ (ಮುಖ್ಯಸ್ಥರು), ಎ.ಆರ್. ಮಹೇಶ್, ಸಿ. ರಾಘವೇಂದ್ರ, ಸಂತೋಷಕುಮಾರ್  ಒಡೆಯರಾಜ್ (ಸದಸ್ಯರು), ನಿಖಿಲ್ ಹಳದಿಪುರ (ಬ್ಯಾಟಿಂಗ್ ಕೋಚ್), ಎನ್.ಸಿ. ಅಯ್ಯಪ್ಪ (ಬೌಲಿಂಗ್ ಕೋಚ್).

16 ಮತ್ತು 14 ವರ್ಷದೊಳಗಿನವರು:ಎಚ್‌. ಸುರೇಂದ್ರ (ಮುಖ್ಯಸ್ಥರು), ಎಂ.ವಿ. ಪ್ರಶಾಂತ್, ಸಿ. ಚಂದ್ರಶೇಖರ್, ಎಸ್. ಪ್ರಕಾಶ್ (ಸದಸ್ಯರು), ಕೆ. ಶಶಿಧರ್ (ತುಮಕೂರು ವಲಯ ಆಮಂತ್ರಿತರು). ಸಿ. ರಘು ಮತ್ತು ರಾಜಶೇಖರ್ ಡಿ ಶಾನಭಾಳ್ (ಕೋಚ್‌ಗಳು).‌

ಸೀನಿಯರ್ ಮಹಿಳಾ ತಂಡ: ಡಿ. ಜಯಶ್ರೀ (ಮುಖ್ಯಸ್ಥೆ), ಪುಷ್ಪಾ ಜಿ ಕುಮಾರ್, ಪಿ.ಜೆ. ಹೇಮಲತಾ (ಸದಸ್ಯರು), ಮಮತಾ ಮಾಬೆನ್ (ಕೋಚ್).

ಜೂನಿಯರ್ ಬಾಲಕಿಯರ ತಂಡ: ಚಂದ್ರಿಕಾ ಶ್ರೀಧರ್ (ಮುಖ್ಯಸ್ಥರು), ಆಶ್ರಯಿ ಎನ್‌ ರಾಮ್, ಅನುರಾಧಾ ಪ್ರಸಾದ್, ನಿವೇದಿತಾ ರೇಷ್ಮೆ (ಸದಸ್ಯರು). ಲಕ್ಷ್ಮೀ ಹರಿಹರನ್ (ಕೋಚ್).

* ಎಲ್ಲ ಸಮಿತಿಗಳಿಗೂ ಸಂತೋಷ್‌ ಮೆನನ್ ಅವರು ಕಾರ್ಯದರ್ಶಿ/ನಿಮಂತ್ರಕರಾಗಿ ಕಾರ್ಯನಿರ್ವಹಿಸುವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.